Advertisement

ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯ: ಮಾರ್ಗಸೂಚಿ-ನಿರ್ದೇಶನಗಳ ಅನಾವರಣ

01:53 AM Nov 11, 2020 | mahesh |

ಉಡುಪಿ: ಭಾರತದ ಮುಂಚೂಣಿಯ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಒಂದಾ ಗಿರುವ ಮಣಿಪಾಲದ ಮಾಹೆ ವಿಶ್ವ ವಿದ್ಯಾನಿಲಯವು 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಕೋರ್ಸ್‌/ ಪಠ್ಯಕ್ರಮಗಳ ಮಾರ್ಗಸೂಚಿಯನ್ನು ಮಂಗಳವಾರ ನಡೆಸಿದ ವರ್ಚುವಲ್‌ ಸಭೆಯಲ್ಲಿ ಪ್ರಕಟಿಸಿದೆ.

Advertisement

ಸಂಸ್ಥೆ ದೇಶ-ವಿದೇಶಗಳಲ್ಲಿ ನೂತನ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ. ಮುಂದಿನ 2 ವರ್ಷಗಳಲ್ಲಿ ಉನ್ನತ ಶಿಕ್ಷಣವನ್ನು ವಿಸ್ತರಿಸುವ ಕುರಿತು ಮಾಹೆ ಕುಲಪತಿ ಲೆ| ಜ| ಡಾ| ವೆಂಕಟೇಶ್‌ ಅವರು ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಮತ್ತು ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಅವರೊಂ ದಿಗೆ ನಡೆಸಿದ ವರ್ಚುವಲ್‌ ಸಭೆಯಲ್ಲಿ ಯೋಜನೆಗಳನ್ನು ಹಂಚಿಕೊಂಡರು. ಪಿಆರ್‌ ಮತ್ತು ಮಾಧ್ಯಮ ನಿರ್ದೇಶಕ ಎಸ್‌.ಪಿ. ಕರ್‌ ಉಪಸ್ಥಿತರಿದ್ದರು.

ನೂತನ ಕ್ಯಾಂಪಸ್‌ಗಳು
ಮಾಹೆ ಇತ್ತೀಚೆಗೆ ಭಾರತ ಸರಕಾರದ ಶಿಕ್ಷಣ ಇಲಾಖೆಯೊಂದಿಗೆ ಪರಸ್ಪರ ತಿಳಿವಳಿಕೆ ಒಡಂಬಡಿಕೆಗೆ ಸಹಿ ಹಾಕಿದ್ದು, ಇದರಡಿ ಮಾಹೆಯನ್ನು ಅಧಿಕೃತವಾಗಿ
ಶ್ರೇಷ್ಠ ವಿದ್ಯಾ ಸಂಸ್ಥೆ (ಇನ್‌ಸ್ಟಿಟ್ಯೂಶನ್‌ ಆಫ್ ಎಮಿನೆನ್ಸ್‌) ಎಂದು ಪ್ರಕಟಿಸಲಾಗಿದೆ.

ವರ್ಚುವಲ್‌ ಘಟಿಕೋತ್ಸವ
ಪ್ರಸಕ್ತ ವರ್ಷದ ಘಟಿಕೋತ್ಸವ ನ. 20, 21 ಮತ್ತು 22ರಂದು ವರ್ಚುವಲ್‌ ಮಾದರಿಯಲ್ಲಿ ನಡೆಯಲಿದೆ. 3,500 ಪದವೀಧರರು ನೋಂದಾಯಿಸಿಕೊಂಡಿದ್ದಾರೆ.

ಮೌಲ್ಯಾಧಾರಿತ ಶಿಕ್ಷಣ
ರಾಷ್ಟ್ರೀಯ ಶಿಕ್ಷಣ ನೀತಿಯ ಅನು ಷ್ಠಾನ ಸ್ವಾಗತಾರ್ಹ ಬದಲಾವಣೆ ಯಾಗಿದೆ. ಹೆಚ್ಚು ದೃಢವಾದ ಮತ್ತು ಮೌಲ್ಯಾಧಾರಿತ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಇದು ಖಂಡಿತವಾಗಿ ನೆರವಾಗಲಿದೆ ಎಂದು ಡಾ| ನಾರಾಯಣ ಸಭಾಹಿತ್‌ ಅವರು ತಿಳಿಸಿದರು.

