ಮುಂಬಯಿ: ನಾಟಕ ಬೇರೆಯಲ್ಲ, ನಮ್ಮ ಜೀವನ ಬೇರೆಯಲ್ಲ. ದೈನಂದಿನ ಬದುಕಿನಲ್ಲಿ ನಡೆಯುವ ಬೇರೆ ಬೇರೆ ವಿದ್ಯಮಾನಗಳು, ಈಡೇರದ ಕನಸುಗಳು ನಾಟಕದ ವಸ್ತುಗಳಾಗಿ ಗಮನ ಸೆಳೆಯುತ್ತವೆ.ಅವಾಸ್ತವ ಬದುಕಿಗೆ ಕನ್ನಡಿ ಹಿಡಿಯುವ ಸಂಗತಿಗಳು ನಾಟಕ ರಂಗದಲ್ಲಿ ಬಂದು ಹೋಗುತ್ತವೆ. ಈ ಕಾರಣದಿಂದ ರಂಗಭೂಮಿಯನ್ನು ನಮ್ಮ ಜೀವನ ನಾಟಕದ ಪ್ರಯೋಗಶಾಲೆ ಎನ್ನಬಹುದು ಎಂದು ಯûಾಂಗಣ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿ¨ªಾರೆ.
ರಮೇಶ್-ಪ್ರಕಾಶ್ ಸಾಂಸ್ಕೃತಿಕ ಸಂಘಟನೆಯು ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಭ್ರಮ ಮತ್ತು ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತುಳು ಚಲನಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್ ಅವರು ಮಾತನಾಡಿ ತುಳು ನಾಟಕ, ಕಿರುತೆರೆ ಧಾರಾವಾಹಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಮೇಶ್ ರೈ ಮತ್ತು ಶಿವಪ್ರಕಾಶ್ ಪೂಂಜ ಅವರು ಕಳೆದ ಒಂಬತ್ತು ವರ್ಷಗಳಿಂದ ತಮ್ಮ ಸಂಘಟನೆಯ ಮೂಲಕ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿ¨ªಾರೆ. ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ಸಾಗಲು ಇಂತಹ ಕಲಾವಿದರೊಂದಿಗೆ ಕಲಾಭಿಮಾನಿಗಳು ಉದಾರವಾಗಿ ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಂಬಯಿ ರಂಗಭೂಮಿಯ ಪ್ರತಿಭಾವಂತ ನಟ-ನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ ಮತ್ತು ಹಿರಿಯ ರಂಗ ಕಲಾವಿದ ರಘುರಾಮ ಶೆಟ್ಟಿ ಬೆಳ್ತಂಗಡಿ ಅವರನ್ನು ರಮೇಶ್-ಪ್ರಕಾಶ್ ಬಳಗದ ವತಿಯಿಂದ ಸಮ್ಮಾನಿಸಲಾಯಿತು. ಕಲಾವಿದರನ್ನು ಸಮ್ಮಾನಿಸಿ ಮಾತ ನಾಡಿದ ಲೀಡ್ಸ್ ಗ್ರೂಪ್ ಮಾಲಕ ಲಯನ್ ಕಿಶೋರ್ ಡಿ. ಶೆಟ್ಟಿ ಅವರು ಅವರು ಮಾತನಾಡಿ, ಜಿÇÉೆಯ ರಂಗಾಸಕ್ತರ ಜೊತೆಗೆ ಮುಂಬಯಿಯ ತುಳು-ಕನ್ನಡಿಗರು ಕರಾವಳಿ ಮೂಲದ ನಾಟಕ ಮತ್ತು ಚಲನಚಿತ್ರಗಳ ಪ್ರಚಾರ-ಪ್ರಸಾರಕ್ಕೆ ಅಪಾರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ನುಡಿದರು.
ಕೊಡಗು ಜಿÇÉಾ ಬಿಜೆಪಿ ವಕ್ತಾರ ಬಿ. ರತ್ನಾಕರ ಶೆಟ್ಟಿ, ದೇರಳಕಟ್ಟೆ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬ್ರೈಟ್ ವೇ ಇಂಡಿಯಾದ ಡಾ| ಹರ್ಷ ಕುಮಾರ್ ರೈ ಮಾಡಾವು, ರತ್ನಗಿರಿಯ ಉದ್ಯಮಿ ಚಿತ್ತರಂಜನ್ ಶೆಟ್ಟಿ ನುಳಿಯಾಲುಗುತ್ತು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಜಿÇÉಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಉಮಿಲ್ ತುಳು ಸಿನೆಮಾದ ನಿರ್ಮಾಪಕ ಕರುಣಾಕರ ಶೆಟ್ಟಿ, ವಿದ್ಯಾಮಾತಾ ಫೌಂಡೇಶನ್‌ನ ಭಾಗೆÂàಶ್ ರೈ, ಬಂಟ್ವಾಳ ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ನ್ಯಾಯವಾದಿ ಮೋಹನ್ ದಾಸ್ ರೈ, ಸಿಟಿ ಲಿಂಕ್ಸ್‌ನ ವಾಸುದೇವ್, ಬಂಟ್ವಾಳ ಚಿನ್ನರ ಲೋಕಸೇವಾ ಟ್ರಸ್ಟ್ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ, ಚಲನಚಿತ್ರ ನಟ ಸುಭಾಸ್ ಆರ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಶುಭಾಶಂಸನೆ ಮಾಡಿದರು.
ರಂಗಭೂಮಿ ಮತ್ತು ಚಲನಚಿತ್ರ ನಟ ರಮೇಶ್ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ರಂಗನಟ ಶಿವಪ್ರಕಾಶ್ ಪೂಂಜ ಹರೇಕಳ ವಂದಿಸಿದರು. ಕಲಾವಿದೆ ಪ್ರಮೀಳಾ ದೀಪಕ್ ಪೆರ್ಮುದೆ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಚಿನ್ನರ ಲೋಕಸೇವಾ ಟ್ರಸ್ಟ್ ಬಂಟ್ವಾಳ ಇವರಿಂದ ಚೆಂಡೆವಾದನ, ಸಂಗೀತ ರಸಮಂಜರಿ ಹಾಗೂ ವಿಧಾತ್ರೀ ಕಲಾವಿದರು ಕೈಕಂಬ ಇವರಿಂದ ನಮ್ಮ ಮರ್ಯಾದಿದ ಪ್ರಶ್ನೆ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.