ಮಣಿಪಾಲ: ಮಾಹೆ ವಿ.ವಿ.ಯು ಭಾರತೀಯ ವಿಶ್ವವಿದ್ಯಾಲಯ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಅಖಿಲ ಭಾರತೀಯ ಅಂತರ್ ವಲಯ-ಅಂತರ್ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಸೋಮವಾರ ಮಾಹೆ ಎಂಡ್ ಪಾಯಿಂಟ್ ಮೈದಾನದಲ್ಲಿ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹಾಗೂ ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್ ಅವರು ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು.
ಸಹ ಕುಲಪತಿ ಡಾ| ಶರತ್ ಕೆ. ರಾವ್ ಅವರು 16 ತಂಡಗಳನ್ನು ಘೋಷಿಸಿದರು. ಮಾಹೆ ಕ್ರೀಡಾ ಕೌನ್ಸಿಲ್ ಮುಖ್ಯ ಸಂಯೋಜಕ ಎಂಐಟಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ| ಉಪೇಂದ್ರ ನಾಯಕ್ ಉಪಸ್ಥಿತರಿದ್ದರು. ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಕ್ರಿಕೆಟಿಗರಾದ ನಿಶ್ಚಿತ್ ಹಾಗೂ ತೇಜಶ್ವಿನಿ ಉದಯ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಕ್ರೀಡಾ ಕೌನ್ಸಿಲ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ಸ್ವಾಗತಿಸಿದರು. ಎಂಐಸಿ ಪ್ರಾಧ್ಯಾಪಕ ಡಾ| ಪದ್ಮಕುಮಾರ್ ನಿರೂಪಿಸಿದರು. ಕ್ರೀಡಾ ಕೌನ್ಸಿಲ್ ಡೆಪ್ಯೂಟಿ ಡೈರೆಕ್ಟರ್ ಡಾ| ದೀಪಕ್ ರಾವ್ ಬಾಯರಿ ವಂದಿಸಿದರು.
ಮಾ. 5ರ ವರೆಗೂ ಪಂದ್ಯಾವಳಿ ನಡೆಯಲಿದೆ. ವಿವಿ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಜಯ ಸಾಧಿಸಿರುವ ದೇಶದ 4 ವಲಯಗಳ ತಲಾ 4 ತಂಡಗಳಂತೆ 16 ತಂಡಗಳ ಮಧ್ಯೆ ಈ ಟೂರ್ನಿ ನಡೆಯಲಿದೆ.