Advertisement

Manipal: ಆಟೋ ರಿಕ್ಷಾಕ್ಕೆ ಪಿಕಪ್‌ ವಾಹನ ಢಿಕ್ಕಿ

09:06 PM Dec 31, 2023 | Team Udayavani |

ಮಣಿಪಾಲ: ಪಿಕಪ್‌ ವಾಹನ ಢಿಕ್ಕಿ ಹೊಡೆದು ರಿಕ್ಷಾ ಮಗುಚಿಬಿದ್ದ ಘಟನೆ ನಡೆದಿದೆ.

Advertisement

ಆಟೋರಿಕ್ಷಾ ಸಿಂಡಿಕೇಟ್‌ ಸರ್ಕಲ್‌ ಕಡೆಯಿಂದ ಉಪೇಂದ್ರ ಪೈ ಸರ್ಕಲ್‌(ಕಾಯಿನ್‌ ಸರ್ಕಲ್‌)ನತ್ತ ತೆರಳುತ್ತಿದ್ದು, ರಾಯಲ್‌ ಎಂಬೆಸಿ ಅಪಾರ್ಟ್‌ಮೆಂಟ್‌ ಬಳಿಯಲ್ಲಿ ಮತ್ತೊಂದು ಭಾಗಕ್ಕೆ ತಿರುಗುತ್ತಿದ್ದಾಗ ಕಾಯಿನ್‌ ಸರ್ಕಲ್‌ ಕಡೆಯಿಂದ ಅತಿ ವೇಗದಿಂದ ಬಂದ ಪಿಕಪ್‌ ವಾಹನ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.

ರಿಕ್ಷಾ ಮಗುಚಿ ಬಿದ್ದ ಕಾರಣ ಹಂಗಾರಕಟ್ಟೆಯ ರಾಘವೇಂದ್ರ ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next