Advertisement

ಮಾವು ಉತ್ತಮ ಇಳುವರಿ ನಿರೀಕ್ಷೆ

12:40 PM Feb 09, 2021 | Team Udayavani |

ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಮಾವಿನ ಮರಗಳು ಗಾಢ ಹಸುರಿನ ಚಿಗುರು ಎಲೆಗಳಿಂದ ಕಂಗೊಳಿಸುತ್ತಿದ್ದು, ಬಂಗಾರ ಬಣ್ಣದ ಹೂಗಳಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಮಾವು  ಉತ್ತಮ ಇಳುವರಿ ಬರುವ ನಿರೀಕ್ಷೆ ಹುಟ್ಟಿಸಿದೆ.

Advertisement

ಕೊರೊನಾದಿಂದ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಕಳೆದ ವರ್ಷ ಹೂವಿನ ಪ್ರಮಾಣ ಅಧಿಕವಾಗಿತ್ತು. ಆದರೆ ಜನವರಿಯಲ್ಲಿ ಅತಿಯಾದ ಇಬ್ಬನಿ, ಮಾವುಗಳಿಗೆ ಪೂರಕವಲ್ಲದ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಬರಪೂರ ಹೂ ತುಂಬಿದ್ದು,  ಈ ಬಾರಿ ಉತ್ತಮ ಇಳುವರಿ ಕಾಣುವ ನಿರೀಕ್ಷೆಯಲ್ಲಿ  ರೈತರಿದ್ದಾರೆ.

ಸರ್ಕಾರ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ ನೀಡಿದರೆ,  ರೈತರು ಆರ್ಥಿಕವಾಗಿ ಮುಂದುವರೆಯಲು ಸಾಧ್ಯ.ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದಿರುವುದುರಿಂದ ಬೇರೆ ಕಡೆಯಿಂದ ಬಂದವರಿಗೆ ಮಾವಿನ ತೋಟ ಗುತ್ತಿಗೆ ನೀಡಿ, ಅವರು ನೀಡುವ ಹಣ ಪಡೆಯಬೇಕಾಗಿದೆ ಎನ್ನುತ್ತಾರೆ ರೈತ ಹರೀಶ್.

ಜಿಲ್ಲೆಯಲ್ಲಿ 7701 ಹೆಕ್ಟೇರ್ ಮಾವು : ದೇವನಹಳ್ಳಿ 887 ಹೇಕ್ಟರ್‌, ದೊಡ್ಡಬಳ್ಳಾಪುರ 1344 ಹೇಕ್ಟರ್‌, ನೆಲಮಂಗಲ 1875 ಹೇಕ್ಟರ್‌, ಹೊಸಕೋಟೆ 3595 ಹೇಕ್ಟರ್‌ ಹೊಂದಿದೆ. ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ಮೇಲೆ, ಲೇಔಟ್‌, ಬಡಾವಣೆ ಹೆಚ್ಚಳದಿಂದ ಐಟಿಆರ್‌, ಕೈಗಾರಿಕಾ ಪ್ರದೇಶಗಳು ಬರುತ್ತಿದ್ದು, ತಾಲೂಕಿನ ಸಾಕಷ್ಟು ರೈತರು ಭೂಮಿ  ಳೆದುಕೊಂಡಿದ್ದಾರೆ. ಅಂತರ್ಜಲ ಮಟ್ಟ ಕುಸಿತ ಸೇರಿ ಹಲವು ಕಾರಣಗಳಿಂದ ಮಾವಿನ ಮರದ ಸಂಖ್ಯೆ  ತಾಲೂಕಿನಲ್ಲಿ ವರ್ಷದಿಂದ ರ್ವಕ್ಕೆ ಕಡಿಮೆಯಾಗಿದೆ.

ಇದನ್ನೂ ಓದಿ :ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ

Advertisement

ಮಾವು ಸಂರಕ್ಷಣಾ ಘಟಕಗಳಿಲ್ಲ : ಮಧ್ಯಮ ಪ್ರಮಾಣದಲ್ಲಿ ಮಾವು ಬೆಳೆಯುತ್ತಿರುವ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದ ಕಾರಣ ಬೆಂಗಳೂರು ನಗರಕ್ಕೆ ಹೋಗಬೇಕು. ಮಾರುಕಟ್ಟೆಗೆ ಹೋಗಲು ಆರ್ಥಿಕ ಸಮಸ್ಯೆ ಇದೆ. ಜತೆಗೆ ಮಾವು ಸಂರಕ್ಷಣಾ ಘಟಕಗಳಿಲ್ಲ. ಮರಗಳನ್ನೇ ಬೇರೆ ಜಿಲ್ಲೆಯ ವ್ಯಾಪಾರಿಗಳಿಂದ ಮುಂಗಡ ಹಣ ಪಡೆದು, ಗುತ್ತಿಗೆ ನೀಡುತ್ತಿದ್ದಾರೆ. ಇದರಿಂದ ರೈತರು ಲಾಭವಿಲ್ಲದೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಚಿಂತೆ ಪಡುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿದ್ದು, ಬೋರ್‌ವೆಲ್‌ಗ‌ಳಲ್ಲಿ ನೀರು ಬರುವಂತಾಗಿದೆ. ಉಷ್ಣಾಂಶ ಹೆಚ್ಚಾಗಿರುವ ಕಾರಣ ಮರಗಳಲ್ಲಿ ಹೂಗಳು ಹೆಚ್ಚಾಗಿ ಕಂಡು  ಬರುತ್ತಿದೆ. ಹೂ ಹೆಚ್ಚು ಬಿಟ್ಟಿರುವುದರಿಂದ ಉತ್ತಮ ಇಳುವರಿ ನಿರೀಕ್ಷೆಯಿದೆ ಎಂಬುದು ರೈತರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next