Advertisement

ಮ್ಯಾನ್‌ಹೋಲ್‌ಗ‌ಳ ಸ್ವತ್ಛತೆ: ಬಿದಿರಿನ ಕೋಲಿಗೆ ಸಿಗದ ಮುಕ್ತಿ

05:28 PM Mar 21, 2017 | Harsha Rao |

ಮಹಾನಗರ: ಮ್ಯಾನ್‌ ಹೋಲ್‌ಗ‌ಳನ್ನು ಸ್ವತ್ಛಗೊಳಿಸಲು ಯಂತ್ರಗಳನ್ನು ಬಳಸುವ ಕ್ರಮ ಜಾರಿಯ ಲ್ಲಿದ್ದರೂ, ಹಿಂದಿನ ಬಿದಿರುಕೋಲುಗಳನ್ನು ಬಳಸುವ ಪ್ರವೃತ್ತಿಗೆ ನಗರದಲ್ಲಿನ್ನೂ ಪೂರ್ಣ ವಿರಾಮ ಹಾಕಿಲ್ಲ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಡಿಬಿ-1 ಯೋಜನೆಯಲ್ಲಿ 14, 815 ಮ್ಯಾನ್‌ಹೋಲ್‌ಗ‌ಳನ್ನು ನಿರ್ಮಿಸಲಾಗಿದ್ದು, 360 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗಿದೆ. ಸುಮಾರು 4 ಲಕ್ಷ ಮಂದಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಪಾಲಿಕೆಯ ಹಳೆ ಪ್ರದೇಶದಲ್ಲಿ ಪಬ್ಲಿಕ್‌ ಹೆಲ್ತ್‌ ಎಂಜಿನಿಯರಿಂಗ್‌ (ಪಿಎಚ್‌ಇ) ನೇತೃತ್ವದಲ್ಲಿ  6 ಎಂಜಿಡಿ ವರ್ಗದಡಿ 33 ವಾರ್ಡ್‌ಗಳಲ್ಲಿದ್ದ 1.80 ಮಂದಿಗೆ ಸೌಲಭ್ಯ ಕಲ್ಪಿಸಲು ಸುಮಾರು 8 ಸಾವಿರ ಮ್ಯಾನ್‌ಹೋಲ್‌ಗ‌ಳನ್ನು 240 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಲಾಗಿತ್ತು. 

Advertisement

ಹಳೆ ಮ್ಯಾನ್‌ಹೋಲ್‌ ಸಮಸ್ಯೆ 
ಹಳೇ ನಗರ ಪಾಲಿಕೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ  ಮ್ಯಾನ್‌ಹೋಲ್‌ಗ‌ಳು ವಾಹನಗಳು ಚಲಿಸದಂತಹ ಪ್ರದೇಶ ದಲ್ಲಿವೆ. ಇವುಗಳ ನಿರ್ಮಾಣವೂ ಅವೈಜ್ಞಾನಿಕವಾಗಿದ್ದು, ಕೆಲವೊಮ್ಮೆ ಒಳಭಾಗದಲ್ಲಿ ಮಣ್ಣು ಕುಸಿದು ಹರಿವ ಚರಂಡಿ ನೀರಿಗೆ ತಡೆಯುಂಟು ಮಾಡುತ್ತದೆ. ಈ ವೇಳೆ ಅನಿವಾರ್ಯವಾಗಿ ಬಿದಿರು ಕೋಲುಗಳನ್ನೇ ಬಳಸಿ ಸ್ವತ್ಛಗೊಳಿಸಬೇಕಾಗಿದೆ.

ಮ್ಯಾನ್‌ಹೋಲ್‌ಗ‌ಳಲ್ಲಿ  ಒಳಚರಂಡಿ ನೀರು ಹರಿಯಲು ಯಾವುದೇ ತಡೆಯಾಗದಂತೆ ಸ್ವತ್ಛತೆಗೆ ಪಾಲಿಕೆ 4 ಜೆಟ್ಟಿಂಗ್‌ ಮೆಷಿನ್‌, 2 ಗಲ್ಪಿಟ್‌, 4 ಡಿ ಸಿಲ್ಟಿಂಗ್‌ ಮೆಷಿನ್‌ಗಳನ್ನು ಹೊಂದಿದ್ದು, ಇವುಗಳ ಹೋಗದ ಪ್ರದೇಶಗಳ ಸ್ವತ್ಛತೆಗೆ “ಸ್ಯಾನಿಟರಿ ಗ್ಯಾಂಗ್‌’ ಅನ್ನು ಹೊಂದಲಾಗಿದೆ. ಈ ತಂಡವು 1500 ಮ್ಯಾನ್‌ ಹೋಲ್‌ಗ‌ಳನ್ನು ನಿರ್ವಹಿಸುತ್ತಿದೆ. ಎಡಿಬಿ-1 ನೇ ಹಂತದಲ್ಲಿ ಹೆಚ್ಚಾಗಿ ಮೆಷಿನ್‌ಗಳು ಸಾಗಲು ಸಹಾಯವಾಗಲು ಅನುಕೂಲವಾಗುವಂತೆ ಮ್ಯಾನ್‌ಹೋಲ್‌ಗ‌ಳನ್ನು ನಿರ್ಮಿಸಲಾಗಿದ್ದರೂ, ಎಡಿಬಿ-1 ಹಾಗೂ ಹಳೆ ನಗರ ಪಾಲಿಕೆ ಪ್ರದೇಶವನ್ನು ಸೇರಿಸಿದಲ್ಲಿ ಸುಮಾರು 4,500ರಷ್ಟು ಮ್ಯಾನ್‌ಹೋಲ್‌ಗ‌ಳನ್ನು ಸ್ಯಾನಿಟರಿ ಗ್ಯಾಂಗ್‌ ನಿರ್ವಹಿಸಬೇಕಿದೆ. ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಹೊರಗುತ್ತಿಗೆ ಆಧಾರದಲ್ಲಿ ಈ ತಂಡವು ಕಾರ್ಯ ನಿರ್ವಹಿಸುತ್ತಿದ್ದು, ವೇತನ, ಇಎಸ್‌ಐ, ಪಿಎಫ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.

