Advertisement
ರಾಜ್ಯ ಬಿಜೆಪಿ ಸರಕಾರ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಠ್ಯವನ್ನು ಕೈಬಿಟ್ಟಿರುವ ಮಾಹಿತಿ ದೊರೆತಿದೆ. ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರ ತಣ್ತೀ,ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೂ ತಿಳಿಸುವ ಅಗತ್ಯವಿದೆ. ಅವರ ಕುರಿತ ಪಠ್ಯವನ್ನು ಕೈಬಿಡಬಾರದು. ಅಂತೆಯೇ ಬಸವಣ್ಣ, ಪೆರಿಯಾರ್ ಅವರ ಕುರಿತಾದ ಪಠ್ಯ ವನ್ನೂ ಕೈಬಿಡಬಾರದು. ಒಂದು ವೇಳೆ ಕೈಬಿಟ್ಟಿದ್ದರೆ ಸೇರ್ಪಡೆ ಗೊಳಿಸಬೇಕು ಎಂದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ನಾರಾಯಣ ಗುರುಗಳಿಗೆ ಹೆಜ್ಜೆ ಹೆಜ್ಜೆಗೂ ಅವ ಮಾನ ಮಾಡುತ್ತಾ ಬಂದಿವೆ. ಗಣರಾಜ್ಯೋತ್ಸವ ಮೆರ ವಣಿಗೆಯಲ್ಲಿ ನಾರಾಯಣ ಗುರು ಗಳ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಮಂಗಳೂರು ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು, ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಇದೀಗ ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳ ವಿಚಾರದ ಪಠ್ಯ ಕೈಬಿಡುವ ಮೂಲಕ ಮತ್ತೂಂದು ಅವಮಾನ ಮಾಡಲಾಗುತ್ತಿದೆ ಎಂದು ಲೋಬೋ ಹೇಳಿದರು. ಪ್ರಮುಖರಾದ ಉಮೇಶ್ ದಂಡಕೇರಿ, ಅಬ್ದುಲ್ ಸಲೀಂ, ಸಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಟಿ.ಕೆ. ಸುಧೀರ್, ರಮಾ ನಂದ್ ಪೂಜಾರಿ, ಚಂದ್ರಕಲಾ ಜೋಗಿ, ಹೇಮಂತ್ ಪೂಜಾರಿ, ಸವಾನ್ ಜೆಪ್ಪು ಪತ್ರಿಕಾಗೋಷ್ಠಿ ಯಲ್ಲಿದ್ದರು.
Related Articles
ಸರಕಾರಕ್ಕೆ ಬೇಡವಾದರೇ?: ಹರೀಶ್ ಕುಮಾರ್
ಮಂಗಳೂರು: ಪ್ರಧಾನಿನರೇಂದ್ರ ಮೋದಿಯವರಿಗೆ ಪ್ರೇರಣೆಯಾದ ಬ್ರಹ್ಮಶ್ರೀ ನಾರಾಯಣ ಗುರುಗಳು ರಾಜ್ಯ ಸರಕಾರಕ್ಕೆ ಬೇಡವಾದರೇ? ಎಸೆಸೆಲ್ಸಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಕೈಬಿಟ್ಟಿದ್ದು ಖಂಡನೀಯ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟನೆಯಲ್ಲಿ ಹೇಳಿದ್ದಾರೆ.
Advertisement
2022ರ ಎ. 4ರಂದು ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿಯವರು “ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ ಜಗತ್ತಿನ ಯಾವುದೇ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದಿದ್ದರು. ಆದರೆ ಅವರದೇ ಆಡಳಿತ ನಡೆಸುವ ರಾಜ್ಯ ಸರಕಾರ ನಾರಾಯಣ ಗುರುಗಳ ಪಠ್ಯವನ್ನೇ ಕೈಬಿಟ್ಟಿದೆ. ಹಾಗಾದರೆ ಮೋದಿ ಹೇಳಿಕೆ ನಾಟಕೀ ಯವೇ? ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಶಿಕ್ಷಣ ಸಚಿವರು ಅಧಿಕೃತ ಹೇಳಿಕೆ ನೀಡಬೇಕು. ಒಂದು ವೇಳೆ ಮಹಾನ್ ನಾಯಕರ ಪಠ್ಯ ಕೈಬಿಟ್ಟಿದ್ದರೆ ಕೂಡಲೇ ಸೇರ್ಪಡೆ ಮಾಡಬೇಕು ಎಂದು ತಿಳಿಸಿದ್ದಾರೆ.
ಸೊರಕೆ ಖಂಡನೆಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳು, ಕ್ರಾಂತಿಕಾರಿ ಹೋರಾಟ ಗಾರ ಶಹೀದ್ ಭಗತ್ ಸಿಂಗ್, ಮಹಾನ್ ತತ್ವಜ್ಞಾನಿ ಬಸವಣ್ಣ ಮತ್ತು ಸಮಾಜ ಸುಧಾರಕ ರಾಮಸ್ವಾಮಿ ಪೆರಿಯಾರ್ ಅವರ ಜೀವನ, ಮತ್ತು ವಿಚಾರಧಾರೆಗಳ ಬಗ್ಗೆ ಇದ್ದ ಪಾಠವನ್ನು ರಾಜ್ಯ ಸರಕಾರವು ಪಠ್ಯ ಪುಸ್ತಕದಿಂದ ಕೈಬಿಟ್ಟಿರುವುದನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಖಂಡಿಸಿದ್ದಾರೆ.