Advertisement

Manisha Padhi: ಭಾರತದ ಮೊದಲ ಮಹಿಳಾ ಸಹಾಯಕಿ ಡಿ ಕ್ಯಾಂಪ್ ಆಗಿ ನೇಮಕಗೊಂಡ ಮನಿಶಾ ಪಾಧಿ

11:57 AM Dec 06, 2023 | Team Udayavani |

ಐಜ್ವಾಲ್‌: 2015ರ ಬ್ಯಾಚ್‌ನ ಭಾರತೀಯ ವಾಯುಪಡೆಯ (IAF) ಅಧಿಕಾರಿ ಮನಿಶಾ ಪಾಧಿ ಅವರನ್ನು ಮಿಜೋರಾಂ ರಾಜ್ಯಪಾಲ ಡಾ.ಹರಿಬಾಬು ಕಂಬಂಪತಿ ಅವರ ಸಹಾಯಕ-ಡಿ-ಕ್ಯಾಂಪ್ ಆಗಿ ನೇಮಿಸಲಾಯಿತು.

Advertisement

ಇದರೊಂದಿಗೆ ಅವರು ದೇಶದಲ್ಲಿ ರಾಜ್ಯಪಾಲರಿಗೆ ಸಹಾಯಕ-ಡಿ-ಕ್ಯಾಂಪ್ (ADC) ಆಗಿ ನೇಮಕಗೊಂಡ ಮೊದಲ ಮಹಿಳಾ ಭಾರತೀಯ ಸಶಸ್ತ್ರ ಪಡೆ ಅಧಿಕಾರಿ ಎನಿಸಿಕೊಂಡಿದ್ದಾರೆ .

ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರು ನವೆಂಬರ್ 29 ರಂದು ರಾಜ್ಯದ ರಾಜಧಾನಿ ಐಜ್ವಾಲ್‌ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಎಡಿಸಿಯಾಗಿ ಸ್ಕ್ವಾಡ್ರನ್ ಲೀಡರ್ ಪಾಧಿ ಅವರನ್ನು ನೇಮಿಸಿದರು.

ನವೆಂಬರ್ 29 ರಂದು ರಾಜ್ಯಪಾಲರಿಗೆ ವರದಿ ಮಾಡುವ ಮೂಲಕ ಎಡಿಸಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಐಜ್ವಾಲ್‌ನಲ್ಲಿರುವ ರಾಜಭವನದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪಾಧಿ ಅವರನ್ನು ಪರಿಚಯಿಸಲಾಯಿತು.
ಮನಿಶಾ ಪಾಧಿ ಅವರ ನೇಮಕವು ಕೇವಲ ಮೈಲಿಗಲ್ಲು ಮಾತ್ರವಲ್ಲ, ಇದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮಹಿಳೆಯರ ಶಕ್ತಿಗೆ ಸಾಕ್ಷಿಯಾಗಿದೆ. ಈ ಗಮನಾರ್ಹ ಸಾಧನೆಯನ್ನು ಆಚರಿಸೋಣ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣವನ್ನು ಮುಂದುವರಿಸೋಣ ಎಂದು ಗವರ್ನರ್ ಹರಿಬಾಬು ಕಂಬಂಪಾಟಿ ಅವರು ಹೇಳಿದ್ದಾರೆ.

Advertisement

ಮನಿಶಾ ಪಾಧಿ ಅವರು ಒಡಿಶಾದ ಗಂಜಾಂ ಜಿಲ್ಲೆಯ ಬರ್ಹಾಂಪುರದವಳು. ಅವರು ಭುವನೇಶ್ವರದ ಸಿವಿ ರಾಮನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದರು. ಸದ್ಯ ಆಕೆಯ ಪೋಷಕರು ಕೂಡ ಭುವನೇಶ್ವರದಲ್ಲಿ ನೆಲೆಸಿದ್ದಾರೆ.

ಒಡಿಶಾ ಮೂಲದ ಮನೀಶಾ ಅವರು ಇದಕ್ಕೂ ಮೊದಲು ವಾಯುಪಡೆ, ಪುಣೆ, ಬೀದರ್ ಮತ್ತು ಭಟಿಂಡಾದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಮನಿಷಾ ಅವರ ಈ ಸಾಧನೆಗೆ ಇಡೀ ಊರೇ ಸಂಭ್ರಮಪಟ್ಟಿದೆ.

ಈ ವಿಶೇಷ ಸಂದರ್ಭದಲ್ಲಿ ಅಭಿನಂದಿಸಿದ ರಾಜ್ಯಪಾಲ ಡಾ. ಹರಿ ಬಾಬು ಕುಂಭಪತಿ, “ಸ್ಕಾಡ್ರನ್ ಲೀಡರ್ ಮನೀಶಾ ಪಾಧಿ ಅವರನ್ನು ಸಹಾಯಕಿಯಾಗಿ ನೇಮಕ ಮಾಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬರೆದಿದ್ದಾರೆ. ಮತ್ತಷ್ಟು ಶುಭ ಹಾರೈಸಿರುವ ಅವರು, ಮನಿಷಾಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next