Advertisement

ಅಸ್ಸಾಂ :  ಬುದ್ಧಿವಂತಿಕೆಯಿಂದ ಮತವನ್ನು ಚಲಾಯಿಸಿ : ಮನಮೋಹನ್ ಸಿಂಗ್

03:58 PM Mar 26, 2021 | Team Udayavani |

ನವ ದೆಹಲಿ : ಚುನಾವಣೆಯ ಮುನ್ನಾ ದಿನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸ್ಸಾಂ ಜನರಿಗೆ ಬುದ್ಧಿವಂತಿಕೆಯಿಂದ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

ವಿಡಿಯೋ ಮೂಲಕ ಸಂದೇಶ ನೀಡಿದ ಸಿಂಗ್, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಸರ್ಕಾರಕ್ಕೆ ಮತವನ್ನು ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

88 ವರ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, 1991 ರಿಂದ 2019 ರ ತನಕ ಅಸ್ಸಾಂ ನಿಂದ ಆಯ್ಕೆಗೊಂಡ ರಾಜ್ಯ ಸಭಾ ಸದಸ್ಯರಾಗಿದ್ದರು.

ಓದಿ : ‘ಈಗೋ’ ಒಳ್ಳೆಯದೇ… ಎಲ್ಲಿಯ ತನಕವೆಂದರೇ..

ವೀಡಿಯೋದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹಿತೇಶ್ವರ ಸೈಕಿಯಾ ಹಾಗೂ ತರುಣ್ ಗೊಗೊಯ್ ಅವರ ಸ್ನೇಹವನ್ನು ಅವರು ವಿಡಿಯೋದಲ್ಲಿ ಉಲ್ಲೇಖಿಸಿದ್ದಲ್ಲದೇ, ಕೆಲವು ವರ್ಷಗಳ ಕಾಲ ಅಸ್ಸಾಂ ನನ್ನ ಎರಡನೇ ಮನೆಯಂತಿತ್ತು ಎಂದು ಸಿಂಗ್ ಹೇಳಿದ್ದಾರೆ.

Advertisement

ಅಸ್ಸಾಂ ನ ಜನರು ಐದು ವರ್ಷಗಳ ಕಾಲ ದೇಶದ ಹಣಕಾಸು ಸಚಿವರಾಗಿ ಹಾಗೂ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟರು. ನಾನು ಇಂದು ನಿಮ್ಮಲ್ಲಿ ಒಬ್ಬನಾಗಿ ಮಾತನಾಡುತ್ತಿದ್ದೇನೆ. ಮತ್ತೊಮ್ಮೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಕಾಲ ಬಂದಿದೆ. ನೀವು ಬುದ್ಧಿವಂತಿಕೆಯಿಂದ ಮತಚಲಾಯಿಸಿ ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಸ್ಸಾಂ ನ ಜನರು ಸುದೀರ್ಘ ಕಾಲದ ಧಂಗೆ ಮತ್ತು ಅಶಾಂತಿಯನ್ನು ಸಹಿಸಿಕೊಂಡರು. 2001 ರಿಂದ 2006 ರ ತನಕ ತರುಣ ಗೊಗೊಯ್ ಅವರ ನೇತೃತ್ವದಲ್ಲಿ ಅಸ್ಸಾಂ ಹೊಸ ದಿನಗಳನ್ನು ಕಾಣಲು ಆರಂಭಿಸಿತು. ಶಾಂತಿ ಮತ್ತು ಅಭಿವೃದ್ಧಿಯನ್ನು ಕಾಣುವುದಕ್ಕೆ ಆರಂಭಿಸಿತು ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಓದಿ :  ಕೆಟಿಪಿಪಿ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ ಆಗ್ರಹ

ಏತನ್ಮಧ್ಯೆ, ಈಗ ಮತ್ತೆ ಅಸ್ಸಾಂ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ಆಧಾರದಲ್ಲಿ ಒಡೆದು ಹೋಗುತ್ತಿದೆ. ಸಾಮಾನ್ಯ ಜನರ ಮೂಲ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಅಸ್ಸಾಂ ನಲ್ಲಿ ಈಗ ಭಯದ ವಾತಾವರಣ ಸೃಷ್ಟಿಯಾಗಿದೆ. ನೋಟು ಅಮಾನ್ಯೀಕರಣ ಹಾಗೂ ಜಿ ಎಸ್ ಟಿ ಜಾರಿಯಿಂದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಲಕ್ಷೋಪಕಲ್ಷ ಮಂದಿ ಅವರ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆಗಳ ಏರಿಕೆಯಿಂದ ಜನ ಸಾಮಾನ್ಯರು ಕಷ್ಟ ಪಡುವಂತಾಗಿದೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಕೋವಿಡ್ 19 ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿದೆ ಎಂದು ಸಿಂಗ್ ಹೇಳಿದ್ದಾರೆ.

ಅಸ್ಸಾಂ ನಲ್ಲಿ ಮತ್ತೆ ಶಾಂತಿ ಹಾಗೂ ಅಭಿವೃದ್ಧಿ ಮರಳಿಸುವುದಕ್ಕೆ ಬುದ್ಧಿವಂತಿಕೆಯಿಂದ ನೀವು ಮತ ಚಲಾಯಿಸಿ ಎಂದು ಅವರು ಹೇಳಿದ್ದಾರೆ.

ಇನ್ನು, ಭಾಷಾ ವೈವಿಧ್ಯ, ಸಂಸ್ಕೃತಿ ಹಾಗೂ ಇತಿಹಾಸ ರಕ್ಷಣೆಗಾಗಿ ಕಾಂಗ್ರೆಸ್ ಬದ್ಧತೆಯಿಂದ ಕೆಲಸ ಮಾಡಿತ್ತು ಎಂದು ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸದಿರುವುದು, ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ  ಯುವಕರಿಗೆ ಉದ್ಯೋಗ, ಚಹಾ ತೋಟ ಕಾರ್ಮಿಕರ ವೇತನವನ್ನು ಹೆಚ್ಚಿಸುವುದು, ಪ್ರತಿ ಮನೆಗೆ 200 ಯೂನಿಟ್‌ ಗಳವರೆಗೆ ಉಚಿತ ವಿದ್ಯುತ್ ಮತ್ತು ಪ್ರತಿ ಗೃಹಿಣಿಗೆ  2,000 ಭತ್ಯೆ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಸಹೋದರ ಮತ್ತು ಸಹೋದರಿಯರೇ ನಿಮ್ಮ ಭವಿಷ್ಯ ಹಾಗೂ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ನೀವು ನಿಮ್ಮನ್ನು ರಕ್ಷಿಸುವ ಕಾಂಗ್ರೆಸ್ ಗೆ ಮತದಾನ ಮಾಡಬೇಕು ಎಂದು ವೀಡಿಯೋ ಸಂದೇಶದ ಮೂಲಕ ಅವರು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಓದಿ :  ಕೆಟಿಪಿಪಿ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next