ಮಹಾನಗರ: ಹಂಪಿ ಕನ್ನಡ ವಿವಿಯಲ್ಲಿ ಕೊಂಕಣಿ ಜನಪದ ಕಲೆಗಳ ತರಬೇತಿ ಕೋರ್ಸ್ ಆರಂಭಿಸುವ ಮಾತು ಕತೆ ನಡೆಯುತ್ತಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ ಹೇಳಿದರು.
ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆ ಮಿಯ ಸಹಯೋಗದಲ್ಲಿ ಶನಿವಾರ ನಡೆದ ಕೊಂಕಣಿ ಜಾನಪದ ಕಲೆ ಗುಮಟ್ ಇದರ 20 ದಿನಗಳ ಅವಧಿಯ ಉಚಿತ ತರಬೇತಿಯ ಸಮಾರೋಪದ ಅಧ್ಯಕ್ಷತೆ ವಹಿಸಿ, ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವನ್ನು ವಿತರಿಸಿ ಮಾತನಾಡಿದರು.
ಧಾರವಾಡದ ಕರ್ನಾಟಕ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆ ಯಾಗಿದ್ದು, ಅದರ ಸಹಾಯದಿಂದ ಹಂಪಿ ಕನ್ನಡ ವಿವಿಯಲ್ಲಿ ಗುಮಟ್ ಸಹಿತ ವಿವಿಧ ಕೊಂಕಣಿ ಜನಪದ ಕಲೆಗಳ ಬಗ್ಗೆ ತರಬೇತಿ ನೀಡುವ ಉದ್ದೇಶವಿದೆ ಎಂದರು.
ಗುಮಟ್ ತರಬೇತಿ ಪಡೆದವರು ಅಕಾಡೆಮಿಗೆ ಸಲಹೆಗಳನ್ನು ನೀಡಬಹು ದಾಗಿದ್ದು, ತರಬೇತಿ ಹೊಂದಿದವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪ್ರದರ್ಶನ ನೀಡುವಂತೆ ಆಹ್ವಾನವಿತ್ತರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂ| ಮೈಕಲ್ ಸಾಂತುಮಯೆರ್ ಸ್ವಾಗತಿ ಸಿದರು. ಜ. 21ರಿಂದ ಫೆ. 9ರ ತನಕ ನಡೆದ 20 ದಿನಗಳ ತರಬೇತಿಯಲ್ಲಿ 10 ಮಂದಿ ವಿದ್ಯಾರ್ಥಿನಿಯರು ಸಹಿತ ಒಟ್ಟು 40 ಜನ ವಿದ್ಯಾರ್ಥಿಗಳು ಭಾಗವಹಿಸಿ ದ್ದಾರೆ. ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ಗುಮಟ್ ಕಲೆಯ ಪ್ರದರ್ಶನ ನೀಡಲಿದ್ದಾರೆ ಎಂದರು.
‘ರಾಕ್ಣೊ` ಕೊಂಕಣಿ ಪತ್ರಿಕೆಯ ಸಂಪಾದಕ ವಂ| ವಲೇರಿಯನ್ ಫೆರ್ನಾಂಡಿಸ್, ‘ಕಿಟಾಳ್’ ಕೊಂಕಣಿ ವೆಬ್ ಪತ್ರಿಕೆಯ ಸಂಪಾದಕ ಎಚ್ಚೆಮ್ ಪೆರ್ನಾಳ್ ಮತ್ತು ಕೊಂಕಣಿ ಅಕಾಡೆಮಿಯ ಸದಸ್ಯ ಲಕ್ಷ್ಮಣ ಕೆ. ಪ್ರಭು ಮುಖ್ಯ ಅತಿಥಿಯಾಗಿದ್ದರು. ಶಿಬಿರಾರ್ಥಿಗಳ ಪರವಾಗಿ ಐರಿನ್ ಡಿ’ಸೋಜಾ ಮಾತನಾಡಿದರು.
ತರಬೇತಿ ನೀಡಿದ ಖ್ಯಾತ ಸಂಗೀತಗಾರ ಜೋಯಲ್ ಪಿರೇರಾ ಮತ್ತು ಸಂಯೋ ಜಕ ಪ್ರೇಮ್ ಮೊರಾಸ್ ಅವರನ್ನು ಗೌರವಿಸಲಾಯಿತು.