Advertisement
120 ಎಕ್ರೆ ಪ್ರದೇಶದಲ್ಲಿ ಹರಡಿರುವ ಈ ಕೆರೆ ಪರಿಸರಕ್ಕೆ ಪ್ರವೇಶಿಸಲು ಒಂದಲ್ಲ, ಎರಡಲ್ಲ. ಐದರಿಂದ ಆರು ಪ್ರವೇಶ ದ್ವಾರಗಳಿವೆ. ಆದರೆ, ಕೆಲವನ್ನು ಹೊರತುಪಡಿಸಿದರೆ ಉಳಿದವು ಪ್ರವೇಶಕ್ಕೆ ಸೂಕ್ತವಾಗಿ ಕಾಣಿಸುತ್ತಿಲ್ಲ.
Related Articles
Advertisement
ಭಯಾನಕ ದಾರಿಮಣಿಪಾಲ ನಗರ, ಎಂಜೆಸಿ ಮೈದಾನ, ಎಂಐಟಿ, ಪೊಲೀಸ್ ಕ್ವಾರ್ಟರ್ಸ್ ಕಡೆಯಿಂದ ಪ್ಲಾನೆಟೋರಿಯಂ ಸಮೀಪವಾಗಿ ಮಣ್ಣಪಳ್ಳ ಕೆರೆಗೆ ಬರಲು ಒಂದು ಪ್ರವೇಶವಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಭಯ ಹುಟ್ಟಿಸುವಂತಿದೆ ಎಂದರೆ, ಯಾರಾದರೂ ಮೊದಲ ಬಾರಿಗೆ ಈ ರಸ್ತೆಯಲ್ಲಿ ಬಂದರೆ ತಾವು ಯಾವುದೋ ದೊಡ್ಡ ಕಾಡಿನ ನಡುವೆ ಸಿಕ್ಕಿ ಹಾಕಿಕೊಂಡಿದ್ದೇವೆ ಎಂಬ ಭಯ ಕಾಡಬಹುದು. ಇಲ್ಲಿ ಸುತ್ತಲೂ ಹುಲ್ಲು ಪೊದೆಗಳು ಬೆಳೆದಿದ್ದು ಕೇವಲ ನಾಲ್ಕು ಅಡಿಯ ರಸ್ತೆಯಲ್ಲಿ ಗುಹೆಯಂಥ ಜಾಗದಲ್ಲಿ ಸಾಗಬೇಕು. ಇದೇ ದಾರಿಯಾಗಿ ದೇಶದ ನಾನಾ ಭಾಗದ ಕಾರ್ಮಿಕರು ಕೂಡ ಕೆರೆಯನ್ನು ದಾಟಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಹೀಗಾಗಿ ಈ ದಾರಿಯಲ್ಲಿ ಹೆಣ್ಮಕ್ಕಳು ಇಲ್ಲಿ ಒಬ್ಬೊಬ್ಬರಾಗಿ ಹೋಗುವುದಕ್ಕೆ ಭಯಪಡುವ ಸ್ಥಿತಿ ಇದೆ. ಇಲ್ಲಿ ದಾರಿಯ ಸುತ್ತ ಮಾತ್ರವಲ್ಲ, ಸುತ್ತಮುತ್ತಲಿನ ಜಾಗವೆಲ್ಲವೂ ಪೊದೆಗಳಿಂದ ಆವರಿಸಲ್ಪಟ್ಟಿದೆ. ಮನುಷ್ಯರು ಮಾತ್ರವಲ್ಲ ಬೇರೆ ಪ್ರಾಣಿಗಳ ಭಯವೂ ಕಾಡುತ್ತದೆ.
ಮಣ್ಣಪಳ್ಳ ಕೆರೆ ಎಂದರೆ ಯಾರು ಬೇಕಾದರೂ ಬರಬಹುದಾದ ಪ್ರದೇಶ. ಇಷ್ಟು ದೊಡ್ಡ ಪ್ರದೇಶದಲ್ಲಿ ಏನೇ ಆದರೂ ಯಾರೂ ಕೇಳುವವರಿಲ್ಲ. ಯಾವ ಪ್ರವೇಶ ದ್ವಾರದಲ್ಲೂ ಭದ್ರತೆ ಇಲ್ಲ, ಒಬ್ಬನೇ ಒಬ್ಬ ಸಿಬಂದಿ ಇಲ್ಲ. ಇಲ್ಲಿ ಪ್ರವೇಶ ದ್ವಾರಗಳನ್ನು ಮುಚ್ಚುವ ಪರಿಪಾಠವೇ ಇಲ್ಲ. ದಿನದ 24 ಗಂಟೆಯೂ ಇದು ಮುಕ್ತ ಮುಕ್ತ. ಮುಚ್ಚಬೇಕೆಂದರೂ ಇದಕ್ಕೆ ಗೇಟುಗಳೇ ಇಲ್ಲ! ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಇದು ತೆರೆದಿರುತ್ತದೆ ಎಂಬ ಬೋರ್ಡ್ ಇದೆ. ಆದರೆ, ಏಳು ಗಂಟೆಯ ಬಳಿಕವೂ ಯಾರಾದರೂ ಇದ್ದಾರಾ ಎಂದು ಪರಿಶೀಲನೆ ನಡೆಸುವ ವ್ಯವಸ್ಥೆ ಇಲ್ಲಿಲ್ಲ. ರಾತ್ರಿಯ ನಂತರವೂ ಇಲ್ಲಿ ಕೆಲವರು ಪಾರ್ಟಿ ಮಾಡುತ್ತಿರುವುದಕ್ಕೆ ಕುರುಹುಗಳು ಕಾಣಸಿಗುತ್ತವೆ. ಇಲ್ಲಿ ಸ್ವಲ್ಪ ಮಟ್ಟಿಗಾದರೂ ಭದ್ರತೆಯ ಭಾವ ಒದಗಿಸುವವರು ಬೋಟಿಂಗ್ ವ್ಯವಸ್ಥೆ ನೋಡಿಕೊಳ್ಳುವವರು. ಆದರೆ, ಎಲ್ಲ ಭಾಗವನ್ನು ಅವರಾದರೂ ಹೇಗೆ ನೋಡಿಕೊಳ್ಳಬೇಕು! ಆತಂಕ ಹುಟ್ಟಿಸುವ ಸಂಗತಿಗಳು 01 ಮಣ್ಣಪಳ್ಳ ಪ್ರವೇಶಕ್ಕೆ ಐದಾರು ದ್ವಾರಗಳಿವೆ. ಆದರೆ, ಒಂದೆರಡು ಹೊರತುಪಡಿಸಿ ಉಳಿದವು ಭಯಹುಟ್ಟಿಸುತ್ತವೆ.
