Advertisement

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

08:02 PM Nov 18, 2024 | Team Udayavani |

ಮಣಿಪಾಲ: ರೈಲು ಪ್ರಯಾಣದ ಸಂದರ್ಭ ಪ್ರಯಾಣಿಕರೋರ್ವರ ಒಡವೆ ಕಳವಾದ ಘಟನೆ ನ. 16ರಂದು ನಡೆದಿದೆ.

Advertisement

ಅವಿನಾಶ್‌ ಅವರು ನ. 15ರಂದು ಕುಟುಂಬದ ಸದಸ್ಯರೊಂದಿಗೆ ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಒಡವೆ ಹಾಗೂ ಬಟ್ಟೆಗಳಿದ್ದ 4 ಸೂಟ್‌ಕೇಸ್‌ಗಳನ್ನು ಬೀಗ ಹಾಕದೇ ಜಿಪ್‌ ಲಾಕ್‌ ಮಾಡಿ ಇಟ್ಟಿದ್ದು, ನ. 16ರಂದು ಇಂದ್ರಾಳಿ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಿ ಸಂಜೆ ಬ್ಯಾಗ್‌ ತೆರೆದಾಗ 2 ಬ್ಯಾಗ್‌ಗಳಲ್ಲಿ ಇಟ್ಟಿದ್ದ 63 ಲಕ್ಷ ರೂ. ಬೆಲೆಬಾಳುವ 900 ಗ್ರಾಂ ಚಿನ್ನದ ಒಡವೆಗಳು ಕಳ್ಳತನವಾಗಿರುವುದು ಗೊತ್ತಾಗಿದೆ.

ಪ್ರಯಾಣದ ಮಧ್ಯೆ ಪನ್ವೇಲ್‌ನಿಂದ ಕಂಕಾವ್ಳಿ ನಿಲ್ದಾಣದ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next