Advertisement

ಮಂಜುನಾಥ ಪೈ ಕಾಲೇಜು: ಪ್ಲೇ ಸ್ಟೋರ್‌ ಉತ್ಸವ

06:22 PM Mar 06, 2017 | Team Udayavani |

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಕಾಲೇಜಿನ ವಾಣಿಜ್ಯ ಶಾಸ್ತ್ರ ಸ್ನಾತಕೊತ್ತರ ಅಧ್ಯಯನ ವಿಭಾಗದ ವತಿಯಿಂದ  “ಪ್ಲೇ ಸ್ಟೋರ್‌’ ರಾಜ್ಯ ಮಟ್ಟದ ಮ್ಯಾನೇಜ್‌ಮೆಂಟ್‌ ಉತ್ಸವ  ಫೆ. 27ರಂದು ನಡೆಯಿತು.

Advertisement

ಕಾರ್ಕಳದ ಪುರಸಭಾ ಅಧ್ಯಕ್ಷೆ ಅನಿತಾ ಆರ್‌. ಅಂಚನ್‌ ಮ್ಯಾನೆಜ್‌ಮೆಂಟ್‌ ಉತ್ಸವವನ್ನು ಉದ್ಘಾಟಿಸಿದರು.
ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಡಾ| ಆಜಾದ್‌ ಅಹ್ಮದ್‌ ಮಾತನಾಡಿ, ವಿದ್ಯಾರ್ಥಿ ಗಳು ಮ್ಯಾನೇಜ್‌ಮೆಂಟ್‌ ಫೆಸ್ಟ್‌ ಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಸ್ವಯಂ ಮೌಲ್ಯ ಮಾಪನ ಮಾಡಲು ಅವಕಾಶ ಸಿಗುತ್ತದೆ, ದೈನಂದಿನ ಕೆಲಸಗಳಿಂದ ಬಿಡುವು ಹಾಗೂ  ಹೊಸ ಜನರೊಂದಿಗೆ ಬೆರೆಯುವ ಅವಕಾಶ ಸಿಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಶ್ರೀವರ್ಮ ಅಜ್ರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು, ಜೀವನ ಕೌಶಲ್ಯ ಇತ್ಯಾದಿ ಗುಣಗಳನ್ನು ಇಂತಹ  ವ್ಯವಹಾರ ನಿರ್ವಹಣೆ ಸ್ಪರ್ಧೆಗಳಿಂದ ಪಡೆಯಬಹುದು ಎಂದರು.

ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಕೃಷ್ಣ ಭಟ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಉಪನ್ಯಾಸಕಿ ಅಶ್ವಿ‌ನಿ ಸ್ವಾಗತಿಸಿದರು. ವಿದ್ಯಾರ್ಥಿ ಸಚಿನ್‌ ವಂದಿಸಿದರು. ಪ್ರತಿಮಾ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ವ್ಯವಹಾರ ನಿರ್ವಹಣೆಗೆ ಸಂಬಂಧಿಸಿದ ಸ್ಪರ್ಧೆಗಳನ್ನು ನಡೆಸಲಾಯಿತು.ವಿವಿಧ ಕಾಲೇಜುಗಳ ಒಟ್ಟು 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

Advertisement

ಸಮಾರೋಪ ಸಮಾರಂಭದಲ್ಲಿ ಕಾರ್ಕಳದ ಪುರಸಭೆಯ ಮಾಜಿ ಅಧ್ಯಕ್ಷೆ ರೆಹಮತ್‌ ಎನ್‌. ಶೇಖ್‌  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೊ| ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು.

ಸ್ಪರ್ಧಾಳುಗಳು ತಮ್ಮ ಅನುಭವ ಹಂಚಿಕೊಂಡರು. ಉಪನ್ಯಾಸಕ ರವಳನಾಥ ಶರ್ಮ ಸ್ವಾಗತಿಸಿ,ರಮೇಶ್‌ ವಂದಿಸಿದರು. ಉಪನ್ಯಾಸಕರಾದ ಗೌರೀ ಎಸ್‌. ಭಟ್‌, ಜ್ಯೋತಿ ಎಲ್‌. ಜೆ., ನವೀನ್‌, ಯೋಗೇಶ್‌ ಡಿ. ಎಚ್‌., ವೆಂಕಟೇಶ್‌, ಕೃಷ್ಣಮೂರ್ತಿ ವೈದ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next