Advertisement

ಮಣಿಪಾಲ್‌ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್‌ ಕೇಂದ್ರ ಕಾರ್ಯಾರಂಭ

12:13 PM Oct 31, 2018 | |

ಬೆಂಗಳೂರು: ಭಾರತದ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಮುಂಚುಣಿಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯ ಕ್ಯಾನ್ಸರ್‌ ರೋಗಶಾಸ್ತ್ರ ವಿಭಾಗದ ಮಣಿಪಾಲ್‌ ಸಮಗ್ರ ಕ್ಯಾನ್ಸರ್‌ ಕೇಂದ್ರ(ಎಂಸಿಸಿಸಿ)ಕ್ಕೆ ನಟಿ ಭಾರತಿ ವಿಷ್ಣುವರ್ಧನ್‌, ನಟಿ ಪ್ರಿಯಾಂಕಾ ಉಪೇಂದ್ರ ಮತ್ತು ನಟ ಅನಿರುದ್ಧ ಜಾಟ್ಕರ್‌ ಸೋಮವಾರ ಚಾಲನೆ ನೀಡಿದ್ದಾರೆ.

Advertisement

ಈ ಕೇಂದ್ರದಲ್ಲಿ ಸ್ತನ ಕ್ಯಾನ್ಸರ್‌ ಪರೀಕ್ಷೆ ಮತ್ತು ಚಿಕಿತ್ಸೆಗೆ ಅತ್ಯಾಧುನಿಕ ಡಿಜಿಟಲ್ ಮ್ಯಾಮೋಗ್ರಫಿ ಜೊತೆಗೆ ಟೋಮೋಸಿಂಥೆಸಿಸ್‌ ತಂತ್ರಜ್ಞಾನ ಹೊಂದಿದೆ. ದೇಶದಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೇಂದ್ರ, ವೈದ್ಯಕೀಯ, ಶಸ್ತ್ರಕ್ರಿಯಾ ಮತ್ತು ವಿಕಿರಣ ಕ್ಯಾನ್ಸರ್‌ ರೋಗಶಾಸ್ತ್ರದಲ್ಲಿ ಮೂರನೇ ಉನ್ನತ ಹಂತದ ವಿಶೇಷ ಸೇವೆಗಳನ್ನು ನಿರ್ದಿಷ್ಟ ಕ್ಷೇತ್ರಗಳಿಗೆ ಬದ್ಧತೆಯಿಂದ ಒಂದೇ ಸೂರಿನಡಿ ನೀಡಲಿದೆ.

ಮಣಿಪಾಲ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಎಚ್‌.ಸುದರ್ಶನ್‌ ಬಲ್ಲಾಳ್‌ ಮಾತನಾಡಿ, ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಕ್ಯಾನ್ಸರ್‌ ಜಾಗೃತಿಯ ಉದ್ದೇಶದಲ್ಲಿ ನಾವು ಮುಂಚೂಣಿಯಲ್ಲಿ ಶ್ರಮಿಸುತ್ತಿದ್ದೇವೆ. ಕ್ಯಾನ್ಸರ್‌ ಆರೋಗ್ಯ ಸೇವೆ ಸುಧಾರಿಸಲು ಮತ್ತು ರೋಗಿಗಳು ಹೆಚ್ಚು ಕಾಲ ಉತ್ತಮ ಜೀವನ ಸಾಗಿಸುವುದಕ್ಕಾಗಿ, ಉತ್ತಮ ಚಿಕಿತ್ಸೆ ಪಡೆಯುವುದಕ್ಕೆ ನೆರವಾಗುವ ದೃಷ್ಟಿಕೋನದೊಂದಿಗೆ ಈ ನೂತನ ಕೇಂದ್ರ ಆರಂಭಿಸಿದ್ದೇವೆ ಎಂದರು.

ನಮ್ಮ ವೈದ್ಯರಿಂದ ಅತ್ಯುತ್ತಮ ವೈದ್ಯಕೀಯ ಪರಿಣತಿಯೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ  ಉತ್ಕೃಷ್ಟತೆಗೆ  ಮಾದರಿಯಾದ ಸ್ಥಳವನ್ನು ನಾವು ಸೃಷ್ಟಿಸಲು ಇಚ್ಛಿಸಿದ್ದೇವೆ. ಈ  ವಿಭಾಗಗಳಲ್ಲಿ ಮಹಿಳಾ ರೋಗಶಾಸ್ತ್ರ, ನರರೋಗ ಶಸ್ತ್ರಚಿಕಿತ್ಸೆ,  ಪ್ಲಾಸ್ಟಿಕ್‌ ಮತ್ತು  ಪುನರ್‌ ನಿರ್ಮಾಣ ಶಸ್ತ್ರಚಿಕಿತ್ಸೆ, ಮೂತ್ರರೋಗಶಾಸ್ತ್ರ ಮುಂತಾದ ಅನೇಕ ವಿಭಾಗಗಳು ಸೇರಿವೆ. ಒಂದೇ ಸೂರಿನಡಿ ಬದ್ಧತೆಯ ವೈದ್ಯಕೀಯ ಸೇವೆ ದೊರೆಯಲಿದೆ ಎಂದು ಹೇಳಿದರು.

ಮಣಿಪಾಲ್‌ ಆಸ್ಪತ್ರೆಯ ಕ್ಯಾನ್ಸರ್‌ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್‌.ಪಿ.ಸೋಮಶೇಖರ್‌ ಮಾತನಾಡಿ, ತಂತ್ರಜ್ಞಾನದಲ್ಲಿ ನಾವು ಉನ್ನತಿ ಸಾಧಿಸುವುದರ ಜತೆಗೆ ರೋಬೊಟಿಕ್ಸ್‌, ವಾಟ್ಸನ್ಸ್‌ ಅಥವಾ ಟೋಮೊಸಿಂಥೆಸಿಸ್‌ ಮೊದಲಾದ ಆಧುನಿಕ ವ್ಯವಸ್ಥೆಯನ್ನು ಚಿಕಿತ್ಸೆಯಲ್ಲಿ ಅಳವಡಿಸುತ್ತಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next