Advertisement

52 ರಾಷ್ಟ್ರಗಳ ವಿದ್ಯಾರ್ಥಿಗಳು
ಮಾಹೆಯು ಮಣಿಪಾಲದಲ್ಲಿ ಮಾತ್ರವಲ್ಲದೆ ಮಂಗಳೂರು ಮತ್ತು ಬೆಂಗಳೂರುಗಳಲ್ಲಿ ಕ್ಯಾಂಪಸ್‌ ಹೊಂದಿದೆ. ಸಾಗರೋತ್ತರವಾಗಿ ದುಬಾೖ (ಯುಎಇ) ಮತ್ತು ಮೆಲಕಾ (ಮಲೇಷಿಯಾ)ಗಳಲ್ಲಿಯೂ ಕ್ಯಾಂಪಸ್‌ಗಳಿವೆ. ಕ್ಯಾಂಪಸ್‌ಗಳು ವಿಶ್ವಮಟ್ಟದ ಸೌಲಭ್ಯ ಹೊಂದಿವೆ. ಭಾರತದ ಎಲ್ಲೆಡೆಯ ಮತ್ತು ಜಗತ್ತಿನಲ್ಲಿ ಇಂಗ್ಲಿಷ್‌ ಭಾಷೆ ಮಾತನಾಡುವ 57 ದೇಶಗಳ ವಿದ್ಯಾರ್ಥಿಗಳನ್ನು ಸಂಸ್ಥೆ ಆಕರ್ಷಿಸಿದೆ. ವಿಶವಿದ್ಯಾನಿಲಯದಲ್ಲಿ ಪ್ರಸ್ತುತ 2,856 ಬೋಧನಾ ಸಿಬಂದಿ ಮತ್ತು 9,035 ಬೆಂಬಲ ಮತ್ತು ಸೇವಾ ಸಿಬಂದಿ ಇದ್ದಾರೆ.

ಸ್ಥಾಪಕರ ಆದರ್ಶ
ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ| ಟಿಎಂಎ ಪೈಯವರ ದಾರ್ಶನಿಕತೆ, ದೂರದೃಷ್ಟಿಯನ್ನು ಡಾ| ಎಚ್‌.ಎಸ್‌. ಬಲ್ಲಾಳ್‌ ಬಣ್ಣಿಸಿದರು. ಅವರು ವೈದ್ಯಕೀಯ, ಎಂಜಿನಿಯರಿಂಗ್‌, ದಂತವೈದ್ಯ, ಫಾರ್ಮಸಿ, ಆರ್ಕಿಟೆಕ್ಚರ್‌, ಕಾನೂನು, ಶಿಕ್ಷಣ, ಮ್ಯಾನೇಜ್‌ಮೆಂಟ್‌ ಕಾಲೇಜುಗಳನ್ನು ಆರಂಭಿಸಿದ್ದರು. ಸ್ಥಾಪಕರ ಮುಂದಾಲೋಚನೆಗಳನ್ನು ಡಾ| ರಾಮದಾಸ್‌ ಪೈ, ಡಾ| ರಂಜನ್‌ ಪೈ ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಕೌಶಲಾಧಾರಿತ ಕಲಿಕೆ
ಸಂಸ್ಥೆಯು ಹೆಚ್ಚು ಕೌಶಲಾಧಾರಿತ ಕಲಿಕೆಯ ಕಡೆಗೆ ಸಾಗುತ್ತಿದೆ. ಸರಕಾರ ಮತ್ತು ವಿ.ವಿ.ಯ ಅನುದಾನ ಸಮಿ ತಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಪೋಷಕರ ಒಪ್ಪಿಗೆ ಜತೆಗೆ ಹಂತ ಹಂತವಾಗಿ ವಿದ್ಯಾರ್ಥಿ ಗಳನ್ನು ಆಹ್ವಾನಿಸುವ ಯೋಜನೆ ಯನ್ನು ಮಾಹೆ ಕೈಗೊಳ್ಳುತ್ತಿದೆ. ಕಾರ್ಪೊರೆಟ್‌ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಉದ್ಯೋಗಾವಕಾಶ ನೀಡುವುದು ಮತ್ತು ಇಂಟರ್ನ್ಶಿಪ್‌ ಅವಕಾಶ ಮಾಡಿಕೊಡುವುದಕ್ಕೆ ವಿದ್ಯಾರ್ಥಿಗಳಿಗಾಗಿ ಪುನರ್‌ ನವೀಕೃತ ಪ್ರಯತ್ನಗ ಳನ್ನು ಕೈಗೊಳ್ಳುವತ್ತ ಪ್ರಾಥಮಿಕವಾಗಿ ಗಮನ ಹರಿಸಲಾಗುವುದು ಎಂದು ಡಾ| ಬಲ್ಲಾಳ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next