Advertisement

ಮಾವು ಸಂಸ್ಕರಣಾ ಘಟಕಕ್ಕೆ ಕೊನೆಗೂ ಮುಕ್ತಿ

12:59 PM Nov 26, 2020 | Suhan S |

ಚನ್ನಪಟ್ಟಣ: ಜಾಗದ ವಿವಾದದಿಂದಾಗಿ ಭ್ರೂಣಾವಸ್ಥೆಯಲ್ಲೇ ನಲುಗುತ್ತಿದ್ದ ಮಾವು ಸಂಸ್ಕರಣಾ ಘಟಕಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ಇದೀಗ ಬದಲಿ ಜಾಗಹುಡುಕುವಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕಾ ಇಲಾಖೆ ಸಫಲಗೊಂಡಿದೆ.

Advertisement

ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು ಎಂಬುದು ಜಿಲ್ಲೆಯ ಮಾವು ಬೆಳೆಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಸ್ಪಂದಿಸಿದ ಎಚ್‌.ಡಿ.ಕುಮಾರಸ್ವಾಮಿ ತಾವು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಕಣ್ವ ಬಳಿ ಮಾವು ಸಂಸ್ಕರಣಾ ಘಟಕ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.

ಜಾಗದ ಗೊಂದಲದಿಂದ ಕಗ್ಗಂಟು: ರೇಷ್ಮೆ ಇಲಾಖೆಗೆ ಸೇರಿದ್ದ 15 ಎಕರೆ ಭೂಮಿಯನ್ನು ಮಾವು ಸಂಸ್ಕರಣಾ ಘಟಕಕ್ಕೆ ಹಸ್ತಾಂತರಿಸುವ ಪ್ರಯತ್ನ ನಡೆದಿತ್ತಾದರೂ, ಪಿಡಬ್ಲ್ಯುಡಿ ಮತ್ತು ರೇಷ್ಮೆ ಕೃಷಿ ಇಲಾಖೆ ನಡುವೆ ಜಾಗಕ್ಕೆಸಂಬಂಧಿಸಿದಂತೆ ಇದ್ದ ಗೊಂದಲದಿಂದಾಗಿ ಹಸ್ತಾಂತರ ಸಾಧ್ಯವಾಗದೆ ಯೋಜನೆ ನಲುಗುತ್ತಿತ್ತು. ಬಳಿಕ ರಾಮನಗರ ತಾಲೂಕಿನ ಕೃಷ್ಣಾಪುರ ದೊಡ್ಡಿ ಬಳಿ ಇರುವ ರೇಷ್ಮೆ ಕೃಷಿ ಕ್ಷೇತ್ರಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಕೃಷ್ಣಾಪುರ ದೊಡ್ಡಿ ಗ್ರಾಮದ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಮಿಶ್ರತಳಿ ರೇಷ್ಮೆ ಗೂಡಿನ ಬಿತ್ತನೆಯನ್ನು ತಯಾರಿಸುವ ಜತೆಗೆ ವಿವಿಧ ರೇಷ್ಮೆ ಕೃಷಿಗೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುತ್ತಿದ್ದ ಕಾರಣ ಇಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಈ ಜಾಗದಲ್ಲಿ ಮಾವು ಸಂಸ್ಕರಣಾ ಘಟಕಕ್ಕೆ ಗ್ರಹಣಹಿಡಿದಿತ್ತು.

ಬೈರಾಪಟ್ಟಣದಲ್ಲಿ ನಿರ್ಮಾಣಕ್ಕೆ ಅಸ್ತು: ಕೊನೆಗೂ ತಾಲೂಕಿನ ಬೈರಾಪಟ್ಟಣದಲ್ಲಿ ಮಾವುಸಂಸ್ಕರಣಾ ಘಟಕಸ್ಥಾಪಿಸುವ ನಿರ್ಧಾರಕ್ಕೆ ಜಿಲ್ಲಾಡಳಿತ ಮತ್ತು ತೋಟಗಾರಿಕಾ ಇಲಾಖೆ ಮುಂದಾಗಿದೆ. ಬೈರಾಪಟ್ಟಣಗ್ರಾಮದಸರ್ವೇನಂಬರ್‌ 1019/8 ರಲ್ಲಿ ತೋಟಗಾರಿಕಾ ಇಲಾಖೆಗೆ 50 ಎಕರೆ ಭೂಮಿಯನ್ನು ನೀಡಲಾಗಿದ್ದು,ಈ ಜಾಗದಲ್ಲಿ 15 ಎಕರೆ ಭೂಮಿಯನ್ನು ನೀಡಲು ತೋಟಗಾರಿಕಾ ಇಲಾಖೆ ಸಚಿವರು ಮತ್ತು ಜಂಟಿ ನಿರ್ದೇಶಕರು ಒಪ್ಪಿದ್ದಾರೆ.ಈಗಾಗಲೇ ಸರ್ವೇ ಕಾರ್ಯ ನಡೆಸಿದ್ದು, ಸಿದ್ಧತೆಗಳೂ ಆರಂಭವಾಗಿವೆ.

