Advertisement

Manjeshwara: ಚುನಾವಣ ತಕರಾರು; ಕೆ. ಸುರೇಂದ್ರನ್‌ ಸಹಿತ 6 ಮಂದಿ ದೋಷಮುಕ್ತ

12:29 AM Oct 08, 2024 | Team Udayavani |

ಕಾಸರಗೋಡು: 2021ರಂದು ನಡೆದಿದ್ದ ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ನಗದು ಮತ್ತು ಮೊಬೈಲ್‌ ನೀಡಿ ನಾಮಪತ್ರ ವಾಪಸ್‌ ತೆಗೆ‌ಸಿದ್ದಾರೆಂಬ ಆರೋಪದ ಪ್ರಕರಣದಲ್ಲಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್‌ ಸಹಿತ 6 ಮಂದಿಯನ್ನು ಕಾಸರಗೋಡು ಪ್ರಿನ್ಸಿಪಲ್‌ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಬಿಜೆಪಿ ನೇತಾರರಾದ ಬಾಲಕೃಷ್ಣ ಶೆಟ್ಟಿ, ಕೆ. ಮಣಿಕಂಠ ರೈ, ಸುನಿಲ್‌ ನಾಯ್ಕ, ವೈ. ಸುರೇಶ್‌, ಲೋಕೇಶ್‌ ನೋಂಡಾ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ ಅವರನ್ನು ಅಪಹರಿಸಿ, ಬೆದರಿಸಿ ನಾಮಪತ್ರ ಹಿಂದೆಗಿಸಿಕೊಂಡಿದ್ದಾಗಿಯೂ, ಇದಕ್ಕಾಗಿ 2.50 ಲ. ರೂ., ಮೊಬೈಲ್‌ ಫೋನ್‌ ಲಂಚ ನೀಡಿದ್ದಾಗಿ ಎಡರಂಗದ ಅಭ್ಯರ್ಥಿ ವಿ.ವಿ. ರಮೇಶನ್‌ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅನಂತರ ಈ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಜಿಲ್ಲಾ ಕ್ರೈಂಬ್ರಾಂಚ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಮ್ಮ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ವಾಸ್ತವ ರಹಿತವಾದುದಾಗಿದ್ದು, ಆದ್ದರಿಂದ ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೆ.ಸುರೇಂದ್ರನ್‌ ಸಹಿತ ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next