Advertisement

ಮಂಜುಳಾ ಚಳ್ಳಕೆರೆ ನಗರಸಭೆ ಉಪಾಧ್ಯಕ್ಷೆ

10:08 PM Jan 21, 2022 | Team Udayavani |

ಚಳ್ಳಕೆರೆ: ಇಲ್ಲಿನ ನಗರಸಭೆ ನೂತನ ಉಪಾಧ್ಯಕ್ಷರಾಗಿ 24ನೇ ವಾರ್ಡ್ ನ ಕಾಂಗ್ರೆಸ್‌ ಪಕ್ಷದ ಸದಸ್ಯೆ ಆರ್‌. ಮಂಜುಳಾ ಪ್ರಸನ್ನಕುಮಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪವಿಭಾಗಾಧಿ ಕಾರಿ ಚಂದ್ರಯ್ಯ ಚುನಾವಣಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

Advertisement

ತಹಶೀಲ್ದಾರ್‌ ಎನ್‌. ರಘುಮೂರ್ತಿ ಉಪಸ್ಥಿತರಿದ್ದರು. ಶಾಸಕ ಟಿ. ರಘುಮೂರ್ತಿಯವರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಕೋವಿಡ್‌ ಮತ್ತು ಒಮಿಕ್ರಾನ್‌ ವೈರಾಣು ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿದೆ. ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ ಹಾಗೂ ಎಲ್ಲಾ ಸದಸ್ಯರು ಪರಸ್ಪರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಬೇಕು. ಪೌರಾಯುಕ್ತೆ ಟಿ. ಲೀಲಾವತಿಯವರು ನಿಯಮಗಳ ಬಗ್ಗೆ ಎಲ್ಲರಿಗೂ ಮಾರ್ಗದರ್ಶನ ಮಾಡಬೇಕೆಂದರು. ಉಪಾಧ್ಯಕ್ಷೆ ಆರ್‌. ಮಂಜುಳಾ ಪ್ರಸನ್ನಕುಮಾರ್‌ ಮಾತನಾಡಿ, ಶಾಸಕ ಟಿ. ರಘುಮೂರ್ತಿ, ಕಾಂಗ್ರೆಸ್‌ ಪಕ್ಷದ ಎಲ್ಲಾ ಮುಖಂಡರು, ನಗರಸಭೆಯ ಎಲ್ಲಾ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅಧಿಕಾರಾವಧಿಯನ್ನು ಜನಸೇವೆಗೆ ಮೀಸಲಿಡುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಸದಸ್ಯರಾದ ವೈ. ಪ್ರಕಾಶ್‌, ಆರ್‌. ರುದ್ರನಾಯಕ, ಕವಿತಾ ಬೋರಯ್ಯ, ಕವಿತಾ ವೀರೇಶ್‌, ಸುಜಾತಾ ಪ್ರಹ್ಲಾದ್‌, ಸುಮಾ ಭರಮಣ್ಣ, ಟಿ. ಮಲ್ಲಿಕಾರ್ಜುನ್‌, ಬಿ.ಟಿ. ರಮೇಶ ಗೌಡ, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ಕೆ. ವೀರಭದ್ರಪ್ಪ, ಸಾವಿತ್ರಮ್ಮ, ಜಯಲಕ್ಷ್ಮೀ, ಜೈತುಂಬಿ, ಪೌರಾಯುಕ್ತೆ ಟಿ. ಲೀಲಾವತಿ, ವ್ಯವಸ್ಥಾಪಕ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು. ನಗರಸಭೆ ಮುಂಭಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ವಿಶ್ವಕರ್ಮ ಸಮಾಜದ ಮುಖಂಡರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ವೆಂಕಟೇಶ ಆಚಾರಿ, ಉಪಾಧ್ಯಕ್ಷ ಬ್ರಹ್ಮಾಚಾರಿ, ಸರಸ್ವತಮ್ಮ, ಕಮಲಮ್ಮ, ಆರ್‌. ಪ್ರಸನ್ನಕುಮಾರ್‌ ಇತರರು ಇದ್ದರು

 

Advertisement

Udayavani is now on Telegram. Click here to join our channel and stay updated with the latest news.

Next