Advertisement

Mangaluru: ಜರ್ಮನಿ ಪಾರ್ಲಿಮೆಂಟ್‌ ಪುಸ್ತಕದಲ್ಲಿ ಸ್ಪೀಕರ್‌ ಖಾದರ್‌ ಸಹಿ

03:34 PM Oct 11, 2024 | Team Udayavani |

ಮಂಗಳೂರು: ಜರ್ಮನ್‌ ಪ್ರವಾಸದಲ್ಲಿರುವ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಮತ್ತು ಅವರ ನಿಯೋಗ ಬುಧವಾರ ಜರ್ಮನಿಯ ಮ್ಯೂನಿಚ್‌ನಲ್ಲಿರುವ ಬವೇರಿಯನ್‌ ಸ್ಟೇಟ್‌ ಪಾರ್ಲಿಮೆಂಟ್‌ಗೆ ಭೇಟಿ ನೀಡಿ ಅಲ್ಲಿನ ಪಾರ್ಲಿಮೆಂಟ್‌ ವಿಷಯಗಳನ್ನು ತಿಳಿದುಕೊಂಡಿತು.

Advertisement

ಈ ಸಂದರ್ಭ ಪಾರ್ಲಿಮೆಂಟ್‌ ವಿಐಪಿ ಸಂದರ್ಶಕರ ಪುಸ್ತಕದಲ್ಲಿ ಯು.ಟಿ. ಖಾದರ್‌ ಸಹಿ ಮಾಡುವ ಮೂಲಕ ಇತಿಹಾಸ ಬರೆದರು.

ಬವೇರಿಯನ್‌ ಸ್ಟೇಟ್‌ ಪಾರ್ಲಿಮೆಂಟ್‌ ಅಧ್ಯಕ್ಷ ಐಲ್ಸ್‌ ಏಗ್ನರ್‌ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದರು. ಖಾದರ್‌ ಜತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್‌, ಅಶೋಕ್‌ ಕುಮಾರ್‌ ರೈ, ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next