ಮಾವು ಹಲಸು ಮೇಳಗಳ ಭರಾಟೆಯಲ್ಲಿ ನಗರದ ಜನರು ಮಿಂದೇಳುತ್ತಿದ್ದಾರೆ. ಮಾವಿನ ಹಣ್ಣಿನ ಮಾಸ ಮುಗಿಯುವುದಕ್ಕೆ ಇನ್ನು ಕೆಲ ಸಮಯವಷ್ಟೇ ಉಳಿದಿದೆ ಎನ್ನುವಂತೆ ಜನರು ಮುಗಿಬಿದ್ದು ಖರೀದಿಸಿ ಮಾವಿನ ಸವಿಯಲ್ಲಿ ಕಳೆದು ಹೋಗುತ್ತಿದ್ದಾರೆ. ನಿಮ್ಮಲ್ಲಿ ಕೆಲವರಾದರೂ ಬರಿ ಮಾವಿನ ಹಣ್ಣಿಗೆ ಮಾತ್ರ ತೃಪ್ತರಾಗದೆ ಮಾವಿನ ಹಣ್ಣಿನ ವಿಶೇಷ ಖಾದ್ಯಗಳನ್ನು ತಯಾರಿಸುವ ಪ್ರಯೋಗಗಳಿಗೆ ಶರಣಾಗಿರುತ್ತೀರಿ. ಇನ್ನು ಮುಂದೆ ಪ್ರಯೋಗದ ಅವಶ್ಯಕತೆ ಇರುವುದಿಲ್ಲ. ಏಕೆಂದರೆ, ಐ.ಟಿ.ಸಿ ಮೈ ಫಾರ್ಚೂನ್ ಹೋಟೆಲ್, ಮಾವು ಪ್ರಿಯರನ್ನು ತೃಪ್ತಿ ಪಡಿಸಲು “ಮ್ಯಾಂಗೋ ಮಸ್ತಿ ಫುಡ್ ಪೆಸ್ಟಿವಲ್’ ಅನ್ನು ಆಯೋಜಿಸಿದೆ. ಇಲ್ಲಿನ ಖಾದ್ಯಗಳಿಗೆ ಕೈಗೆಟುಕುವ ದರಗಳನ್ನು ನಿಗದಿ ಪಡಿಸಲಾಗಿದೆ. ಬಾಯಲ್ಲಿ ನೀರೂರಿಸುವ ಮಾವಿನ ವಿವಿಧ ಖಾದ್ಯಗಳು, ಪಾನಕಗಳು ಮ್ಯಾಂಗೋ ಫೆಸ್ಟಿವಲ್‌ನಲ್ಲಿ ಕಾದಿವೆ. ಐ.ಟಿ. ಸಿ.ಯ ಬಾಣಸಿಗರು ವಿಶೇಷ ಮುತುವರ್ಜಿ ವಹಿಸಿ ಸಿದ್ಧಪಡಿಸಿರುವ ಈ ವೈವಿಧ್ಯಮಯ ತಿಂಡಿ ತಿನಿಸುಗಳ ರುಚಿಯನ್ನು ಬೆಂಗಳೂರಿನ ಆಹಾರಪ್ರಿಯರು ಒಮ್ಮೆಯಾದರೂ ಸವಿಯಲೇಬೇಕು.
