Advertisement

ಶಬ್ದ ಮಾಲಿನ್ಯ : 1001 ಧಾರ್ಮಿಕ,ಇತರ ಸಂಸ್ಥೆಗಳಿಗೆ ಮಂಗಳೂರು ಪೊಲೀಸ್ ನೋಟಿಸ್

04:31 PM Apr 06, 2022 | Team Udayavani |

ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಮೈಕ್ ಬಳಕೆ ಮಾಡುವ 1001 ಸಂಸ್ಥೆಗಳನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಲಾಗಿದ್ದು ನೋಟೀಸ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ‌ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Advertisement

ಪರಿಸರ ಸಚಿವಾಲಯದ ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸುವಂತೆ ಜ್ಞಾಪಿಸಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಸುಮಾರು 1001 ಧಾರ್ಮಿಕ, ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಏಪ್ರಿಲ್ 6 ರಂದು ಪೊಲೀಸ್ ನೋಟಿಸ್ ಜಾರಿ ಮಾಡಲಾಗಿದೆ.ಕಳೆದ ಕೆಲವು ದಿನಗಳಿಂದ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕುವ ಕುರಿತಾಗಿ ವಿವಾದ ನಡೆಯುತ್ತಿರುವ  ವೇಳೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವ ಸ್ಥಳಗಳು, ಮಾಲ್‌ಗಳು ಮತ್ತು ಜನಪ್ರಿಯ ತಿನಿಸುಗಳ ಮಳಿಗೆಗಳಿಗೆ ಆಯಾ ಪೋಲೀಸ್ ಠಾಣೆಗಳಿಂದ ಸೂಚನೆಗಳನ್ನು ನೀಡಲಾಗಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯವು ಶಬ್ದ ಮಾಲಿನ್ಯ ನಿಯಂತ್ರಣ ನಿಯಮ 2000 ತಿದ್ದುಪಡಿ ಮಾಡಿದ -2010 ಪರಿಸರ ಸಂರಕ್ಷಣಾ ಕಾಯಿದೆ 1986 ರ ಅಡಿಯಲ್ಲಿ ಅಧಿಸೂಚಿಸಿದ ಶಬ್ದ ಮಾನದಂಡಗಳನ್ನು ನೋಟಿಸ್‌ಗಳು ಉಲ್ಲೇಖಿಸಿವೆ.

ಹಗಲಿನ ಸಮಯದಲ್ಲಿ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಇಂದಿನಿಂದಲೇ ಅನ್ವಯವಾಗಲಿದೆ. ಈ ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

Advertisement

ಶಬ್ದದ ಮಿತಿ ಎಷ್ಟು?

ಕೈಗಾರಿಕಾ ಪ್ರದೇಶಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ 75 ಡೆಸಿಬಲ್ ಮತ್ತು ರಾತ್ರಿಯ ಸಮಯ10 ರಿಂದ ಬೆಳಿಗ್ಗೆ 6 ರವರೆಗೆ 70 ಡೆಸಿಬಲ್.ವಾಣಿಜ್ಯ ಪ್ರದೇಶಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ 65 ಡೆಸಿಬಲ್ ಮತ್ತು ರಾತ್ರಿಯ ಸಮಯ10 ರಿಂದ ಬೆಳಿಗ್ಗೆ 6 ರವರೆಗೆ 55 ಡೆಸಿಬಲ್, ವಸತಿ ಪ್ರದೇಶಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ 55 ಡೆಸಿಬಲ್ ಮತ್ತು ರಾತ್ರಿಯ ಸಮಯ10 ರಿಂದ ಬೆಳಿಗ್ಗೆ 6 ರವರೆಗೆ 45 ಡೆಸಿಬಲ್, ಮೌನ ವಲಯದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ 50 ಡೆಸಿಬಲ್ ಮತ್ತು ರಾತ್ರಿಯ ಸಮಯ10 ರಿಂದ ಬೆಳಿಗ್ಗೆ 6 ರವರೆಗೆ 40 ಡೆಸಿಬಲ್ ಶಬ್ದವನ್ನು ಮಾತ್ರ ಕೇಳಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next