Advertisement

“ಹಿಂದಿ ಸಿನಿಮಾ ಬಾಲಿವುಡ್‌ ಎಂದು ಕರೆಸಿಕೊಳ್ಳುವುದು ನಿಲ್ಲಬೇಕು..”: ನಿರ್ದೇಶಕ ಮಣಿರತ್ನಂ

10:22 AM Apr 20, 2023 | Team Udayavani |

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಸದ್ಯ ಪ್ಯಾನ್‌ ಇಂಡಿಯಾ, ಬಹು ನಿರೀಕ್ಷಿತ ʼಪೊನ್ನಿಯನ್ ಸೆಲ್ವನ್-2ʼ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

Advertisement

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ಯಾನಲ್‌ ವೊಂದರಲ್ಲಿ ಕೆಲ ನಿರ್ದೇಶಕರೊಂದಿಗೆ ಅವರು ಭಾಗಿಯಾಗಿದ್ದಾರೆ. ವಿಶ್ವ ಸಿನಿಮಾದ ಮೇಲೆ ದಕ್ಷಿಣ ಭಾರತೀಯ ಚಲನಚಿತ್ರಗಳ ಮೂಲ ಪ್ರಭಾವದ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.

“ಹಿಂದೆ ಸಿನಿಮಾರಂಗವೂ ತನ್ನನು ತಾನು ಬಾಲಿವುಡ್‌ ಎಂದು ಕರೆಸಿಕೊಳ್ಳುವುದನ್ನು ಯಾವಾಗ ನಿಲ್ಲಿಸುತ್ತದೆಯೋ, ಆಗ ಜನರು ಭಾರತೀಯ ಸಿನಿಮಾವನ್ನು ಬಾಲಿವುಡ್ ಎಂದು ಗುರುತಿಸುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಚ್ಚನ್‌ ಮಗಳು

ನಾನು ಯಾವುದೇ ʼವುಡ್‌ʼ ಗಳ ಅಭಿಮಾನಿಯಲ್ಲ ( ಕಾಲಿವುಡ್‌, ಬಾಲಿವುಡ್‌..) ಈ ಎಲ್ಲಾ ವುಡ್‌ ಗಳನ್ನು ನಾವು ಒಟ್ಟಾರೆಯಾಗಿ ಭಾರತೀಯ ಸಿನಿಮಾ ಎಂದು ಗುರುತಿಸಬೇಕು ಎಂದಿದ್ದಾರೆ.

Advertisement

ಈ ಪ್ಯಾನಲ್‌ ನಲ್ಲಿ ಚಲನಚಿತ್ರ ನಿರ್ದೇಶಕರಾದ ವೆಟ್ರಿಮಾರನ್ ,ಬಾಸಿಲ್ ಜೋಸೆಫ್ ,ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರೂ ಕೂಡ ಭಾಗಿಯಾಗಿದ್ದಾರೆ.

ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಚಿಯಾನ್ ವಿಕ್ರಮ್, ತ್ರಿಶಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಕಾಶ್ ರಾಜ್, ಪ್ರಭು, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧೂಳಿಪಾಲ, ಜಯರಾಂ, ಅಶ್ವಿನ್ ಕಾಕುಮನು, ಮೋಹನ್ ರಾಮನ್, ಶರತ್‌ಕುಮಾರ್ ಮತ್ತು ಪಾರ್ತಿಬನ್ ಅಭಿನಯದ ʼಪೊನ್ನಿಯನ್ ಸೆಲ್ವನ್-2ʼ ಇದೇ ಏ.28 ರಂದು ತೆರೆಗೆ ಬರಲಿದೆ.

ಸಿನಿಮಾಕ್ಕೆ ಎಆರ್ ರೆಹಮಾನ್ ಮ್ಯೂಸಿಕ್‌ ನೀಡಿದ್ದು, ಶ್ರೀಕರ್ ಪ್ರಸಾದ್ ಸಂಕಲನ, ರವಿವರ್ಮನ್ ಛಾಯಾಗ್ರಾಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next