Advertisement

ಮಾವು, ಹಲಸು ಮಾರಾಟ ಮೇಳ ಆರಂಭ

12:08 PM May 23, 2018 | |

ಬೆಂಗಳೂರು: ಮಧ್ಯವರ್ತಿಗಳ ಹಾವಳಿಯಿಂದಾಗಿ ಮಾವಿನ ಹಣ್ಣಿನ ಬೆಲೆ ಅಧಿಕವಾಗಿದು,ª ಗ್ರಾಹಕರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ಹೆಚ್ಚೆಚ್ಚು ಮಾವಿನ ಮೇಳವನ್ನು ಆಯೋಜಿಸಲಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ್‌ ಹೇಳಿದರು.

Advertisement

ನಗರದ ಹಡ್ಸನ್‌ ವೃತ್ತದ ಬಳಿ ಇರುವ ಹಾಪ್‌ ಕಾಮ್ಸ್‌ನಲ್ಲಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ಆಯೋಜಿಸಿರುವ “ಮಾವು ಮತ್ತು ಹಲಸು ಮಾರಾಟ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಬೇಗ ಹಣ್ಣಾಗಲಿ ಎನ್ನುವ ಕಾರಣದಿಂದ ಮಾವಿನ ಕಾಯಿಗೆ ಕೆಲವರು ರಾಸಾಯನಿಕ ದ್ರಾವಣ ಸಿಂಪಡಿಸುತ್ತಾರೆ.

ಆದರೆ, ಹಾಪ್‌ ಕಾಮ್ಸ್‌ನಲ್ಲಿ ಇದಕ್ಕೆ ಅವಕಾಶ ಇಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ರಾಸಾಯನಿಕ ರಹಿತ ಹಣ್ಣುಗಳನ್ನಷ್ಟೇ ಮಾರಾಟ ಮಾಡಲಾಗುವುದು. ಹೀಗಾಗಿ, ಹಣ್ಣು ಗಳು ಕೂಡ ತಿನ್ನಲು ಸ್ವಾದಿಷ್ಟವಾಗಿರುತ್ತವೆ. ಆರೋಗ್ಯಕ್ಕೂ ಕೂಡ ಒಳ್ಳೆಯದ್ದು ಎಂದು ಹೇಳಿದರು.

ಹಾಪ್‌ ಕಾಮ್ಸ್‌ ಸಂಸ್ಥೆಯ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ ಮಾತನಾಡಿ, ಹಾಪ್‌ ಕಾಮ್ಸ್‌ ರೈತರಿಂದ ಮಾವು ಮತ್ತು ಹಲಸಿನ ಹಣ್ಣುಗಳನ್ನು ನೇರವಾಗಿ ಖರೀದಿಸಿ ಶೇ.10ರ ರಿಯಾಯ್ತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಸುಮಾರು ಒಂದು ತಿಂಗಳ ಕಾಲ ಈ ಮೇಳ ನಡೆಯಲಿದೆ ಎಂದು ಹೇಳಿದರು.

ಕಳೆದ ವರ್ಷ ಸುಮಾರು 708 ಟನ್‌ ವಹಿವಾಟು ನಡೆಸಲಾಗಿತ್ತು. ಈ ಬಾರಿ ಒಂದು ಸಾವಿರ ಟನ್‌ ವಹಿವಾಟಿನ ಗುರಿ ಹೊಂದಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿರುವ ಹಾಪ್‌ ಕಾಮ್ಸ್‌ ಮಳುಗೆಗಳಲ್ಲಿ ರಿಯಾಯ್ತಿ ದರದಲ್ಲಿ ಮಾರಾಟ ನಡೆಯಲಿದೆ ಎಂದರು. 

Advertisement

ಮಾವಿನಲ್ಲಿ ನಾಟಿ, ತೋತಾಪುರಿ, ಸೆಂದೂರ, ಬೈಗಾನ್‌, ಕಾಲಪಾಡು, ಮಲ್ಲಿಕಾ, ಬಾದಾಮಿ, ದಸೇರಿ, ಮಲಗೋವ, ಸಕ್ಕರೆಗುತ್ತಿ ಸೇರಿದಂತೆ ಹಲವು ತಳಿಗಳಿವೆ. ಜೊತೆಗೆ ಚಂದಹಲಸು ಗ್ರಾಹಕರ ಆಯ್ಕೆಗೆ ಕೈಗೆಟಕುತ್ತಿವೆ. ಮೇಳದಲ್ಲಿ ಹಾಪ್‌ ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ್‌, ಉಪಾಧ್ಯಕ್ಷ ಬಿ.ಮುನೇಗೌಡ ಸೇರಿದಂತೆ ಮತ್ತಿತರ‌ರು ಉಪಸ್ಥಿತರಿದ್ದರು.

ವೈರಸ್‌ ಭಯ ಬೇಡ: ಕೇರಳದಲ್ಲಿ ಕಾಣಿಸಿಕೊಂಡಿರುವ ನಿಪಾಹ್‌ ವೈರಸ್‌ ಬಗ್ಗೆ ಹಾಪ್‌ ಕಾಮ್ಸ್‌ ಗ್ರಾಹಕರಿಗೆ ಭಯ ಬೇಡ. ಹಕ್ಕಿ ತಿಂದ ಹಣ್ಣು ತಿನ್ನುವುದರಿಂದ ಈ ರೋಗ ಬರುತ್ತಿದೆ ಎಂದು ಹೇಳಲಾಗುತ್ತದೆ. ಆದರೆ, ಹಾಪ್‌ಕಾಮ್ಸ್‌ ನಲ್ಲಿ ಸಂಸ್ಕರಣೆ ಮಾಡಿದ ಹಣ್ಣುಗಳನ್ನೇ ಮಾರಾಟ ಮಾಡಲಾಗುತ್ತಿದ್ದು, ವೈರಸ್‌ ಬಗ್ಗೆ ಗ್ರಾಹಕರು ಯಾವುದೇ ರೀತಿಯಲ್ಲಿ ಆತಂಕ ಪಡುವ ಆಗತ್ಯ ಇಲ್ಲ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್‌.ಪಾಟೀಲ್‌ ಸ್ಪಷ್ಟಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next