Advertisement

Mangaluru: ವೆಲೆನ್ಶಿಯಾ-ಗೋರಿಗುಡ್ಡೆ ರಸ್ತೆ; ಎಲ್ಲೆಂದರಲ್ಲಿ ಹೊಂಡಗುಂಡಿ

02:46 PM Dec 02, 2024 | Team Udayavani |

ಮಹಾನಗರ: ನಗರದ ಕಂಕನಾಡಿಯ ವೆಲೆನ್ಶಿಯಾ ವೃತ್ತದಿಂದ ಗೋರಿಗುಡ್ಡ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಕಳೆದ ಒಂದು ವರ್ಷ ದಿಂದ ಸಂಪೂರ್ಣ ಹದಗೆಟ್ಟಿದೆ. ದಿನಕ್ಕೊಂದು ಇಲಾಖೆಯವರು ವಿವಿಧ ಕಾರಣಗಳನ್ನು ನೀಡಿ ರಸ್ತೆ ಅಗೆಯುತ್ತಿದ್ದಾರೆ. ಕಾಮಗಾರಿ ಮುಗಿದರೂ ರಸ್ತೆ ದುರಸ್ತಿಗೊಳಿಸಲು ಯಾರೂ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ರಸ್ತೆಯುದ್ದಕ್ಕೂ ಡಾಮರು ಕಿತ್ತು ಹೋಗಿದ್ದು ಅಲ್ಲಲ್ಲಿ ಹೊಂಡಗುಂಡಿಗಳಾಗಿದೆ. ಜಲ್ಲಿ ಕಲ್ಲುಗಳಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮಂಗಳೂರು ಹೊರವಲಯದ ತಲಪಾಡಿ, ದೇರಳಕಟ್ಟೆ, ತೊಕ್ಕೊಟ್ಟು ಕಡೆಗಳಿಂದ ನಗರಕ್ಕೆ ಬರುವ ನೂರಾರು ವಾಹನಗಳು ಪಂಪವೆಲ್‌ನ ವಾಹನ ದಟ್ಟಣೆ ತಪ್ಪಿಸಿಕೊಳ್ಳಲು ಈ ರಸ್ತೆ ಯನ್ನು ಬಳಸಿಕೊಳ್ಳುತ್ತವೆ. ಲಘು ವಾಹನಗಳಿಗೆ ನಗರಕ್ಕೆ ಆಗಮಿಸಲು ಇದು ಸನಿಹದ ದಾರಿಯೂ ಹೌದು. ಈ ರಸ್ತೆಯಲ್ಲಿ ಧಾರ್ಮಿಕ ಕೇಂದ್ರಗಳಿವೆ. ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಶಾಲಾ ಮಕ್ಕಳು ತೆರಳುತ್ತಿದ್ದಾರೆ. ಆದರೆ, ರಸ್ತೆಯ ಅಭಿವೃದ್ಧಿಗೆ ಯಾರೂ ಮುಂದಾಗುತ್ತಿಲ್ಲ.

ರಸ್ತೆ ಅವ್ಯವಸ್ಥೆ ಬಗ್ಗೆ ಪಾಲಿಕೆಗೆ ದೂರು ನೀಡಲಾಗಿದ್ದು, ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಶೀಘ್ರ ರಸ್ತೆ ದುರಸ್ಥಿ ಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀ ಯರ ಬೇಡಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next