ಧಾರವಾಡ: ಹತ್ತೇ ಮೀಟರ್ ದೂರದಲ್ಲಿದ್ದರೂ ಕಾಣದಷ್ಟು ದಟ್ಟವಾಗಿ ಬೀಳುತ್ತಿರುವ ಇಬ್ಬನಿ,ಇಬ್ಬನಿಗೆ ಕತ್ತರಿಸಿ ನೆಲಕ್ಕೆ ಬೀಳುತ್ತಿರುವ ಮಾವಿನ ಮಿಡಿ-ಹೂ-ಚಿಗುರು, ಚಿಗುರೆಲೆಗೂ ಬೆಂಬಿಡದಂತೆ ಕಾಡುತ್ತಿರುವ ಚುಕ್ಕಿರೋಗ. ಒಟ್ಟಿನಲ್ಲಿಮಾವಿಗೆ ತಂಪಾದ ಇಬ್ಬನಿಯಿಂದ ಮರ್ಮಾಘಾತ.
ಹೌದು, ಡಿಸೆಂಬರ್ ಮತ್ತು ಜನವರಿತಿಂಗಳಿಗೆ ಮುಂಚಿತವಾಗಿಯೇಉತ್ತಮವಾಗಿ ಹೂ ಬಿಟ್ಟು ಸೀಮೆಗೆಲ್ಲ ಹೂ ಬಾಣದಘಮ ಹರಡಿದ್ದ ಆಲ್ಫೋನ್ಸೋ ಮಾವಿಗೆ ಇದೀಗಇಬ್ಬನಿ ಆಘಾತ ನೀಡುತ್ತಿದೆ. ಕಳೆದ ಹತ್ತು ದಿನಗಳಿಂದ ಸತತವಾಗಿ ಬೀಳುತ್ತಿರುವ ಇಬ್ಬನಿಯಿಂದ ಮಾವಿನ ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿರುವ ಕಿರಿಮಿಡಿಗಳು ಕತ್ತರಿಸಿಕೊಂಡು ನೆಲಕ್ಕೆ ಬಿಳುತ್ತಿವೆ. ಮಾವಿನ ಹೂವಿನ ಪ್ರತಿ ಗೊಂಚಲಿನಲ್ಲಿ ಕನಿಷ್ಟ10ರಿಂದ 20 ಮಿಡಿಗಾಯಿಗಳು ನಿಲ್ಲಬೇಕು.ಅದರಲ್ಲಿ ಶೇ.50 ಗಾಳಿ ಮಳೆ, ಆಲಿಕಲ್ಲು ಇತ್ಯಾದಿಗೆ ಬಲಿಯಾದರೂ ಗೊಂಚಲಿಗೆ ಕನಿಷ್ಟ 5 ಕಾಯಿ ಉಳಿಯುವ ಲೆಕ್ಕಾಚಾರವಿರುತ್ತದೆ. ಆದರೆ ಇಬ್ಬನಿಯ ಹೊಡೆತಕ್ಕೆ ಈ ಹಂತದಲ್ಲಿಯೇ ಒಂದೊಂದು ಗೊಂಚಲಿನಲ್ಲಿ ಬರೀ ನಾಲ್ಕು ಹಿಚು ಮಿಡಿ ಮಾತ್ರ ಉಳಿದಿದ್ದು, ಮಾವು ಕೈಗೆಟಕುವ ಹೊತ್ತಿಗೆ ಇದರ ಉತ್ಪಾದನಾ ಪ್ರಮಾಣ ಶೇ.45ಕ್ಕಿಂತಲೂ ಕಡಿಮೆಪ್ರಮಾಣಕ್ಕೆ ಕುಸಿಯುವ ಸಾಧ್ಯತೆ ಇದೆ.
ಬೆಳೆಗಾರ-ದಲ್ಲಾಳಿ ಇಬ್ಬರಿಗೂ ಆತಂಕ: ಕಳೆದ ವರ್ಷದಕೊರೊನಾ ಲಾಕ್‌ಡೌನ್ ಮತ್ತು ಹಳದಿನೊಣದ ಬಾಧೆಯಿಂದಾಗಿ ಮುಂಬೈ, ಗೋವಾ ದಲ್ಲಾಳಿಗಳುಈ ವರ್ಷ ಮಾವಿನ ತೋಟಗಳನ್ನು ಖರೀದಿಸುವುದಕ್ಕೆ ಮೊದಲೇ ಹಿಂಜರಿಕೆಯಲ್ಲಿದ್ದರು. ಆದರೂಶೇ.50ಕ್ಕಿಂತಲೂ ಹೆಚ್ಚಿನ ತೋಟಗಳು ಕೊನೆ ಕ್ಷಣದಲ್ಲಿ ಸೇಲ್‌ಡೀಡ್‌ನ ಮುಂಗಡ ಹಣ ಪಾವತಿ ಪದ್ಧತಿಯಡಿ ಮಾರಾಟವಾಗಿವೆ.