Advertisement

Mangaluru: ನಿವೃತ್ತ ಪಿಡಿಒ ಕೊಲೆ ಆರೋಪಿ ಬಂಧನ

11:58 PM Sep 17, 2024 | Team Udayavani |

ಮಂಗಳೂರು: ಮಹಿಳೆಯರೊಂದಿಗೆ ಸ್ನೇಹದ ನಾಟಕವಾಡಿ ಅವರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ, ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಕಾರ್ಕಳ ಬೆಳ್ಮಣ್ಣಿನ ರೋಹಿತ್‌ ಮಥಾಯಿಸ್‌ (33) ಬಂಧಿತ ಆರೋಪಿ. ಈತ 2021ರ ಡಿಸೆಂಬರ್‌ ತಿಂಗಳ ಮೊದಲ ವಾರದಿಂದ ಕುಲಶೇಖರದ ಮಹಿಳೆಯೋರ್ವರ ಜತೆ ಕೆಲವು ತಿಂಗಳು ಸಂಪರ್ಕವನ್ನಿಟ್ಟುಕೊಂಡು ಆಕೆಯೊಂದಿಗೆ ವಾಸವಿದ್ದು, ಬಳಿಕ ಆಕೆಯ ಮನೆಯಿಂದಲೇ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಚಿನ್ನಾಭರಣಕ್ಕಾಗಿ ಕೊಲೆ
ರೋಹಿತ್‌ ಮಥಾಯಿಸ್‌ 2019ರಲ್ಲಿ ಬೆಳ್ಮಣ್ಣಿನಲ್ಲಿ ನೆರೆಮನೆಯವರಾದ ನಿವೃತ್ತ ಪಿಡಿಒ ಭರತಲಕ್ಷ್ಮೀ ಅವರನ್ನು ಇತರರೊಂದಿಗೆ ಸೇರಿಕೊಂಡು ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ದೇಹವನ್ನು ಬಾವಿಗೆ ಹಾಕಿದ್ದ. ಜೈಲುವಾಸ ಅನುಭವಿಸಿ ಅನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಜಾಲತಾಣದ ಮೂಲಕ ಗೆಳೆತನ
ಆರೋಪಿ ಫೇಸ್‌ಬುಕ್‌ನಂತಹ ಜಾಲತಾಣಗಳ ಮೂಲಕ ಮಹಿಳೆಯರ ಗೆಳೆತನ ಮಾಡಿ ವಿಶ್ವಾಸಗಳಿಸುತ್ತಿದ್ದ. ಇದೇ ರೀತಿ ಕುಲಶೇಖರದ ಮಹಿಳೆಯ ಸಂಪರ್ಕವೂ ಅಗಿ ಆಕೆಯ ಜತೆ ವಾಸವಿದ್ದು, ಕಳವು ಮಾಡಿಕೊಂಡು ಹೋಗಿದ್ದ.

ಮತ್ತೊಂದು ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದ
ಆರೋಪಿ ರೋಹಿತ್‌ ಕಳವಿನ ಬಳಿಕ ಮುಂಬಯಿಗೆ ತೆರಳಿದ್ದ. ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಲು ಯೋಜನೆ ರೂಪಿಸಿಕೊಂಡಿದ್ದ. ಓರ್ವ ಮಹಿಳೆ ಈತನ ಬಲೆಗೆ ಬಿದ್ದಿದ್ದಳು. ಅನಂತರ ಆಕೆಗೆ ಸಂಶಯ ಬಂದಿತ್ತು. ಆಕೆಯ ಮೂಲಕವೇ ಉಪಾಯವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.