ಇಂಫಾಲ: ಮಣಿಪುರದಲ್ಲಿ ಗಲಭೆ ಆರಂಭವಾಗಿ 100ಕ್ಕೂ ಹೆಚ್ಚು ದಿನಗಳು ಗತಿಸಿವೆ. ನಿಧಾನಕ್ಕೆ ಅಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಕೆಲವು ದಿನಗಳಿಂದ ರಾಜ್ಯದಲ್ಲಿ ದೊಡ್ಡ ಮಟ್ಟದ ಗಲಭೆ ಮತ್ತು ಹಿಂಸಾಚಾರದ ಕುರಿತು ವರದಿಯಾಗಿಲ್ಲ. ಕುಕಿ ಸಮುದಾಯ ಬಾಹುಳ್ಯದ ಚುರಾ ಚಂದಪುರ್ ಜಿಲ್ಲೆ ಹಾಗೂ ಮೈತೇಯಿ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಬಿಷ್ಣುಪುರ ಜಿಲ್ಲೆಯಲ್ಲಿ ಆಗಾಗ ಗುಂಡಿನ ಚಕಮಕಿ ಮತ್ತು ಬಾಂಬ್ ದಾಳಿಗಳು ನಡೆದಿವೆ.
ಈಶಾನ್ಯ ರಾಜ್ಯದಲ್ಲಿ ಮುಸ್ಲಿಂ ಸಮುದಾ ಯ ದವರು ಶೇ.9 ಇದ್ದರೆ, ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಪಟ್ಟಣದಲ್ಲಿ ಶೇ.90 ಸಮುದಾಯದವರನ್ನು ಇದ್ದಾರೆ. “ಗಲಭೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ನೆಮ್ಮದಿಯಾಗಿ ಜೀವಿಸದಂತಾಗಿದೆ. ವಿದ್ಯಾರ್ಥಿಗಳು ಶಾಲೆ - ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಶಾಂತಿ ಕಾಪಾಡು ವಂತೆ ನಾವು ಮೈತೇಯಿ ಮತ್ತು ಕುಕಿ ಸಹೋದರರಿಗೆ ಮನವಿ ಮಾಡು ತ್ತೇವೆ’ ಎಂದು ಮೌಲ್ವಿ ನಾಸೀರ್ ಖಾನ್ ಹೇಳಿದ್ದಾರೆ.
ಸರ್ಜಿಲ್ ದಾಳಿ ನಡೆಸಿ: “ಎಲ್ಲ ಕುಕಿ ಉಗ್ರರು ಶಿಬಿರದಲ್ಲಿದ್ದರೆ, ಗುಂಡಿನ ಚಕಮಕಿ ಹೇಗೆ ನಡೆಯುತ್ತಿದೆ?. ಅಲ್ಲಿ ಅಕ್ರಮ ಕುಕಿ ಉಗ್ರರಿದ್ದಾರೆ. ರಾಜ್ಯದಲ್ಲಿ ಅಕ್ರಮ ವಲಸಿಗರು ಹೆಚ್ಚಿದ್ದಾರೆ. ಹೀಗಾಗಿ ಮಣಿಪುರದಲ್ಲಿ ಸರಕಾರ ಸರ್ಜಿಕಲ್ ದಾಳಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊ ಳ್ಳಬೇಕು’ ಎಂದು ಎನ್‌ಪಿಪಿ ನಾಯಕ ಎಂ.ರಾಮೇಶ್ವರ್ ಸಿಂಗ್ ಆಗ್ರಹಿಸಿದ್ದಾರೆ.
ನಕಾರಾತ್ಮಕ ಸುದ್ದಿ: “ಮಣಿಪುರ ಹತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ನನ್ನ ಬಗ್ಗೆ ನಕಾರಾತ್ಮಕ ಸುದ್ದಿಯನ್ನು ಹಬ್ಬಿಸುವಲ್ಲಿ ನಿರತ ರಾಗಿದ್ದಾರೆ’ ಎಂದು ಉದ್ಯಮಿ ರಾಬರ್ಟ್ ವಾದ್ರಾ ದೂರಿದ್ದಾರೆ. ಲೋಕ ಸಭೆ ಕಲಾಪದ ವೇಳೆ ಸ್ಮತಿ ಇರಾನಿ ಅವರು ರಾಬರ್ಟ್ ವಾದ್ರಾ ಮತ್ತು ಉದ್ಯಮಿ ಗೌತಮ್ ಅದಾನಿ ಅವರು ಜತೆಗಿರುವ ಫೋಟೋ ಪ್ರಶ್ನಿಸಿ, ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದಿದ್ದರು.
ಮಣಿಪುರದಲ್ಲಿ ಇರುವ ನಮ್ಮ ದೇಶದವರೇ ಆಗಿರುವವರ ಮೇಲೆ ಸೇನಾ ಪಡೆಗಳು ಗುಂಡು ಹಾರಿಸಬೇಕು ಎಂದು ರಾಹುಲ್ ಬಯಸುತ್ತಾರೆಯೇ? ಅಥವಾ ಅವರು ಸೌಹಾರ್ದ ಪಸರಿಸುವಂತೆ ಮಾಡಬೇಕು ಎಂದು ಇಚ್ಛಿಸುತ್ತಾರೆಯೋ?
ರವಿಶಂಕರ ಪ್ರಸಾದ್, ಬಿಜೆಪಿ ಸಂಸದ