Advertisement

ಅತಿ ಖಾರದ ಹೈಬ್ರಿಡ್‌ ಮೆಣಸು

11:31 AM Jan 06, 2018 | |

ಇಂಫಾಲ: ಮೆಣಸಿನ ಕಾಯಿ ಎಂದರೆ ಖಾರವೇ. ಅದರಲ್ಲಿಯೂ ಮತ್ತಷ್ಟು ಖಾರ ಎಂದರೆ ಹೇಗಪ್ಪಾ? ಈಶಾನ್ಯ ರಾಜ್ಯ ಮಣಿಪುರದ ಕ್ವಾಕ್ಲೈ ಆ್ಯಂಡ್‌ ಖೋಂಗ್ಗು ಮೆಲೇಲಿ ಪ್ರೈ.ಲಿ. ಎಂಬ ಖಾಸಗಿ ಸಂಸ್ಥೆಯ ವಿಜ್ಞಾನಿ ರಾಜಕುಮಾರ್‌ ಕಿಶೋರ್‌ ಇದುವರೆಗಿನ ಖಾರದ ಮೆಣಸಿನಕಾಯಿ ಬೆಳೆಸಿದ್ದಾರೆ. ಇದು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿರುವ ಹೈಬ್ರಿಡ್‌ ಮೆಣಸಿನ ತಳಿ. ಕ್ಯಾಪ್ಸಿಕಮ್‌ ಫ‌Åಸ್ಟೀನ್ಸ್‌  ಕಲ್ಟಿವರ್‌ ಮತ್ತು ಕ್ಯಾಪ್ಸಿಕಮ್‌ ಚೈನೀಸ್‌ ಸಿವಿ ಎಂಬ ಎರಡು ತಳಿಗಳನ್ನು ಸಂಯೋಜಿಸಿ ಅದನ್ನು ಸಿದ್ಧಪಡಿಸಲಾಗಿದೆ.

Advertisement

ಈ ಹೈಬ್ರಿಡ್‌ ಮೆಣಸಿನ ಘಾಟು (ಪಂಜೆನ್ಸಿ) ಸ್ಕೋವಿಲ್ಲೆ (ಖಾರದ ಪ್ರಮಾಣ ಅಳೆಯುವ ಮಾಪನ)ಯಲ್ಲಿ 2,87,400 ಹೀಟ್‌ ಯುನಿಟ್‌ ಆಗಿದೆ. ಅದರಲ್ಲಿ ಮೆಣಸಿನಲ್ಲಿ ಕಂಡು ಬರುವ ಖಾರದ ಅಂಶವಾಗಿರುವ ಕ್ಯಾಪ್ಸೆ„ನ್‌ನ ಪ್ರಮಾಣ ಶೇ.1.80ರಷ್ಟಿದೆ. ಈ ಬಗ್ಗೆ “ದ ಹಿಂದುಸ್ತಾನ್‌ ಟೈಮ್ಸ್‌’ ಜತೆಗೆ ಮಾತನಾಡಿದ ಮುಖ್ಯ ವಿಜ್ಞಾನಿ ರಾಜಕುಮಾರ್‌ ಕಿಶೋರ್‌ ‘ಹೈಬ್ರಿಡ್‌ ಮೆಣಸಿನ ಬಗ್ಗೆ 2007ರಲ್ಲಿ ಹವ್ಯಾಸಕ್ಕೆಂದು ಅಧ್ಯಯನ ಆರಂಭಿಸಿ, ಅದನ್ನೇ ಮುಂದುವರಿಸಿದೆ’ ಎಂದಿದ್ದಾರೆ. ಅದರ ಬಗ್ಗೆ ಕೊಚ್ಚಿಯಲ್ಲಿರುವ ಸಾಂಬಾರ ಮಂಡಳಿಯ ಗುಣಮಟ್ಟ ಪ್ರಯೋಗಶಾಲೆಯಲ್ಲಿಯೂ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದ್ದಾರೆ ಕಿಶೋರ್‌.

ಈವರೆಗೆ ಮಣಿಪುರದ “ಭೂತ್‌ ಜೊಲೋಕಿಯಾ’ ಎಂಬ ಹೆಸರಿನ ಮೆಣಸೇ ಭಾರತದ ಅತಿ ಖಾರದ ಮೆಣಸು ಎಂಬ ಖ್ಯಾತಿ ಗಳಿಸಿದೆ. ಜತೆಗೆ 2007ರಲ್ಲಿ ಇದು ಗಿನ್ನೆಸ್‌ ದಾಖಲೆಯೂ ಮಾಡಿದೆ.

ಈಗ ಅಭಿವೃದ್ಧಿಪಡಿಸಲಾಗಿರುವ ಮೆಣಸು ಐದು ಇಂಚು ಬೆಳೆಯುತ್ತದೆ. ಒಂದು ಗಿಡದಲ್ಲಿ ಒಂದು ಬೆಳೆಗೆ 50-60 ಮೆಣಸಿನಕಾಯಿ ಸಿಗುತ್ತದೆ. ನೇರವಾಗಿ ಸೂರ್ಯನ ಬೆಳಕು ಬರುವಂಥ ಪ್ರದೇಶದಲ್ಲೂ ಇದನ್ನು ಬೆಳೆಯಬಹುದಾಗಿದೆ. ಇದನ್ನು ತಮಾಷೆಯಾಗಿ “ಕಿಶೋರ್‌ ಫೈರ್‌ ಬಾಲ್‌’ ಎಂದೂ ಕರೆಯುತ್ತಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next