Advertisement

ಪೊಲೀಸರೊಂದಿಗೆ ಯುವಕರ ತಂಡ : ಮಂಗಳೂರಿನಿಂದ ಆರಂಭ

01:01 AM May 29, 2022 | Team Udayavani |

ಮಂಗಳೂರು : ಪೊಲೀಸ್‌ ಇಲಾಖೆಯ ಕರ್ತವ್ಯಕ್ಕೆ ಪೂರಕವಾಗಿ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಯುವಕರ ತಂಡವನ್ನು ರಚಿಸುವಂತೆ ಸೂಚಿಸಲಾಗಿದ್ದು, ಅದು ಮಂಗಳೂರಿನಿಂದಲೇ ಆರಂಭ ವಾಗಲಿದೆ ಎಂದು ಎಡಿಜಿಪಿ ಆಲೋಕ್‌ ಕುಮಾರ್‌ ಹೇಳಿದರು.

Advertisement

ಪೊಲೀಸರಿಗೆ ಖಾಕಿ ಒಂದೇ ಧರ್ಮ. ಖಾಕಿ ಹಾಕಿದ ಮೇಲೆ ಇಲಾಖೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ, ನಿಷ್ಪಕ್ಷವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಮಾತನಾಡಿ, ನಗರದಲ್ಲಿ ದುಬಾರಿ ಬಾಡಿಗೆ ದರವಿದ್ದು, ಪೊಲೀಸ ರಿಗೆ ವಸತಿಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈಗಾಗಲೇ 150 ವಸತಿಗೃಹಗಳ ನಿರ್ಮಾಣಕ್ಕೆ 50 ಕೋಟಿ ರೂ. ಪ್ರಸ್ತಾವನೆ ಮಾಡಲಾಗಿದೆ ಎಂದರು. ಡಿಸಿಪಿಗಳಾದ ಹರಿರಾಂ ಶಂಕರ್‌, ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next