Advertisement
ಸೋಮವಾರ ಪಟ್ಟಣದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿಯೇ ಅತಿ ಹೆಚ್ಚು ನೇಕಾರರನ್ನು ಹೊಂದಿರುವ ಜಿಲ್ಲೆ ಬಾಗಲಕೋಟೆ. ಅದರಲ್ಲಿಯೂ ವಿಶೇಷವಾಗಿ ತೇರದಾಳ ಮತಕ್ಷೇತ್ರದಲ್ಲಿ ಅತಿ ಹೆಚ್ಚು ನೇಕಾರ ಮತದಾರರಿದ್ದು, ತೇರದಾಳ ಮತಕ್ಷೇತ್ರ “ನೇಕಾರ ಕ್ಷೇತ್ರ”ಎಂದೇ ಬಿಂಬಿತವಾಗಿದೆ ಎಂದರು.
Related Articles
Advertisement
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದೀನ ದಯಾಳ ಉಪಾಧ್ಯಾಯರ ಆಶಯದಂತೆ ಸಾಮಾಜಿಕ ನ್ಯಾಯಕ್ಕೆ ಬದ್ದರಾದ ಬಿಜೆಪಿಯ ಜಿಲ್ಲೆಯ, ರಾಜ್ಯ ಮತ್ತು ರಾಷ್ಟ್ರಿಯ ನಾಯಕರು ಹಾಗೂ ಸಂಘಟನೆಯ ಪ್ರಮುಖರು ಹಿಂದುಳಿದ ನೇಕಾರ ಸಮಾಜದವನಾದ ನಾನು ಪಕ್ಷದಲ್ಲಿ ನಿರ್ವಹಿಸಿದ ಜವಾಬ್ದಾರಿಯನ್ನು ಪರಿಗಣಿಸಿ “ನೇಕಾರ ಮತಕ್ಷೇತ್ರ”ಎಂದು ಬಿಂಬಿತವಾದ ತೇರದಾಳ ಮತಕ್ಷೇತ್ರದಿಂದ ಸ್ಪರ್ಧಿಸಲು ತನಗೆ ಅವಕಾಶ ಮಾಡಿ ಕೊಡುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದು ವೇಳೆ ಪಕ್ಷದ ಟಿಕೇಟ್ ಸಿಗದಿದ್ದರೇ ನಿಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇರುತ್ತೇನೆ ಎಂದರು.
ನೇಕಾರ ಮುಖಂಡ ಮಹಾಲಿಂಗಪ್ಪ ಬಸಪ್ಪ ಕಲ್ಲೋಳ್ಳಿ ಮಾತನಾಡಿ, ನಮ್ಮ ಕುರುಹಿನಶೆಟ್ಟಿ ನೇಕಾರ ಸಮುದಾಯವು ಮೊದಲಿನಿಂದ ಬಿಜೆಪಿ ಪಕ್ಷಕ್ಕೆ ನಿಷ್ಟಾವಂತರಾಗಿದ್ದೇವೆ. ಈ ಕ್ಷೇತ್ರದಲ್ಲಿ ನೇಕಾರ ಸಂಖ್ಯೆ ಅಧಿಕವಾಗಿರುವದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ನೇಕಾರರಿಗೆ ಅವಕಾಶ ನೀಡಬೇಕು ಎಂದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಾವು ಹಾಲಿ ಶಾಸಕ ಸಿದ್ದು ಸವದಿ ಅವರ ವಿರೋಧಿಗಳಲ್ಲ, ನಮ್ಮವರೇ ಜಾಸ್ತಿ ಇರುವ ತೇರದಾಳ ಮತಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ನೇಕಾರ ಸಮುದಾಯದ ಸ್ಥಳೀಯ ಮುಖಂಡ ಮನೋಹರ ಶಿರೋಳ ಅವರಿಗೆ ಈ ಬಾರಿಯ ಬಿಜೆಪಿ ಟಿಕೇಟ್ ನೀಡಬೇಕೆಂದು ಪಕ್ಷದ ಮುಖಂಡರಿಗೆ ವಿನಂತಿಸಿಕೊಳ್ಳುತ್ತೇವೆ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಹಣಮಂತ ಜಮಾದಾರ ಮಾತನಾಡಿ, 2008 ರಲ್ಲಿ ರಚನೆಯಾದ ತೇರದಾಳ ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಜಮಖಂಡಿ, ಬೆಂಗಳೂರು ಸೇರಿದಂತೆ ಹೊರಗಿನವರೇ ಶಾಸಕರಾಗಿದ್ದಾರೆ. ಈ ಬಾರಿ ಸ್ಥಳೀಯ ಅಭ್ಯರ್ಥಿ, ನೇಕಾರ ಮುಖಂಡ ಮನೋಹರ ಶಿರೋಳ ಅವರಿಗೆ ಅವಕಾಶ ನೀಡಬೇಕೆಂದು ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಮುಖಂಡರಿಗೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೇಕಾರ ಸಮುದಾಯದ ಮುಖಂಡರಾದ ಜಿ.ಎಸ್.ಬರಗಿ, ಸುದರ್ಶನ ಸುಣಧೋಳಿ ಸೇರಿದಂತೆ ಹಲವರು ಇದ್ದರು.