Advertisement
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಸೂರು ಕಲ್ಪಿಸುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಇನ್ನಷ್ಟು ಮಂದಿಗೆ ಗುರುತಿನ ಚೀಟಿ ನೀಡಿ ನಗರದ ಹಲವು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣ ಮಾಡಲಾಗುವುದು. ಈ ಮೂಲಕ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟಕ್ಕೆ ಸ್ಪಂದಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ದೀನದಯಾಳ್ ಉಪಾಧ್ಯಾಯ್ ಅವರ ಕಲ್ಪನೆಯಂತೆ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್ ಮಾತನಾಡಿ, ಬೀದಿ ಬದಿ ವ್ಯಾಪಾ ರಿಗಳಿಗೆ ಆಶ್ರಯ ನೀಡುವ ಯೋಜನೆ ಇದಾಗಿದೆ. ಮಾಜಿ ಮೇಯರ್ಗಳು, ಆಡಳಿತ-ವಿಪಕ್ಷ ಸದಸ್ಯರು, ಅಧಿಕಾರಿಗಳು, ಸಂಘದ ಸದಸ್ಯರ ಸಹಕಾರದಿಂದ ಈ ಯೋಜನೆ ಸಕಾರವಾಗಿದೆ. ಇನ್ನಷ್ಟು ಕಡೆ ವ್ಯಾಪಾರ ವಲಯ ನಿರ್ಮಾಣಗೊಳಿಸಲು ಪಾಲಿಕೆ ಮುಂದಾಗಬೇಕಿದೆ ಎಂದು ಹೇಳಿದರು.
Related Articles
Advertisement
ಮೂಲ ಸೌಲಭ್ಯ ‘ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ನೀಡುವ ಉದ್ದೇಶ, ಗೌರವದ ಬದುಕು ನಡೆಸುವುದಕ್ಕೆ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣಗೊಂಡಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಬೀದಿ ಬದಿ ವ್ಯಾಪಾರ ಕಾನೂನು ಜಾರಿಗೆ ತಂದರು. ಈ ಮೂಲಕ ಹಲವು ರಾಜ್ಯದಲ್ಲಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣಗೊಂಡಿತು. ಸ್ಟೇಟ್ಬ್ಯಾಂಕ್ ಜನನಿಬಿಡಿ ಪ್ರದೇಶವಾಗಿದ್ದು, ಖಂಡಿತವಾಗಿಯೂ ಉತ್ತಮ ವ್ಯಾಪಾರ ಸಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ವ್ಯಾಪಾರ ವಲಯ ನಿರ್ಮಾಣದ ಜತೆ ಮೂಲಭೂತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಜತೆ ಮಾತುಕತೆ ನಡೆಸುತ್ತೇನೆ’ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.