ಇದೀಗ ಜಿಗಿರೋಗ, ಹವಾಮಾನ ವೈಪರಿತ್ಯ,ಇಬ್ಬನಿಯ ಕಾಟಕ್ಕೆ ದಲ್ಲಾಳಿಗಳು ಮತ್ತೆ ತೋಟಗಳಸ್ಥಿತಿ ನೋಡಲು ಕೂಡ ಬರುತ್ತಿಲ್ಲ. ಕಾಯಿ ಕಟ್ಟಿದರೆ ಮಾತನಾಡಿದ ಹಣ ಕೊಟ್ಟು ಒಯ್ಯುತ್ತೇವೆ. ಕಾಯಿಚೆನ್ನಾಗಿ ಹಿಡಿಯದೇ ಹೋದರೆ ಮುಂಗಡ ಹಣಕ್ಕೂ ನಾವು ಬರಲ್ಲ. ನಿಮ್ಮ ಕಾಯಿ ನಿಮ್ಮ ತೋಟ ನೀವೇ ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಮಾವಿನಗಿಡಗಳಿಗೆ ಸತತವಾಗಿ ರಾಸಾಯನಿಕ ಸಿಂಪರಣೆ ಮಾಡಲೇಬೇಕು. ಈವರೆಗೂ ಯಾರು ಮಾಡಿದ್ದಾರೋ ಅವರ ತೋಟಗಳಲ್ಲಿ ಇಬ್ಬನಿಯಿಂದ ಶೇ.25 ಮಾತ್ರಹಾನಿ ಸಂಭವಿಸುತ್ತದೆ. ಸಿಂಪರಣೆ ಮಾಡದೇ ಇರುವವರ ತೋಟಗಳಲ್ಲಿ ಶೇ.50 ಹೂ-ಹೀಚು ಕತ್ತರಿಸುವುದು ನಿಶ್ಚಿತ ಎನ್ನುತ್ತಿದ್ದಾರೆ ಮಾವು ತಜ್ಞರು.
2018-19ರಲ್ಲಿ ಧಾರವಾಡ ಜಿಲ್ಲೆಯಲ್ಲಿಯೇ ಅಂದಾಜು 150 ಕೋಟಿ ರೂ.ಗಳ ವಹಿವಾಟು ಒಟ್ಟುಮಾವಿನ ಸುಗ್ಗಿಯಲ್ಲಿ ನಡೆಯುತ್ತದೆ ಎಂದು ಮಾವು ಬೆಳೆಗಾರರ ಸಂಘ ಅಂದಾಜು ಮಾಡಿತ್ತು. ಒಂದು ಡಜನ್ ಹಣ್ಣಿಗೆ 500 ರೂ.ನಿಂದ 850ರವರೆಗೆ ಉತ್ತಮ ಗುಣಮಟ್ಟದ ಹಣ್ಣು ಮಾರಾಟವಾದರೆ, ಮಧ್ಯಮಮತ್ತು ದ್ವಿತೀಯ ದರ್ಜೆಯ ಹಣ್ಣುಗಳು 250 ರೂ.ಗಳಿಗೆ ಡಜನ್‌ನಂತೆ ಮಾರಾಟ ವಾಗುತ್ತವೆ. ಉಳಿದಿದ್ದು ಉಪ್ಪಿನಕಾಯಿ, ಜ್ಯೂಸ್ ಕಾರ್ಖಾನೆಗಳಿಗೂ ರವಾನೆಯಾಗುತ್ತದೆ. ಈ ವರ್ಷ ಇದು 50 ಕೋಟಿರೂ.ಗಳಿಗೂ ತಲುಪುವುದು ಕಷ್ಟವೇ ಎನ್ನುತ್ತಿದ್ದಾರೆ ಮಾವು ಬೆಳೆಗಾರರ ಸಂಘದವರು.
ಗಟ್ಟಿಯಾಗಿವೆ ದೇಶಿ ಮಾವು: ಆಲ್ಫೋನ್ಸೋ, ಕಲಮಿ,ಮಲ್ಲಿಕಾ ಸೇರಿದಂತೆ ಆಧುನಿಕ ಸಂಶೋಧಿತಹೈಬ್ರಿಡ್ ತಳಿಗಳಿಗೆ ಜಿಗಿರೋಗ ಬಹುಬೇಗಅಂಟಿಕೊಳ್ಳುತ್ತಿದೆ. ಅದಲ್ಲದೇ ಇವು ತೀವ್ರನಿರ್ವಹಣೆಗೂ ಒಳಪಡುತ್ತವೆ. ಹಳದಿ ನೊಣದಕಾಟಕ್ಕಂತೂ ಈ ಎರಡೂ ತಳಿಗಳು ಕಳೆದ ವರ್ಷಸಂಪೂರ್ಣ ನೆಲಕಚ್ಚಿ ಹೋಗಿದ್ದವು. ಆದರೆ ದೇಶಿತಳಿಗಳಾದ ಗುಟ್ಟಲಿ, ಸಕ್ಕರೆ ಗುಟ್ಟಲಿ, ಜೀರಿಗೆ ಮಾವು,ಹುಳಿಮಾವು, ಅಪ್ಪೆಮಿಡಿ, ಹೋಳಿಗೆ ಮಾವು, ಗುಂಗಮಾವು, ಬಾಳಮಾವು ಸೇರಿದಂತೆ ಹತ್ತಾರುತಳಿಗಳು ಇಬ್ಬನಿ, ಹಳದಿ ನೊಣದ ಕಾಟವಿದ್ದರೂಹೆಚ್ಚಿನ ಇಳುವರಿ ನೀಡುತ್ತಿವೆ.
ಬಸವರಾಜ ಹೊಂಗಲ್