Advertisement

Manipal ಫೋಟೊಬಯೊಮಾಡ್ಯುಲೇಶನ್‌ ಸಮ್ಮೇಳನ ಪೂರ್ವ ಸಭೆ

12:45 AM Sep 14, 2023 | Team Udayavani |

ಮಣಿಪಾಲ: ಮಾಹೆ, ಫೋಟೊ ಬಯೊಮಾಡ್ಯುಲೇಶನ್‌ ಥೆರಪಿಯ ಜಾಗತಿಕ ಸಂಘಟನೆ ಮತ್ತು ಭಾರತೀಯ ಪಾದಚಿಕಿತ್ಸೆ ಸಂಘಟನೆ ಕರ್ನಾಟಕ ವಿಭಾಗದ ಆಶ್ರಯದಲ್ಲಿ ಡಯಾಬಿಟಿಕ್‌ ಪಾದ ಪ್ರಮಾಣ ಮಾಪನ ಮತ್ತು ನಿಭಾವಣೆ ಸಮ್ಮೇಳನ “ವಾಲ್ಟ್ಕಾನ್‌-2023’ನ ಪೂರ್ವಭಾವಿ ಸಭೆಯು ಮಂಗಳವಾರ ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನ್ಸ್‌ ಕಾಲೇಜಿನಲ್ಲಿ ನಡೆಯಿತು.

Advertisement

ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ ಕಾರ್ಯಾಗಾರ ಉದ್ಘಾಟಿಸಿ, ಫೊಟೊಬಯೊಮಾಡ್ಯುಲೇಶನ್‌ ಮತ್ತು ಪೋಡಿಯಾಟ್ರಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಪ್ರಾಯೋಗಿಕ ಬೆಳವಣಿಗಳನ್ನು ವಿವರಿಸಿದರು. ಆರೋಗ್ಯ ವಿಜ್ಞಾನ ವಿಭಾಗದ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳ ಸಾಧ್ಯತೆ ಈ ಕಾರ್ಯಾಗಾರ ಮುಂದಿಟ್ಟಿದೆ ಎಂದರು.

ನೇರವಾದ ತರಬೇತಿ, ಸಂವಾದ ಕಲಾಪಗಳ ಮೂಲಕ ಈ ಕಾರ್ಯಾಗಾರ ನವೀನ ತಾಂತ್ರಿಕತೆ, ತಂತ್ರಜ್ಞಾನ, ಸೂಕ್ತ ಪ್ರಯೋಗಗಳಿಗೆ ತೆರೆದುಕೊಳ್ಳುವ ಅವಕಾಶವನ್ನು ಕೂಡ ನೀಡಿದೆ.

ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್‌ ವೇಣುಗೋಪಾಲ್, ಮಾಹೆ ಬೇಸಿಕ್‌ ಮೆಡಿಕಲ್‌ ಸೈನ್ಸ್‌ ಮುಖ್ಯಸ್ಥ ಡಾ| ಉಲ್ಲಾಸ್‌ ಕಾಮತ್‌, ಡಯಾಬಿಟಿಕ್‌ ತಜ್ಞ ಡಾ| ರಜನೀಶ್‌ ಸಕ್ಸೇನಾ, ಇಂಡಿಯನ್‌ ಪೋಡಿಯಟ್ರಿ ಸಂಘಟನೆ ಅಧ್ಯಕ್ಷ ಡಾ| ಎಪಿಎಸ್‌ ಸೂರಿ ಉಪಸ್ಥಿತರಿದ್ದರು. ಐಪಿಎ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ| ಜಿ. ಅರುಣ್‌ ಮಯ್ಯ ಸ್ವಾಗತಿಸಿ, ಮುಖೇಶ್‌ ಕುಮಾರ್‌ ಸಿನ್ಹಾ ವಂದಿಸಿದರು. ಕಾರ್ಯಾಗಾರದಲ್ಲಿ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮ ಹೊಂದಿರುವ ಅಮೆರಿಕ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಇರಾನ್‌ ದೇಶದ 200 ಉನ್ನತ ದರ್ಜೆ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ಪಾಲ್ಗೊಂಡರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next