ತೆಂಗಿನ ಗಿಡಗಳಿಗೆ ಬೇಡಿಕೆ: ತೋಟಗಾರಿಕಾ ಪಿತಾಮಹ ಎಂದು ಕರೆಯಲಾಗುವ ಎಂ.ಎಚ್‌.ಮರೀಗೌಡರ ಪರಿಶ್ರಮದಿಂದಾಗಿ ಹಣ್ಣಿನ ಗಿಡವನ್ನು ಪರಿಚಯಿಸುವ ಉದ್ದೇಶದಿಂದ ಸೀಬೆ ಗಿಡಗಳನ್ನು ನೆಡಲಾಯಿತು. ಸೀಬೆ ಗಿಡಗಳು ಸಾಕಷ್ಟು ಹಳೆಯದಾದ ಕಾರಣ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕಳೆದು ಕೊಂಡ ಪರಿಣಾಮ ಗಿಡಗಳನ್ನು ತೆರವು ಗೊಳಿಸಲಾಗಿದ್ದು, ಇದೀಗ ಸುಮಾರು 50 ವರ್ಷಗಳಷ್ಟು ಹಳೆಯದಾದ 950 ಸಪೋಟ ಮರಗಳು ಇವೆ. 3ರಿಂದ7ಲಕ್ಷ ರೂ. ವರೆಗೆ ತೋಟಗಾರಿಕಾ ಇಲಾಖೆಗೆ ಅದಾಯ ಬರುತ್ತಿದೆ. ಆದರೆ, ನಿರ್ವಹಣೆಗೆ ಇದಕ್ಕಿಂತ ಹೆಚ್ಚುಹಣ ಖರ್ಚಾಗುತ್ತಿದೆ. ಉಳಿದಂತೆ ಇತ್ತೀಚಿಗೆ ತೆಂಗು ಗಿಡಗಳ ನರ್ಸರಿ ಕಾರ್ಯ ಆರಂಭಿಸಿದ್ದು ಇಲ್ಲಿನ ತೆಂಗಿನ ಗಿಡಗಳಿಗೆ ಉತ್ತಮ ಬೇಡಿಕೆ ಸಹ ಇದೆ.

Advertisement

ಮಾವು ಬೆಳೆಗಾರರಿಗೆ ಅನುಕೂಲ: ಈಗಾಗಲೇ ಹಳೆಯದಾಗಿರುವ ಸಪೋಟ ಫಾರಂನಿಂದಾಗಿ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ತೆಂಗಿನ ನರ್ಸರಿ ಉಳಿಸಿಕೊಂಡು ಸಪೋಟ ಫಾರಂ ತೆರವು ಗೊಳಿಸಿಮಾವು ಸಂಸ್ಕರಣಾ ಘಟಕ ಆರಂಭಿಸುವುದಕ್ಕೆ ಸ್ಥಳೀಯವಾಗಿ ಯಾವುದೇ ವಿರೋಧವಿಲ್ಲ. ಹೀಗಾಗಿ ಮಾವು ಸಂಸ್ಕರಣಾ ಘಟಕ ಆರಂಭಿಸುವುದು ರೈತರಿಗೆ ಹೆಚ್ಚು ಅನುಕೂಲವಾಗಲಿದೆ.

ರೈತರಿಗೆ ವರದಾನ : ರಾಜ್ಯದಲ್ಲಿ ಕೋಲಾರ ಹೊರತು ಪಡಿಸಿದರೆ ಅತಿಹೆಚ್ಚು ಮಾವು ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ರಾಮನಗರ ಜಿಲ್ಲೆಗಿದೆ. ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರತಿವರ್ಷ ಸರಿಸುಮಾರು5ಲಕ್ಷ ಟನ್‌ಗೂ ಹೆಚ್ಚು ಮಾವು ಉತ್ಪಾನೆಯಾಗುತ್ತಿದೆ. ಆಂಧ್ರಪ್ರದೇಶ ಚಿತ್ತೂರಿನಲ್ಲಿ ಬೃಹತ್‌ ಸಂಸ್ಕರಣಾಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ.ಕೆಲವು ಉದ್ಯಮಿಗಳು ಮುಂಬೈಗೂ ಸರಬರಾಜು ಮಾಡುತ್ತಾರೆ. ಸಂಸ್ಕರಣಾ ಘಟಕವನ್ನು ಆರಂಭಿಸಿದಲ್ಲಿ ಮಾವಿನ ಉತ್ಪನ್ನದ ಮೌಲ್ಯವರ್ಧನೆಯಾಗುವ ಮೂಲಕ ರೈತರಿಗೆ ಅನುಕೂಲವಾಗಲಿದೆ.

ಭೈರಾಪಟ್ಟಣ ಫಾರಂ ಸಾಕಷ್ಟು ಹಳೆಯದಾಗಿದ್ದು,ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತಿಲ್ಲ.ಈ ಜಾಗದಲ್ಲಿ ಮಾವು ಸಂಸ್ಕರಣಾಘಟಕ ಆರಂಭಿಸುವಕ್ರಮ ಸೂಕ್ತವಾಗಿದೆ. ಇದರಿಂದಾಗಿಈ ಭಾಗದ ಮಾವು ಬೆಳೆಗಾರರಿಗೆ ಲಾಭದಾಯವಾಗಲಿದೆ. ರಾಮಚಂದ್ರಯ್ಯ, ನಿವೃತ್ತ ತೋಟಗಾರಿಕೆ ಅಧಿಕಾರಿ, ಚನ್ನಪಟ್ಟಣ

ಸ್ಥಳೀಯರಿಗೆ ಉದ್ಯೋಗ ಸಿಗುವುದಾದರೆ ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗುವುದನ್ನು ಸ್ವಾಗತಿಸುತ್ತೇವೆ. ಮಾವು ಸುಗ್ಗಿಕಾಲದಲ್ಲಿಸಿಗುವಹಣ್ಣಾಗಿದ್ದು, ಉಳಿದಅವಧಿಯಲ್ಲಿ ಬೇರೆಹಣ್ಣು ತರಕಾರಿಗಳ ಸಂಸ್ಕರಣೆಗೆ ಒತ್ತು ನೀಡುವ ರೈತರಿಗೆ ಅನುಕೂಲಮಾಡಲಿ. ಸಂತೋಷ್‌ ಭೈರಾಪಟ್ಟಣ, ಜೆಡಿಎಸ್‌ ವಕ್ತಾರ

 

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next