Advertisement

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

10:42 PM Nov 14, 2024 | Team Udayavani |

ನವದೆಹಲಿ/ಇಂಫಾಲ:ಮಣಿಪುರದ ಜಿರಿಬಾಮ್‌ ಜಿಲ್ಲೆ ಸೇರಿದಂತೆ ಹಲವೆಡೆ ಮತ್ತೆ ಹಿಂಸಾಕೃತ್ಯಗಳು ಹೆಚ್ಚಿದ್ದರಿಂದ ಆ ರಾಜ್ಯದಲ್ಲಿ ಮತ್ತೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಮತ್ತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

Advertisement

ಜತೆಗೆ ಈ ನಿಟ್ಟಿನಲ್ಲಿ ಗುರುವಾರ ಆದೇಶವನ್ನೂ ಹೊರಡಿಸಿದೆ. ಒಟ್ಟು 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಕಾಯ್ದೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಸೋಮವಾರ ನಡೆದಿದ್ದ ಬೆಳವಣಿಗೆಯಲ್ಲಿ 11 ಮಂದಿ ಕುಕಿ ಉಗ್ರರನ್ನು ಗುಂಡು ಹಾರಿಸಿ ಕೊಂದ ಘಟನೆ, 6 ಮಂದಿ ನಾಗರಿಕರ ಅಪಹರಣ ಘಟನೆ ನಡೆದ ಬಳಿಕ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಶಸ್ತ್ರಾಸ್ತ್ರ ವಶಕ್ಕೆ:
ಈ ನಡುವೆ, ಜಿರಿಬಾಮ್‌, ಚುರುಚಾಂದ್‌ಪುರ ಜಿಲ್ಲೆಗಳ ಹಲವು ಭಾಗಗಳಲ್ಲಿ ಯೋಧರು ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 36 ಸಜೀವ ಗುಂಡುಗಳು, ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏನಿದು ವಿಶೇಷಾಧಿಕಾರ ಕಾಯ್ದೆ?
– ದಂಗೆ, ಸಂಘರ್ಷ ಪೀಡಿತ ಸ್ಥಳಗಳಲ್ಲಿ ಈ ಕಾಯ್ದೆ ಜಾರಿ ಮಾಡಲಾಗುತ್ತದೆ
– ಗಲಭೆ ತುತ್ತಾಗಿರುವ ಸ್ಥಳದಲ್ಲಿ ಶೋಧ, ಸಂಶಯ ಬಂದವರ ಸೆರೆಗೆ ಸೇನೆಗೆ ಅಧಿಕಾರ
– ಪರಿಸ್ಥಿತಿ ನಿಯಂತ್ರಣಕ್ಕೆ ಗುಂಡು ಹಾರಿಸಲೂ ಯೋಧರಿಗೆ ಇದೆ ಅವಕಾಶ

Advertisement
Advertisement

Udayavani is now on Telegram. Click here to join our channel and stay updated with the latest news.

Next