Advertisement
ರೋಗಿಗಳ ಉತ್ತಮ ಸೇವೆಗಾಗಿ ಮತ್ತು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಸಾಧನದಲ್ಲಿ ಸಮಾಲೋಚನೆಗಳನ್ನು ಒದಗಿಸಲು ಮೈ ಟೆಲಿ ಒಪಿಡಿ ಅಥವಾ ವೀಡಿಯೋ ಸಮಾಲೋಚನೆ ಒಂದು ಪ್ರಬಲ ಸಾಧನ. ವೈದ್ಯರು ಮತ್ತು ರೋಗಿಗಳು ಈಗ ಟೆಲಿಮೆಡಿಸಿನ್ ಅಥವಾ ವೀಡಿಯೋ ಸಮಾಲೋಚನೆಯನ್ನು ಆ್ಯಪ್ ಡೌನ್ಲೋಡ್ ಮಾಡದೆ ಬಳಸಬಹುದು. ಏಕೆಂದರೆ ಇದು ಎಲ್ಲ ಫೋನ್‌ಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತದೆ.ಈ ಸೇವೆಯಡಿ ಜನರು ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ದೂರವಾಣಿ ಕರೆ ಮೂಲಕ ಎಲ್ಲ ವಿಭಾಗಗಳ ವೈದ್ಯರನ್ನು ಸಂಪರ್ಕಿಸಬಹುದು. ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ 24ಗಿ7 ಕಾರ್ಯನಿರ್ವ ಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ.
ಸಂಪರ್ಕ ಸಂಖ್ಯೆ: 080 47192235