ಅಮೃತ್‌ ಯೋಜನೆ: 
ಹಳೆ ನಗರ ಪಾಲಿಕೆ ಪ್ರದೇಶದಲ್ಲಿ  7 ವಲಯಗಳಲ್ಲಿ ನಿರ್ಮಿಸಲಾಗಿದ್ದ 8 ಸಾವಿರ ಮ್ಯಾನ್‌ಹೋಲ್‌ ಗಳ ಪುನರ್‌ ನವೀಕರಣಕ್ಕಾಗಿ ಅಮೃತ್‌ ಯೋಜನೆಯಡಿ ಸರಕಾರಕ್ಕೆ 179 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಬಂಧಪಟ್ಟ ಪರಿಣಿತ ಸಂಸ್ಥೆಗೆ ನೀಡಿ ಈ ಕುರಿತ ಡಿಸೈನ್‌ಗಳನ್ನು ಇನ್ನಷ್ಟೇ ರೂಪಿಸಬೇಕಾಗಿದೆ. ಅಮೃತ್‌ ಯೋಜನೆ 5 ವರ್ಷದ್ದಾಗಿದ್ದು, 2020 ರೊಳಗೆ ಈ ಯೋಜನೆ ಪೂರ್ಣಗೊಳ್ಳಬೇಕಿದೆ.

ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ 1994 ರಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಕುಡ್ಸೆಂಪ್‌ ಯೋಜನೆಯಲ್ಲಿ  6.24 ಲಕ್ಷ ಜನಸಂಖ್ಯೆಯ ನಿರೀಕ್ಷೆಯಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ 2014 ಕ್ಕೆ ಮುಕ್ತಾಯಗೊಳಿಸಲಾಗಿತ್ತು. ಆದರೆ, ಎಬಿಡಿ-1 ನೇ ಹಂತದಲ್ಲಿ ಬಾಕಿಯಾಗಿದ್ದ  ಮ್ಯಾನ್‌ಹೋಲ್‌ ಸಂಪರ್ಕ, ಪೈಪ್‌ಲೈನ್‌ ಅಳವಡಿಕೆ ಹಾಗೂ ಇತರ ವ್ಯವಸ್ಥೆಗಳನ್ನು ಎಬಿಡಿ-2 ನೇ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ. ಕೆಲವು ಸಂಸ್ಕರಣ ಘಟಕಗಳಲ್ಲಿ ಬಾಕಿಯಿರುವ ಯಂತ್ರಗಳ ಅಳವಡಿಕೆ ಹಾಗೂ ಇತರ ಕಾರ್ಯಗಳಿಗೆ 77 ಕೋಟಿ ರೂ. ನ ಯೋಜನೆಯನ್ನೂ ರೂಪಿಸಲಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

Advertisement

ಮ್ಯಾನ್‌ಹೋಲ್‌ಗ‌ಳ ಒಳಗೆ ಯಾರೂ ಇಳಿಯುವಂತಿಲ್ಲ 
ಮ್ಯಾನ್‌ಹೋಲ್‌ನಲ್ಲಿ ಸಮಸ್ಯೆಗಳಿದ್ದಾಗ ಮೆಷಿನ್‌ಗಳನ್ನು ಬಳಸಲಾಗುತ್ತದೆ. ಅವು ತಲುಪಲು ಸಾಧ್ಯವಾಗದ ಪ್ರದೇಶಗಳಲ್ಲಿ ಬಿದಿರಿನ ಉದ್ದದ ಕೋಲು ಬಳಸಿ ಚರಂಡಿ ನೀರು ಹರಿಯುವಂತೆ ಮಾಡಲಾಗುವುದು. ಆದರೆ, ಮ್ಯಾನ್‌ಹೋಲ್‌ಗ‌ಳ ಒಳಗೆ ಯಾರೂ ಇಳಿಯುವಂತಿಲ್ಲ ಹಾಗೂ ಕೈಯಲ್ಲಿ ಮುಟ್ಟುವಂತಿಲ್ಲ. ಈ ಮೆಷಿನ್‌ ತಲುಪದ ಸ್ಥಳಗಳಲ್ಲಿರುವ ಮ್ಯಾನ್‌ ಹೋಲ್‌ಗ‌ಳನ್ನೂ ಎಡಿಬಿ-2 ಹಾಗೂ ಅಮೃತ್‌ ಯೋಜನೆಯ ಮೂಲಕ ಸರಿಪಡಿಸಲಾಗುತ್ತಿದೆ. ಬಳಿಕ ಬಿದಿರಿನ ಕೋಲುಗಳ ಬಳಕೆಯೂ ನಿಲ್ಲಲಿದೆ.
– ಮಹಮ್ಮದ್‌ ನಝೀರ್‌, ಪಾಲಿಕೆ ಆಯುಕ್ತರು.

Advertisement

Udayavani is now on Telegram. Click here to join our channel and stay updated with the latest news.

Next