ಮೊದಲಿಗೆ ಪಾನಕ ಸರಬರಾಜು. ಆಮ್ ಕಾ ಪನ್ನಾ, ಮ್ಯಾಂಗೋ ಲಸ್ಸಿ, ಮ್ಯಾಂಗೋ ಕೋಕೋನಟ್ ಸೂ¾ಧಿ, ಮ್ಯಾಂಗೋ ಮಿಲ್ಕ್ ಶೇಕ್, ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಆಮ್ ಕಾ ಪನ್ನಾ ಹುಳಿ, ಸಿಹಿ ಮಿಶ್ರಿತ ಉತ್ತರ ಭಾರತೀಯ ಪಾನಕವನ್ನು ಖಂಡಿತಾ ಮಿಸ್ ಮಾಡಿಕೊಳ್ಳಬೇಡಿ. ಉತ್ತರ ಭಾರತೀಯರು ತಮ್ಮ ಮನೆಗಳಲ್ಲಿ ಬೇಸಿಗೆ ದಿನಗಳಲ್ಲಿ ಬಾಯಾರಿಕೆ ನೀಗಿಸಲು ಆಮ್ ಕಾ ಪನ್ನಾ ತಯಾರಿಸಿ ಕುಡಿಯುವರು. ಅಪಟೈಝರ್ ಮೇನ್ ಕೋರ್ಸ್‌ಗೆ ಮುನ್ನದ ಹಂತ. ಇಲ್ಲಿ ನೀವು ಮ್ಯಾಂಗೋ ಸ್ಪ್ರಿಂಗ್ ರೋಲ್ ಮತ್ತು ನಮನಮೂನೆಯ ಸಲಾಡ್‌ಗಳನ್ನು ಆರಿಸಿಕೊಳ್ಳಬಹುದು. ಮ್ಯಾಂಗೋ ಸ್ಪ್ರಿಂಗ್ ರೋಲ್‌ನ ಒಳಗಡೆ ಇರುವ ಸ್ಟಫಿಂಗ್‌ಅನ್ನು ಮಾವು ಮತ್ತು ಪನೀರ್ ಮಿಶ್ರಣದಿಂದ ತಯಾರಿಸಲಾಗಿದ್ದು, ಅವೆರಡರ ಕಾಂಬಿನೇಷನ್ ವಿಭಿನ್ನ ರುಚಿಯನ್ನು ನೀಡುತ್ತದೆ. ಈ ಮ್ಯಾಂಗೋ ಫೆಸ್ಟಿವಲ್‌ನ ವಿಶೇಷವೆಂದರೆ ಅಡುಗೆ ಕಾಂಟಿನೆಂಟಲ್ ಶೈಲಿಯದ್ದಾಗಿರುವುದರಿಂದ ಮಾವನ್ನು ಬಳಸಿ ವೆಜ್ ಮತ್ತು ನಾನ್‌ವೆಜ್ ಎರಡೂ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಹೀಗಾಗಿ ನಾನ್‌ವೆಜ್ ಪ್ರಿಯರೂ ಈ ಮ್ಯಾಂಗೋ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಬಹುದು.
ಮೇನ್ ಕೋರ್ಸ್‌ನಲ್ಲಿ ಮ್ಯಾಂಗೋ ಚಿಕನ್ ಕರ್ರಿ, ಪ್ರಾನ್ ಮ್ಯಾಂಗೋ ಬಗೆಗಳು, ಅಪ್ಪಂ ಸಿಗುತ್ತವೆ. ಕಡೆಯಲ್ಲಿ ಡೆಸರ್ಟ್ಸ್. ಅಲೊ³àನ್ಸೋ ಚೀಸ್ ಕೇಕ್, ಆಮ್ ಕೀ ರಸಮಲಾಯ್, ಆಮ್ ಕೀ ಕುಲ್ಫಿ ಯಾವುದನ್ನಾದರೂ ಆರಿಸಿಕೊಳ್ಳಬಹುದು. ಚೀಸ್ ಕೇಕ್ ಮತ್ತು ಆಮ್ ಕೀ ರಸಮಲಾಯ್ ಕಾಂಬಿನೇಷನ್ ತುಂಬಾ ರುಚಿಕರ. ಕೇಕ್ ಅನ್ನು ಸ್ವಲ್ಪ ಸ್ವಲ್ಪವಾಗಿಯೆ ತಿನ್ನುತ್ತಾ, ಜೊತೆ ಜೊತೆಗೇ ರಸಮಲಾಯ್‌ಅನ್ನು ಗುಟುಕೇರಿಸುತ್ತಿದ್ದರೆ ಸಿಗುವ ರಸಸ್ವಾದವನ್ನು ಪದಗಳಲ್ಲಿ ಹಿಡಿದಿಡಲಾಗದು. ಇಲ್ಲಿ ನೀಡಲಾಗಿರುವ ಮಾವಿನ ಖಾದ್ಯಗಳನ್ನು ಚಪ್ಪರಿಸಿ ತಿನ್ನುವ ಆಸೆಯಿದ್ದರೆ ಈ ಕೂಡಲೆ ಮನೆ ಮಂದಿ ಸಮೇತ ಐ.ಟಿ.ಸಿ ಮೈ ಫಾರ್ಚೂನ್ ಹೋಟೆಲಿಗೆ ಭೇಟಿ ನೀಡಿ.
ಎಲ್ಲಿ?: ಐ.ಟಿ.ಸಿ ಮೈ ಫಾರ್ಚೂನ್ ಹೋಟೆಲ್
ಯಾವಾಗ?: ಜುಲೈ 31 ರವರೆಗೆ
ಮಧ್ಯಾಹ್ನ 12- 3.30
ರಾತ್ರಿ 7- 11.30