Advertisement

ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿ ಮಾಲಿನ್ಯ ರಾಶಿ 

02:13 PM Apr 14, 2017 | Team Udayavani |

ಕುಂಬಳೆ : ಮಂಜೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಮಾಲಿನ್ಯ ರಾಶಿ ತುಂಬಿ ತುಳುಕುತ್ತಿದೆ. ಹೊಸಂಗಡಿ ಬಸ್‌ ನಿಲ್ದಾಣದ ಪಕ್ಕದ ಮಂಜೇಶ್ವರ ಬಸ್‌ ನಿಲ್ದಾಣ ಪರಿಸರ ಸಹಿತ ಹಲವೆಡೆಗಳಲ್ಲಿ ಇಂತಹಾ ಮಾಲಿನ್ಯ ಕುಂಭಾರವನ್ನು ಕಾಣಬಹುದಾಗಿದೆ.ಇದು ಇಂದು ನಿನ್ನೆಯ ಕಥೆಯಲ್ಲ.ಹಲವಾರು ವರ್ಷಗಳಿಂದ ಈ ದೃಶ್ಯ ಹೆಚ್ಚಿನೆಲ್ಲಾ ಪ್ರದೇಶಗಳಲ್ಲಿ ಕಂಡು ಬರುವುದು ಸರ್ವೇ ಸಾಮಾನ್ಯವಾಗಿದೆ.

Advertisement

ಪ್ರಧಾನ ಮಂತ್ರಿಯವರು ದೇಶಾದ್ಯಂತ ಸ್ವತ್ಛ ಭಾರತಕ್ಕೆ ಆದ್ಯತೆ ನೀಡಿದರೂ ಇದು ಹೆಚ್ಚಿನ ಗ್ರಾಮ ಪಂಚಾಯತ್‌ಗಳಿಗೆ ಬಾಧಕವಲ್ಲವೆಂಬುದಾಗಿ ನಿರ್ಲಕ್ಷ ತಾಳಿರುವ ಆರೋಪ ಬಲವಾಗಿದೆ.ಮಂಗಲ್ಪಾಡಿ, ಕುಂಬಳೆ, ಮೊಗ್ರಾಲ್‌ ಮೊದಲಾದ ಪೇಟೆಯನ್ನು ಹೊಂದಿದ ಸ್ಥಳೀಯಾಡಳಿತೆಗಳಲ್ಲಿ ಮಾಲಿನ್ಯ ರಾಶಿಯನ್ನು ಕಾಣಬಹುದಾಗಿದೆ.

ಗ್ರಾಮ ಪಂಚಾಯತ್‌ನಲ್ಲಿ ಪೂರ್ತಿ ಶುಚೀಕರಣ ಮಾಡಿರುವುದಾಗಿ ಈ ಹಿಂದೆಯೇ ಕೇಂದ್ರ ಸರಕಾರದ ನಿರ್ಮಲ ಪುರಸ್ಕಾರ್‌ ಬಹುಮಾನವನ್ನು ಜಿಲ್ಲೆಯ ಹೆಚ್ಚಿನೆಲ್ಲಾ ಗ್ರಾ.ಪಂ. ಅಧ್ಯಕ್ಷರು ದಿಲ್ಲಿಗೆ ತೆರಳಿ ಪಡೆದಿದ್ದಾರೆ. 

ಆದರೆ ಆ ಬಳಿಕ ಶುಚಿತ್ವದ ಬಗ್ಗೆ ಆಡಳಿತ ಗಮನ ಹರಿಸಿಲ್ಲವಾದ ಕಾರಣ  ಮಾಲಿನ್ಯ ಸಮಸ್ಯೆ ಜಟಿಲ ವಾಗುತ್ತಿರುವ ಆರೋಪ ಕೇಳಿ ಬರುತ್ತಿದೆ. ಆದರೆ ಮಳೆಗಾಲದಲ್ಲಿ ಈ ಮಾಲಿನ್ಯ ರಾಶಿಗಳಿಂದ ಮಾರಕ ರೋಗಾಣುಗಳು ಸೃಷ್ಟಿಯಾಗುತ್ತಿದೆ.ಸೊಳ್ಳೆ ಉತ್ಪಾದನೆಯಾಗಿ ಡೆಂಗ್ಯೂ ಜ್ವರ ಇತ್ಯಾದಿ ಮಾರಕ ರೋಗಗಳು ಹರಡುತ್ತಿವೆ. 

ಸರಕಾರ ಆರೋಗ್ಯ ಇಲಾಖೆಯ ಮೂಲಕ ಸಾಕಷ್ಟು ನಿಧಿಯನ್ನು ಮಳೆಗಾಲಕ್ಕೆ ಮುನ್ನ ನೀಡುತ್ತಿದೆ.ಇದನ್ನು ಅಲ್ಲಲ್ಲಿ ಮಾಹಿತಿ ಶಿಬಿರ ನಡೆಸಿ, ಕಾಟಾಚಾರಕ್ಕೆ ಕೆಲಕಡೆ ಕೀನ್‌ ಮಾಡಿ ಫೂಟೊ ತೆಗೆಸಿ ಪತ್ರಿಕೆಗೆ ನೀಡಿ ಕೈತೊಳೆದು ಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.

Advertisement

ಜನಸಾಮಾನ್ಯರೂ ತಮ್ಮ ಮನೆಯ ಮಾಲಿನ್ಯವನ್ನು ತಮ್ಮ ಮನೆಯ ಆವರಣದಿಂದ ಹೊರಗೆಸೆದು ಇದು ಇನ್ನು ನಮ್ಮದಲ್ಲವೆಂಬುದಾಗಿ ಭಾವಿಸುವುದರಿಂದ ಮಾಲಿನ್ಯ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ.
 

Advertisement

Udayavani is now on Telegram. Click here to join our channel and stay updated with the latest news.

Next