02 ಪ್ರಸನ್ನ ಗಣಪತಿ ಪಕ್ಕದ ದ್ವಾರ ಬಿಟ್ಟರೆ ಬೇರೆ ಯಾವುದಕ್ಕೂ ಗೇಟುಗಳೇ ಇಲ್ಲ. ಯಾರು ಬೇಕಾದರೂ ನುಗ್ಗಬಹುದು.
03 ಇಡೀ ಕೆರೆಗೆ ಒಬ್ಬ ನಿರ್ವಾಹಕನಾಗಲೀ, ಕಾವಲುಗಾರನಾಗಲೀ ಇಲ್ಲ. ಅಪಾಯ ಸಂಭವಿಸಿದರೆ ಕೇಳುವವರೂ ಇಲ್ಲ.
04 ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಓಪನ್ ಎಂದು ಬೋರ್ಡಿದೆ. ಆದರೆ, ರಾತ್ರಿ ಇಡೀ ಇಲ್ಲೇ ಉಳಿದರೂ ಕೇಳುವವರಿಲ್ಲ.
05 ಬೆಳಗ್ಗೆ ಮತ್ತು ಸಂಜೆ ನಡಿಗೆದಾರರು, ವಾಯು ವಿಹಾರಿಗಳು ಬರುತ್ತಾರೆ. ನಡುವೆ ಪ್ರೇಮಿಗಳದೇ ಕಾರುಬಾರು!
06 ಟ್ರ್ಯಾಕ್ನ ಉದ್ದಕ್ಕೂ ಸುತ್ತಲೂ ಪೊದೆ, ಗಿಡ-ಗಂಟಿಗಳು ಬೆಳೆದಿವೆ. ಹೀಗಾಗಿ ಆತಂಕದಿಂದಲೇ ಹೆಜ್ಜೆ ಇಡಬೇಕು.
07 ಇಷ್ಟೆಲ್ಲ ಜನ ಬರುವ, ಮಣ್ಣಪಳ್ಳದಲ್ಲಿ ಭದ್ರತೆಗೆ ಸೂಕ್ತವಾದ ಸಿಸಿ ಕೆಮರಾ ವ್ಯವಸ್ಥೆ ಇಲ್ಲ. ಎಲ್ಲೆಂದರಲ್ಲಿ ಪ್ರೇಮಿಗಳ ಪ್ರೇಮಾಲಾಪ!
ಮಣ್ಣಪಳ್ಳ ಕೆರೆ ಪ್ರದೇಶದಲ್ಲಿ ಹೇಳುವವರೂ ಕೇಳುವವರು ಯಾರೂ ಇಲ್ಲದೆ ಇರುವುದರಿಂದ ಪ್ರೇಮಿಗಳ ಸ್ವರ್ಗವಾಗಿದೆ! ಹಗಲಿಡೀ ಕಾಲೇಜಿನ ಹುಡುಗ-ಹುಡುಗಿಯರು ಮತ್ತು ಜೋಡಿಗಳು ಇಲ್ಲಿ ಬಂದು ಪ್ರೇಮಾಲಾಪದಲ್ಲಿ ತೊಡಗುವುದು ಮಾಮೂಲಾಗಿದೆ. ಕೆಲವೊಮ್ಮೆ ಅವರ ವರ್ತನೆಗಳು ಸಭ್ಯರಿಗೆ ಮುಜುಗರ ಉಂಟು ಮಾಡುವಂತಿರುತ್ತವೆ. ಕೆಲವು ದಿನಗಳ ಹಿಂದೆ ಪೊಲೀಸರು ಇಲ್ಲಿಗೆ ದಾಳಿ ನಡೆಸಿದಾಗ 20ಕ್ಕೂ ಅಧಿಕ ಜೋಡಿಗಳು ಸಿಕ್ಕಿಬಿದ್ದಿದ್ದವು. ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.