Advertisement

ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಭಟ್ಕಳದ ಮನೋಜ ನಾಯ್ಕ ಇನ್ನಿಲ್ಲ

09:28 PM Sep 21, 2021 | Team Udayavani |

ಭಟ್ಕಳ: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಮನೋಜ ನಾಯ್ಕ (31) ಅವರು ಮಂಗಳವಾರ ಕುಂದಾಪುರದಲ್ಲಿ ಮೃತಪಟ್ಟಿದ್ದಾರೆ.

Advertisement

ಭಟ್ಕಳದಿಂದ ಕುಂದಾಪುರಕ್ಕೆ ಹೋಗಿದ್ದ ಇವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.  ಭಟ್ಕಳದ ಪರಶುರಾಮ ತಂಡದಲ್ಲಿಯ ಉತ್ತಮ ಆಟಗಾರರಲ್ಲಿ ಓರ್ವರಾದ ಇವರು ತಮ್ಮ ಉತ್ತಮ ಆಟದಿಂದ ಎಂತಹ ಎದುರಾಳಿ ತಂಡವನ್ನಾದರೂ ಮಣಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದ್ದರು

ಸಂತಾಪ: ಉತ್ತಮ ಕಬಡ್ಡಿ ಆಟಗಾರ ಮನೋಜ ನಾಯ್ಕ ಇವರ ಅಕಾಲಿಕ ನಿದನಕ್ಕೆ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next