Advertisement

ಸ್ಟಾರ್ಟಪ್‌ ಸಂಸ್ಕೃತಿಯು ಉಜ್ವಲ ಭವಿಷ್ಯದ ಸಂಕೇತ 

11:33 PM Aug 29, 2021 | Team Udayavani |

ಹೊಸದಿಲ್ಲಿ: “ಭಾರತದಲ್ಲೀಗ ಸ್ಟಾರ್ಟಪ್‌ ಸಂಸ್ಕೃತಿಯು ರೋಮಾಂಚನಕಾರಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಸಣ್ಣ ಸಣ್ಣ ನಗರಗಳ ಯುವಕರೂ ಇತ್ತೀಚೆಗೆ ನವೋದ್ಯ ಮಗಳತ್ತ ಮುಖಮಾಡುತ್ತಿದ್ದಾರೆ. ಇದು ಭಾರತದ ಉಜ್ವಲ ಭವಿಷ್ಯದ ಸಂಕೇತ.’

Advertisement

ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್‌ ಕೀ ಬಾತ್‌ನ 80ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, “ಯುವಜನರು ರಿಸ್ಕ್ ತೆಗೆದು ಕೊಳ್ಳಲು ಸಿದ್ಧರಾಗಿ ಸ್ಟಾರ್ಟಪ್‌ಗ್ಳನ್ನು ಆರಂಭಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇವರು ದೇಶದ ಆಟಿಕೆ ಕ್ಷೇತ್ರದ ಬಗ್ಗೆ ಚರ್ಚಿಸುತ್ತಿದ್ದರು. ಆಟಿಕೆಗಳ ತಯಾರಿಕೆ ಪ್ರಕ್ರಿಯೆ, ವೈವಿಧ್ಯ ಮತ್ತು ತಂತ್ರಜ್ಞಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಿದ್ದರು. ಇವೆಲ್ಲವೂ ಉತ್ತಮ ಭವಿಷ್ಯದ ಸುಳಿವು ನೀಡಿವೆ’ ಎಂದು ಹೇಳಿದ್ದಾರೆ.

ಬಾಹ್ಯಾಕಾಶ ವಲಯದ ಸುಧಾರ ಣೆಯು ಜನರನ್ನು ಆಕರ್ಷಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ವಿಶ್ವವಿದ್ಯಾ ನಿಲಯಗಳ ವಿದ್ಯಾರ್ಥಿಗಳು, ಲ್ಯಾಬ್‌ಗಳು ಹಾಗೂ ಇತರ ಕ್ಷೇತ್ರಗಳ ಯುವಕರು ಗಣನೀಯ ಸಂಖ್ಯೆಯ ಉಪಗ್ರಹಗಳನ್ನು ಅಭಿವೃದ್ಧಿಪಡಿ ಸಲಿ ದ್ದಾರೆ ಎಂಬ ನಂಬಿಕೆ ಯಿದೆ ಎಂದೂ ಮೋದಿ ಹೇಳಿದ್ದಾರೆ.

ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ, ಕ್ರೀಡಾ ಸಂಸ್ಕೃತಿಯ ಕುರಿತು ಪ್ರಸ್ತಾವಿಸಿದ ಪ್ರಧಾನಿ ಮೋದಿ, ದೇಶವಾ ಸಿ ಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಹೇಳಿದ್ದಾರೆ. ದೇಶದಲ್ಲೇ ಮೊದಲ “ವಾಟರ್‌ ಪ್ಲಸ್‌ ಸಿಟಿ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇಂದೋರ್‌ನ ಜನತೆಯನ್ನು ಶ್ಲಾ ಸಿದ್ದಾರೆ.

ಪರಂಪರೆಯನ್ನು ಉಳಿಸಿಕೊಳ್ಳೋಣ: ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ತಣ್ತೀಶಾ ಸ್ತ್ರವನ್ನು ಇಡೀ ಜಗತ್ತೇ ಕೊಂಡಾಡು ತ್ತಿದೆ. ಈ ಶ್ರೇಷ್ಠ ಪರಂಪರೆಯನ್ನು ಉಳಿಸಿಕೊ ಳ್ಳುತ್ತಾ, ಮುಂದಕ್ಕೆ ಕೊಂಡೊಯ್ಯುವುದು ಜನರೆಲ್ಲರ ಜವಾಬ್ದಾರಿಯಾಗಿದೆ. ಯಾವುದು ತಾತ್ಕಾಲಿಕವೋ ಅದನ್ನು ಅಲ್ಲೇ ಬಿಟ್ಟು, ಯಾವುದು ಕಾಲಾತೀತವೋ ಅವು ಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ನಾವೆ ಲ್ಲರೂ ನಮ್ಮ ಹಬ್ಬಗಳನ್ನು ಆಚರಿ ಸೋಣ, ಅವುಗಳ ವೈಜ್ಞಾನಿಕ ಅರ್ಥವನ್ನು ಕಂಡು ಕೊಳ್ಳೋಣ. ಪ್ರತಿಯೊಂದು ಹಬ್ಬಗಳ ಹಿಂದೆಯೂ ಆಳವಾದ ಸಂದೇಶವಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವಕರ್ಮ ಪೂಜೆಯೂ ನಡೆಯ ಲಿದೆ. ಇದು ವಿವಿಧ ಕೌಶಲಗಳಿಗೆ ಗೌರವ ಅರ್ಪಿಸುವ ಭಾರತದ ಪ್ರಾಚೀನ ಪ್ರಕ್ರಿಯೆ ಯಾ ಗಿದೆ ಎಂದೂ ಮೋದಿ ತಿಳಿಸಿದ್ದಾರೆ.

Advertisement

ಏಕತೆಗೆ ಸಂಸ್ಕೃತದ ಬಲ :

ಸಂಸ್ಕೃತವನ್ನು ಸಂರಕ್ಷಿಸುವ ಕೆಲಸವಾ ಗಬೇಕು ಎಂದ ಮೋದಿ, ಈ ಭಾಷೆಯು ಜ್ಞಾನವನ್ನು ಪೋಷಿಸುವುದು ಮಾತ್ರ ವಲ್ಲ, ರಾಷ್ಟ್ರೀಯ ಏಕತೆಯನ್ನೂ ಬಲಿಷ್ಠ ಗೊಳಿಸುತ್ತದೆ ಎಂದಿದ್ದಾರೆ. ಗುಜ ರಾತ್‌ನ ಕೆವಾಡಿಯಾದಲ್ಲಿನ ಎಫ್ಎಂ ರೇಡಿಯೋ ಸ್ಟೇಶನ್‌ನಲ್ಲಿ ರೇಡಿಯೋ ಜಾಕಿಗಳು ಸಂಸ್ಕೃತ ಭಾಷೆಗೆ ಉತ್ತೇಜನ ನೀಡುತ್ತಿರುವುದನ್ನೂ ಮೋದಿ ಪ್ರಸ್ತಾ ವಿಸಿದ್ದಾರೆ. ಜತೆಗೆ ಭಕ್ತಿಯ ಕಲೆಯಲ್ಲಿ ಪರಿಣತರಾಗಿರುವ ಇಸ್ಕಾನ್‌ನ ಜದು ರಾಣಿ ದಾಸಿ (ಅಮೆರಿಕದ ಮಹಿಳೆ) ಅವರೊಂದಿಗೆ ಇತ್ತೀಚೆಗೆ ನಡೆಸಿರುವ ಸಂಭಾಷಣೆಯ ಆಡಿಯೋವನ್ನೂ ಮೋದಿ ಪ್ಲೇ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next