Advertisement
ಎನ್‌ಇಪಿ ಸೆಮಿಸ್ಟರ್ ಪರೀಕ್ಷೆ ಇದೇ ಮೊದಲ ಬಾರಿಗೆ ನಡೆಯುವುದರಿಂದ ಯುಯುಸಿಎಂಎಸ್ ಸಾಫ್ಟ್ವೇರ್‌ನ ಸರ್ವರ್ ಸಮಸ್ಯೆ, ವಿದ್ಯಾರ್ಥಿಗಳ ದಾಖಲೆಗಳು ಅಪ್‌ಲೋಡ್ ಆಗದಿರುವುದು, ಪರೀಕ್ಷಾ ಶುಲ್ಕ ಪಾವತಿಯಲ್ಲಿ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಒತ್ತಡ ಸೃಷ್ಟಿಯಾಗಿದೆ. ಪರೀಕ್ಷೆ ಎದುರಿಸಲು ಕೊನೆಯ ಹಂತದಲ್ಲಿ ತಯಾರಿ ಮಾಡಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
Related Articles
Advertisement
ಆನ್‌ಲೈನ್ ಮೂಲಕ ಪಾವತಿಗೆ ವಿನಾಯಿತಿ? :
ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಒಟ್ಟು 31,358 ವಿದ್ಯಾರ್ಥಿಗಳು ಎನ್‌ಇಪಿ ಮೊದಲ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಆರಂಭಕ್ಕೆ ಕೆಲವು ಹಿಂದೆಯಷ್ಟೇ ವಿದ್ಯಾರ್ಥಿಗಳ ದಾಖಲಾತಿ ಸಲ್ಲಿಕೆ, ಪದವಿ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಸರಣಿ ರಜೆ ಇತ್ಯಾದಿಗಳಿಂದಾಗಿ ಕೊನೆಯ ಹಂತದಲ್ಲಿ ಕಾಲೇಜುಗಳಲ್ಲಿ ಗಡಿಬಿಡಿ ಆರಂಭವಾಗಿದೆ. ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕವೇ ನೀಡಬೇಕೆಂಬ ನಿಯಮದಿಂದಾಗಿ ಸಮಸ್ಯೆಯಾಗುತ್ತಿರುವುದನ್ನು ಮನಗಂಡ ಮಂಗಳೂರು ವಿ.ವಿ. ಈ ಬಾರಿ ಹಿಂದಿನಂತೆಯೇ ಪರೀಕ್ಷಾ ಶುಲ್ಕವನ್ನು ಪಡೆದು ಬಳಿಕ ಆನ್‌ಲೈನ್ ಅಪ್‌ಡೇಟ್ ಮಾಡಿಸುವ ಕುರಿತಂತೆಯೂ ಚಿಂತನೆ ನಡೆಸುತ್ತಿದೆ. ಈ ಮೂಲಕ ಯಾವುದೇ ವಿದ್ಯಾರ್ಥಿಗೂ ಪರೀಕ್ಷೆ ಬರೆಯಲು ಸಮಸ್ಯೆಯಾಗದಂತೆ ವಿ.ವಿ. ಕ್ರಮ ಕ್ರಗೊಳ್ಳಲಿದೆ.
ಈಗಾಗಲೇ ಪದವಿ ಕಾಲೇಜಿನ ಪರೀಕ್ಷೆ ನಡೆಯುತ್ತಿದೆ. ಈ ಮಧ್ಯೆ ಎನ್‌ಇಪಿಯ ಮೊದಲ ಸೆಮಿಸ್ಟರ್ ಪರೀಕ್ಷೆಗೆ ಸರ್ವ ಸಿದ್ಧತೆ ನಡೆಸಲಾಗಿದೆ. ಸರ್ವರ್ ಸಮಸ್ಯೆಯಿಂದ ಕೊನೆಯ ಹಂತದಲ್ಲಿ ಒತ್ತಡ ಎದುರಾಗಿದ್ದರೂ ಎಲ್ಲ ಕಾಲೇಜಿನಲ್ಲಿಯೂ ಸೂಕ್ತವಾಗಿ ಸ್ಪಂದಿಸಿ ಸಾಂಗವಾಗಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.– ಪ್ರೊ| ಪಿ.ಎಲ್. ಧರ್ಮ, ಕುಲಸಚಿವರು (ಪರೀಕ್ಷಾಂಗ), ಮಂಗಳೂರು ವಿ.ವಿ.
-ದಿನೇಶ್ ಇರಾ