ಬುಡಾಪೆಸ್ಟ್ (ಹಂಗೇರಿ): ಆತಿಥೇಯ ನಾಡಿನ ಟಿಟಿ ಆಟಗಾರರ ಸವಾಲನ್ನು ಮೆಟ್ಟಿನಿಂದ ಮಣಿಕಾ ಬಾತ್ರಾ-ಜಿ. ಸಥಿಯನ್ “ಬುಡಾಪೆಸ್ಟ್ ಡಬ್ಲ್ಯುಟಿಟಿ ಕಂಟೆಂಡರ್’ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಫೈನಲ್‌ನಲ್ಲಿ 94ನೇ ರ್‍ಯಾಂಕಿಂಗ್‌ನ ಹಂಗೇರಿಯ ನಾಂಡರ್ ಎಕ್ಸೇಕಿ-ಡೋರಾ ಮದರಾಜ್ ವಿರುದ್ಧ 11-9, 9-11, 12-10, 11-6 ಅಂತರದ ಜಯ ಸಾಧಿಸಿದರು.
ಮೊದಲೆರಡು ಗೇಮ್‌ಗಳಲ್ಲಿ ಸಮಬಲದ ಪೈಪೋಟಿ ಕಂಡುಬಂತು. 3ನೇ ಗೇಮ್ ಹೆಚ್ಚು ತೀವ್ರತೆ ಪಡೆಯಿತು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಭಾರತದ ಜೋಡಿ ಸುಲಭ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಹೆಚ್ಚು ಮಿಕ್ಸೆಡ್ ಗೇಮ್ಸ್‌ಗಳಲ್ಲಿ ಜತೆಯಾಗಿ ಕಾಣಿಸಿಕೊಳ್ಳದ ಭಾರತದ ಆಟಗಾರರಿಬ್ಬರಿಗೂ ಇದೊಂದು ಸ್ಮರಣೀಯ ಜಯವಾಗಿದೆ.
ಮಣಿಕಾ ಬಾತ್ರಾ ಏಶ್ಯನ್ ಗೇಮ್ಸ್‌ನಲ್ಲಿ ಅಚಂತ ಶರತ್ ಕಮಲ್ ಜತೆಗೂಡಿ ಕಂಚು ಜಯಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಜತೆಗೂಡಿ ಆಡಿದ್ದರೂ ಯಶಸ್ಸು ಕಂಡಿರಲಿಲ್ಲ.
ಸಿಂಗಲ್ಸ್‌ನಲ್ಲಿ ಸೆಮಿಫೈನಲ್
ಬುಡಾಪೆಸ್ಟ್ ಕೂಟದ ಸಿಂಗಲ್ಸ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಮಣಿಕಾ ಬಾತ್ರಾ ಸೆಮಿಫೈನಲ್ ತಲುಪಿದ್ದಾರೆ. ಭಾರತದ ಮತ್ತೋರ್ವ ಆಟಗಾರ್ತಿ, 150ನೇ ರ್‍ಯಾಂಕಿಂಗ್‌ನ ಶ್ರೀಜಾ ಅಕುಲಾ ಕೂಡ ಉತ್ತಮ ಆಟವಾಡಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಮಣಿಕಾಗೆ ಶರಣಾದರು.