Advertisement
ಜನರು ಸಾಮಾನ್ಯವಾಗಿ ಹಲವಾರು ಬಗೆಯ ಬಜ್ಜಿಗಳನ್ನು (ಪೋಡಿ) ತಿಂದಿರಬಹುದು. ಉದಾಃ ಕ್ಯಾಪ್ಸಿಕಂ ಬಜ್ಜಿ, ಬಟಾಟೆ ಬಜ್ಜಿ, ಬಾಳೇಕಾಯಿ ಬಜ್ಜಿ, ಬದನೆಕಾಯಿ ಬಜ್ಜಿ, ಹೀಗೆ ಹೇಳ್ತಾ ಹೋದರೆ ಒಂದು ದೊಡ್ಡ ಪಟ್ಟಿಯೇ ಮಾಡಬಹುದು. ಹಾಗೆಯೇ ಮಾವಿನ ಕಾಯಿಯಿಂದ ಕೂಡ ಹಲವು ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸುತ್ತಾರೆ.
ಬೇಕಾಗುವ ಸಾಮಗ್ರಿಗಳು
ಮಾವಿನ ಕಾಯಿ-2, ಕಡ್ಲೆಹಿಟ್ಟು-1ಕಪ್, ಅರಶಿನ ಪುಡಿ-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1ಚಮಚ, ಮೆಣಸಿನ ಪುಡಿ-2ಚಮಚ, ಅಡುಗೆ ಸೋಡಾ-1 ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
Related Articles
ಮೊದಲಿಗೆ ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ನಂತರ ಒಂದು ಬೌಲ್‌ಗೆ ಕಡ್ಲೆಹಿಟ್ಟು,ಅಡುಗೆ ಸೋಡಾ, ಮೆಣಸಿನ ಪುಡಿ,ಅರಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ.
Advertisement
ಆಮೇಲೆ ಒಂದು ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದು ಬಿಸಿಯಾದ ಮೇಲೆ ಹೆಚ್ಚಿಟ್ಟುಕೊಂಡ ಮಾವಿನಕಾಯಿಯನ್ನು ಮಾಡಿಟ್ಟ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿರಿ. ಬಿಸಿ-ಬಿಸಿಯಾದ ಮಾವಿನ ಕಾಯಿ ಬಜ್ಜಿ/ಪೋಡಿ ಪುದೀನಾ ಚಟ್ನಿಯೊಂದಿಗೆ ಸವಿಯಿರಿ.
-ಶ್ರೀರಾಮ್ ಜಿ. ನಾಯಕ್