Advertisement

Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್‌.ಧರ್ಮ

02:00 AM Oct 22, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌, ಮಂಗಳೂರು ನಗರ ಪೊಲೀಸ್‌ ಮತ್ತು ಕೆ.ಎಸ್‌.ಆರ್‌.ಪಿ.7ನೇ ಪಡೆ ವತಿಯಿಂದ ಜಂಟಿಯಾಗಿ ಪೊಲೀಸ್‌ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಸೋಮವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಜರಗಿತು.

Advertisement

ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಲ್‌.ಧರ್ಮ ಅವರು ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಗಡಿಯಲ್ಲಿ ನಮ್ಮ ಕಾಯುವ ಸೈನಿಕರಂತೆ, ಗಡಿಯೊಳಗೆ ನಮ್ಮ ರಕ್ಷಣೆಗೆ ಪೊಲೀಸ್‌ ಸಿಬಂದಿ ದಿನದ 24 ತಾಸು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದಾಗಿ ನಾವು ಶಾಂತಿ, ನೆಮ್ಮದಿಯಿಂದ ಜೀವಿಸುತ್ತೇವೆ. ಆದ್ದರಿಂದ ಕರ್ತವ್ಯದ ಸಮಯದಲ್ಲಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು 2023ರ ಸೆ.1ರಿಂದ 2024ರ ಆ.31ರ ವರೆಗೆ ಕರ್ತವ್ಯದ ವೇಳೆ ಹುತಾತ್ಮರಾದ ದೇಶದ 216 ಪೊಲೀಸ್‌ ಮತ್ತು ಭದ್ರತಾ ಸಿಬಂದಿಯ ಹೆಸರನ್ನು ವಾಚಿಸಿದರು. ಈ ಪೈಕಿ ರಾಜ್ಯದ 12 ಪೊಲೀಸರನ್ನೂ ಉಲ್ಲೇಖೀಸಿದರು.
ಪಶ್ಚಿಮ ವಲಯ ಪೊಲೀಸ್‌ ಉಪ ಮಹಾನಿರೀಕ್ಷಕ ಅಮಿತ್‌ ಸಿಂಗ್‌ ಮುಖ್ಯ ಅತಿಥಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಕೆಎಸ್‌ಆರ್‌ಪಿ 7ನೇ ಘಟಕದ ಕಮಾಂಡೆಂಟ್‌ ಬಿ.ಎಂ.ಪ್ರಸಾದ್‌, ಹಿರಿಯ ಪೊಲೀಸ್‌ ಅಧಿಕಾರಿಗಳು, ಕೋಸ್ಟ್‌ಗಾರ್ಡ್‌, ಹೋಮ್‌ಗಾರ್ಡ್‌, ಅರಣ್ಯ ಇಲಾಖೆ ಅಧಿಕಾರಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next