Advertisement

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

01:38 AM Sep 23, 2024 | Team Udayavani |

ಮಂಗಳೂರು: ಪಿಜಿ ವೈದ್ಯನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಎಲ್ಲೋ ಬಿದ್ದು, ಮಣ್ಣಿನಿಂದ ಆವೃತವಾಗಿದ್ದ ಬಟ್ಟೆಯಲ್ಲೇ ಆಸ್ಪತ್ರೆಯ ಐಸಿಯು ಪ್ರವೇಶಿಸಿರುವ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

Advertisement

ಆಸ್ಪತ್ರೆಯ ಐಸಿಯುನಲ್ಲಿ ಆತನನ್ನು ನೋಡಿದ ಅಲ್ಲಿದ್ದ ರೋಗಿಯ ಕಡೆಯವರು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರನ್ನು ಕರೆಯುವುದಾಗಿಯೂ ಹೇಳಿದರು. ಕೊನೆಗೆ ಆಸ್ಪತ್ರೆಯ ಭದ್ರತ ವಿಭಾಗದ ಸಿಬಂದಿ ಆತನನ್ನು ಹೊರಗೆ ಕಳುಹಿಸಿದ್ದಾರೆ. ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next