Advertisement

ವಿದ್ಯಾರ್ಥಿಗಳಿಗೆ ಸಂಸ್ಕಾರ ಮುಖ್ಯ: ಬಾಲದಂಡಿ

03:21 PM Aug 30, 2020 | Suhan S |

ಮೂಡಲಗಿ: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವು ಅತೀ ಮುಖ್ಯ. ಮಕ್ಕಳಲ್ಲಿ ಉತ್ತಮ ಆಚಾರ-ವಿಚಾರ, ಗುರು-ಹಿರಿಯರಲ್ಲಿ ಭಕ್ತಿ ಕಲಿಸುವ ಮೂಲಕ ಶಿಕ್ಷಕರೊಂದಿಗೆ ಪಾಲಕರು ಕೈ ಜೋಡಿಸಬೇಕೆಂದು ಪಿಎಸ್‌ಐ ಎಚ್‌.ವೈ. ಬಾಲದಂಡಿ ಹೇಳಿದರು.

Advertisement

ತಾಲೂಕಿನ ತುಕ್ಕಾನಟ್ಟಿ ಕನ್ನಡ ಹಿರಿಯ ಪ್ರಾಥಮಿಕ ಶಿಕ್ಷಕರು ಜನವಸತಿ ಪ್ರದೇಶಗಳಲ್ಲಿ ನಡೆಸುತ್ತಿರುವ ವಠಾರ ಓದು ವಿದ್ಯಾಗಮ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದ ಅವರು, ಕೋವಿಡ್ ಹರಡುತ್ತಿರುವ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರದ ಉದ್ದೇಶವನ್ನು ಅನುಸರಿಸುತ್ತಿರುವ ಇಲ್ಲಿನ ಶಿಕ್ಷಕರು ಸುಮಾರು 700 ವಿದ್ಯಾರ್ಥಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸುತ್ತಿರುವುದು ಶ್ಲಾಘನೀಯ. ಅರಬಾಂವಿ ಕ್ಷೇತ್ರದ ಶಾಸಕರ ಶೈಕ್ಷಣಿಕ ಕಾಳಜಿಯಿಂದ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ ಎಂದರು.

ಸ್ಥಳೀಯ ತಾಪಂ ಸದಸ್ಯರಾದ ಪರಶುರಾಮ ಗದಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪಾ ಹಮ್ಮನವರ, ಮಾಜಿ ಉಪಾಧ್ಯಕ್ಷ ಶಿವಪ್ಪಾ ಮರ್ದಿ, ಪ್ರಗತಿ ಪರ ರೈತ ರಾಮಪ್ಪ ಉಪ್ಪಾರ, ಪ್ರಧಾನ ಗುರುಗಳಾದ ಎ.ವ್ಹಿಗಿರೆನ್ನವರ, ಶಿಕ್ಷಕರಾದ ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್‌, ಶಂಕರ ಲಮಾಣಿ. ಶೀಲಾ ಕುಲಕರ್ಣಿ, ಕಿರಣ ಭಜಂತ್ರಿ, ಸಂಗೀತಾ ತಳವಾರ, ಮಂಜುನಾಥ ಕಮ್ಮಾರ, ಮಹಾದೇವ ಗೋಮಾಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next