Advertisement

ರಾರಾಜಿಸಲಿದೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ

05:49 PM Dec 18, 2021 | Team Udayavani |

ಕೊಡಿಯಾಲಬೈಲ್‌: ಭಾರತದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಹೆಸರಿನಲ್ಲಿ ಕೊಡಿಯಾಲಬೈಲ್‌ನಲ್ಲಿ (ನವ ಭಾರತ ವೃತ್ತ) ನೂತನ ವೃತ್ತ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.

Advertisement

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ನೆರವಿನಲ್ಲಿ ಜೋಡುಮಠ ರಸ್ತೆಯಲ್ಲಿರುವ ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಅಧ್ಯಕ್ಷರಾಗಿರುವ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ವೃತ್ತ ನಿರ್ಮಾಣ, ನಿರ್ವಹಣೆ ನಡೆಸಲಾಗುತ್ತಿದೆ.

ಮಂಜೇಶ್ವರ ಗೋವಿಂದ ಪೈ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮಾಡಿರುವ ಸಂಶೋಧನೆ, ಬರೆದಿರುವ ಗ್ರಂಥಗಳು, ಕವಿತೆ, ಕಥಾ ಸಂಕಲನಗಳು ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು. ತುಳುನಾಡಿನ ಚರಿತ್ರೆಯನ್ನು ಆಳವಾಗಿ ಅಭ್ಯಸಿಸಿದ ಮಂಜೇಶ್ವರ ಗೋವಿಂದ ಪೈ ಅವರು ಅದನ್ನು ಸಮರ್ಥವಾಗಿ ಮಂಡಿಸಬಲ್ಲರಾಗಿದ್ದರು. ಅಂತಹ ಶ್ರೇಷ್ಠ ಸಾಹಿತಿ, ಸಂಶೋಧಕ ಮತ್ತು ಮಾನವತಾವಾದಿಯ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಸ್ಮರಿಸುವಂತೆ ಮಾಡುವ ಉದ್ದೇಶದಿಂದ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ದಾನಿಗಳ ಸಹಕಾರದಿಂದ ಈ ಕಾರ್ಯ ಕೈಗೊಂಡಿದೆ ಎಂದು ಟ್ರಸ್ಟ್‌ನ ಪ್ರಮುಖರಾದ ಹನುಮಂತ ಕಾಮತ್‌ ತಿಳಿಸಿದ್ದಾರೆ.

ಮಂಜೇಶ್ವರ ಗೋವಿಂದ ಪೈಗಳ ಕಂಚಿನ ಪ್ರತಿಮೆ ಹೊಂದಲಿರುವ ಈ ವೃತ್ತವನ್ನು ಶಿಲಾಮಯವಾಗಿ ಆಕರ್ಷಣೀಯವನ್ನಾಗಿ ಮಾಡುವ ಜವಾಬ್ದಾರಿ ಯನ್ನು ಟ್ರಸ್ಟ್‌ ವಹಿಸಿಕೊಂಡಿದೆ. ಕಾರ್ಕಳದ ಶಿಲ್ಪಿ ಗಳ
ತಂಡ ವೊಂದು ಹಗಲಿರುಳು ಈ ವೃತ್ತದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

ಪುರಾತನ ಬಾವಿಗೆ ಕಾಯಕಲ್ಪ
“ಅವೈಜ್ಞಾನಿಕವಾಗಿದೆ’ ಎಂಬ ಕಾರಣಕ್ಕೆ ಈ ಹಿಂದಿನ ನವಭಾರತ ವೃತ್ತವನ್ನು ಕೆಡಹುವ ಕಾಮಗಾರಿ ಇತ್ತೀಚೆಗೆ
ನಡೆಸುತ್ತಿದ್ದಾಗ ಕಾರ್ಮಿಕರಿಗೆ ಕಾಂಕ್ರೀಟ್‌ ಸ್ಲ್ಯಾಬ್ ವೊಂದು ಕಾಣಿಸಿತ್ತು. ಅದನ್ನು ಎತ್ತಿ ನೋಡಿದಾಗ ಆಳವಾದ ಬಾವಿ ಇರುವುದು ಗೊತ್ತಾಗಿದೆ. ಈ ಬಾವಿಗೆ ಸುಮಾರು 100 ವರ್ಷಗಳ ಇತಿಹಾಸವಿದೆ. ಈ ಹಿಂದೆ ಸುತ್ತಮುತ್ತಲಿನ ಅನೇಕ ಮನೆಗಳ ಕುಡಿಯುವ ನೀರಿಗೆ ಇದೇ ಬಾವಿ ಆಸರೆಯಾಗಿತ್ತು. ಬಾವಿ ಸುಮಾರು 40 ಅಡಿಗೂ ಹೆಚ್ಚಿನ ಆಳ ಇದ್ದು, ಈಗಲೂ ಬಾವಿ ತುಂಬಾ ನೀರು ಇದೆ. ವಿಶೇಷವೆಂದರೆ; ಬಾವಿಯನ್ನು ಕೆಂಪು ಕಲ್ಲಿನ ಕೆತ್ತನೆಯಿಂದ ನಿರ್ಮಾಣ ಮಾಡಲಾಗಿದೆ. ಬ್ರಿಟಿಷ್‌ ಸರಕಾರ ಇರುವ ವೇಳೆ ಈಗಿದ್ದ ನವಭಾರತ ವೃತ್ತ ಬಳಿ ರಸ್ತೆಯಲ್ಲಿ ಜಟಕಾ ಬಂಡಿ ಸವಾರಿ ಸಾಗುತ್ತಿತ್ತು. ಆ ವೇಳೆ ಕುದುರೆಗಳಿಗೆ ಬಾಯಾರಿಕೆಯಾದರೆ ಇದೇ ಬಾವಿಯಿಂದ ನೀರು ಕುಡಿಸುತ್ತಿದ್ದರು ಎಂಬ ಪ್ರತೀತಿಯಿತ್ತು.

Advertisement

ವೃತ್ತ ನಿರ್ಮಾಣ ಪ್ರಗತಿಯಲ್ಲಿ
ಶಾಸಕ ವೇದವ್ಯಾಸ್‌ ಕಾಮತ್‌ ಅವರ ಪರಿಕಲ್ಪನೆಯಂತೆ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ ನಿರ್ಮಾಣ ಕಾರ್ಯ ನಡೆಸಲಾಗು ತ್ತಿದೆ. ಜತೆಗೆ ಇಲ್ಲಿ ಪತ್ತೆಯಾಗಿರುವ ಶತಮಾನದ ಇತಿಹಾಸ ಹೊಂದಿರುವ ಬಾವಿಯನ್ನು ಉಳಿಸಿಕೊಂಡು ವೃತ್ತ ನಿರ್ಮಾಣಕ್ಕೆ ಕ್ರಮ ಕೊಳ್ಳಲಾಗುತ್ತಿದೆ.
ಪ್ರೇಮಾನಂದ ಶೆಟ್ಟಿ,
ಮೇಯರ್‌, ಮಹಾನಗರ ಪಾಲಿಕೆ

 

Advertisement

Udayavani is now on Telegram. Click here to join our channel and stay updated with the latest news.

Next