Advertisement

ಮಣಿಪಾಲ: ಜೀವ ಬೆದರಿಕೆ: ದೂರು, ಪ್ರತಿದೂರು

01:11 AM Dec 29, 2022 | Team Udayavani |

ಮಣಿಪಾಲ: ವಿದ್ಯಾರತ್ನ ನಗರದಲ್ಲಿ ಅಂಗಡಿ ಮಾಲಕರು ಮತ್ತು ಪಕ್ಕದ ಮನೆಯವರು ಕಿರುಕುಳ, ಜೀವ ಬೆದರಿಕೆ ಆರೋಪಿಸಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

Advertisement

ಮನೆಯ ಪಕ್ಕದ ಬಳಿ ಅಂಗಡಿ ಇಟ್ಟುಕೊಂಡಿರುವ ಅಪೇûಾ, ಅವರ ಪತಿ ನಿತೇಶ್‌ ನಾಯಕ್‌ ಅವರು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಿಗರೇಟು ಮಾರಾಟ ಮಾಡಿ ಪರಿಸರದಲ್ಲಿ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ತಿಳಿಸಲಾಗಿತ್ತು.

ಇದರಿಂದ ನಿತೇಶ್‌ ನಾಯಕ್‌ ದಂಪತಿ ಮನಸ್ತಾಪಗೊಂಡು ಡಿ. 26ರಂದು ಸಂಜೆ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ, ಬೈದು, ಜೀವ ಬೆದರಿಕೆ ಹಾಕಿದ್ದಾರೆ. ಮಾವ ಅನಂತಕೃಷ್ಣ ಶೆಣೈ ಅವರಿಗೆ ಥಳಿಸಿದ್ದಾರೆ ಎಂದು ಅನುರಾಧಾ ದೂರು ನೀಡಿದ್ದಾರೆ.

ಪಕ್ಕದ ಮನೆಯ ಅನಂತಕೃಷ್ಣ ಶಣೈ ಅವರು ಅಂಗಡಿಯಲ್ಲಿರುವ ಯುವತಿಗೆ ಕಿರುಕುಳ ಕೊಡು ತ್ತಿದ್ದು, ಇದನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ಬೈದಿದ್ದಾರೆ. ಅವರ ಸೊಸೆ ಅನುರಾಧಾ ಶೆಣೈ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅಪೇಕ್ಷಾ ಜಿ. ನಾಯಕ್‌ ಅವರು ಪ್ರತಿದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next