Advertisement

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

04:07 PM Sep 27, 2023 | Team Udayavani |

ಇಂಫಾಲ್ : ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿರುವ ಮಣಿಪುರ ಸರಕಾರವು ಇಡೀ ರಾಜ್ಯವನ್ನು “ಪ್ರಕ್ಷುಬ್ಧ ಪ್ರದೇಶ” ಎಂದು ಬುಧವಾರ ಘೋಷಣೆ ಮಾಡಿದೆ.

Advertisement

ರಾಜ್ಯ ಸರಕಾರದ ಅಧಿಸೂಚನೆಯ ಪ್ರಕಾರ, 19 ನಿರ್ದಿಷ್ಟ ಪೊಲೀಸ್ ಠಾಣೆ ಪ್ರದೇಶಗಳನ್ನು ಹೊರತುಪಡಿಸಿ ಇಡೀ ರಾಜ್ಯವನ್ನು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಅಡಿಯಲ್ಲಿ “ಪ್ರಕ್ಷುಬ್ಧ ಪ್ರದೇಶ” ಎಂದು ಘೋಷಿಸಲಾಗಿದೆ.

“ವಿವಿಧ ಉಗ್ರಗಾಮಿ/ಬಂಡಾಯ ಗುಂಪುಗಳ ಹಿಂಸಾತ್ಮಕ ಚಟುವಟಿಕೆಗಳು ಇಡೀ ಮಣಿಪುರ ರಾಜ್ಯದಲ್ಲಿ ನಾಗರಿಕ ಆಡಳಿತದ ನೆರವಿಗಾಗಿ ಸಶಸ್ತ್ರ ಪಡೆಗಳ ಬಳಕೆಯನ್ನು ಸಮರ್ಥಿಸುತ್ತದೆ” ಎಂದು ಸರಕಾರವು ಅಭಿಪ್ರಾಯಪಟ್ಟಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇಬ್ಬರು ವಿದ್ಯಾರ್ಥಿಗಳ ಅಪಹರಣ ಮತ್ತು ಹತ್ಯೆಯ ವಿರುದ್ಧ ಇಂಫಾಲ್‌ನಲ್ಲಿ ಮಂಗಳವಾರ ವಿದ್ಯಾರ್ಥಿ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ‍್ಯಾಲಿಗಳು ನಡೆಡಿದ್ದವು. ವಿದ್ಯಾರ್ಥಿಗಳ ಮೃತದೇಹದ ದೃಶ್ಯಗಳು ಆನ್‌ಲೈನ್‌ನಲ್ಲಿ ಹೊರಹೊಮ್ಮಿದ ನಂತರ ಮಂಗಳವಾರ ಭಾರೀ ಪ್ರತಿಭಟನೆಗಳು ಪ್ರಾರಂಭವಾದವು. ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ನೊಂದಿಗೆ ಘರ್ಷಣೆ ನಡೆಸಿದ ಪರಿಣಾಮ ಕನಿಷ್ಠ 45 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ಫಿಜಾಮ್ ಹೇಮ್ಜಿತ್ (20) ಮತ್ತು ಹಿಜಾಮ್ ಲಿಂತೋಯಿಂಗಂಬಿ (17) ಜುಲೈನಿಂದ ನಾಪತ್ತೆಯಾಗಿದ್ದರು. ಈಗ ಹೊರಬಿದ್ದಿರುವ ಎರಡು ಫೋಟೋಗಳಲ್ಲಿ ವಿದ್ಯಾರ್ಥಿಗಳು ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಮತ್ತು ಇನ್ನೊಂದರಲ್ಲಿ ಎರಡು ಮೃತದೇಹಗಳನ್ನು ಹೊಂದಿರುವಂತೆ ತೋರಿಸಲಾಗಿದೆ.

Advertisement

ಹೊಸ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಸರಕಾರ ಮಂಗಳವಾರ ಮರು ಹೇರಿಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next