Advertisement
ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ದರುಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ದರು. ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳ ಬಗ್ಗೆ, ಅವರ ಶ್ರೇಷ್ಠತೆ ಬಗ್ಗೆ ಪ್ರಧಾನಿ, ಕೇಂದ್ರ ಸರಕಾರ, ರಾಜ್ಯ ಸರಕಾರ, ಮುಖ್ಯಮಂತ್ರಿ ಹಾಗೂ ನಮ್ಮ ಪಕ್ಷ ಗೌರವಯುತವಾಗಿ ನಡೆದುಕೊಳ್ಳುತ್ತಿದೆ ಎಂಬುದನ್ನು ನಾನು ರಾಜಕೀಯ ಮೀರಿ ಪ್ರೀತಿಸುವ ನಾಯಕ ಪೂಜಾರಿಯವರಿಗೆ ಮನವರಿಕೆ ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
Related Articles
Advertisement
ಗುರುಗಳ ಬಗ್ಗೆ ಪ್ರಧಾನಿ ಮೋದಿ ಯವರಿಗೆ ವಿಶೇಷ ಗೌರವವಿದೆ. ಅವರು ಪ್ರಧಾನಿಯಾದ ಸ್ವಲ್ಪವೇ ಸಮಯದಲ್ಲಿ ಗುರುಗಳ ಆಶ್ರಮ ಶಿವಗಿರಿಗೆ ಭೇಟಿ ನೀಡಿ ಗುರುಗಳ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು.
ಮಂಗಳೂರು ದಸರಾ ಉದ್ಘಾಟನೆಗೆ ಆಗ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯನವರನ್ನು ಜನಾರ್ದನ ಪೂಜಾರಿ ಆಹ್ವಾನಿಸಿ ದ್ದರು. ಆದರೆ ಸಿದ್ದರಾಮಯ್ಯ ಮಂಗಳೂರಿಗೆ ಬಂದಿದ್ದರೂ ದಸರಾ ಉದ್ಘಾಟನೆಗೆ ಬರದಂತೆ ತಡೆದಿರುವಲ್ಲಿ ಯಾರ ಕೈವಾಡ ಇದೆ ಎಂಬುದನ್ನು ಐವನ್ ಡಿ’ಸೋಜಾ ಹೇಳಬೇಕಾಗಿದೆ ಎಂದರು.
ಸಚಿವರನ್ನು ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿ ರವಿಶಂಕರ ಮಿಜಾರ್ ಸ್ವಾಗತಿ ಸಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಸತೀಶ್ ಕುಂಪಲ, ರಾಧಾಕೃಷ್ಣ ಇದ್ದರು.
ನಿಲ್ಲಿಸದಿದ್ದರೆ ಸುಮ್ಮನಿರೆವು: ಹರಿಕೃಷ್ಣ ಬಂಟ್ವಾಳ್ಮಂಗಳೂರು: ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವ ಕಾಶ ಸಿಕ್ಕಿಲ್ಲ ಎಂಬುದನ್ನು ವಿವಾದ ವಾಗಿ ಮಾಡಿರುವುದು ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಕುತಂತ್ರ, ಇದನ್ನು ನಿಲ್ಲಿಸದಿದ್ದರೆ ನಾವು ಸುಮ್ಮನಿರುವು ದಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ಗುರುಗಳ ಕೇಂದ್ರ ಸ್ಥಳ ಶಿವಗಿರಿ ಯಿಂದ ಈ ವಿವಾದ ಸೃಷ್ಟಿಯಾಗಿಲ್ಲ. ಬದಲಾಗಿ ಕಮ್ಯೂನಿಸ್ಟರ ಕುತಂತ್ರ ಮತ್ತು ಅತಂತ್ರ ಸ್ಥಿತಿಯಲ್ಲಿರುವ ರಾಜ್ಯ ಕಾಂಗ್ರೆಸ್‌ನ ಷಡ್ಯಂತ್ರದಿಂದ ಇದನ್ನು ವಿವಾದವಾಗಿ ಮಾಡಲಾಗಿದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು. ಗುರುಗಳ ಸ್ತಬ್ಧ ಚಿತ್ರದ ಬದಲಿಗೆ ಶಂಕಾರಾಚಾರ್ಯರ ಸ್ತಬ್ಧಚಿತ್ರವನ್ನು ರಚಿಸುವಂತೆ ಕೇಂದ್ರ ಸರಕಾರ ಹೇಳಿದೆ ಎಂದು ಅಪಪ್ರಚಾರ ಮಾಡ ಲಾಗುತ್ತಿದೆ. ಈ ಬಗ್ಗೆ ಲಿಖೀತ ದಾಖಲೆ ಅಥವಾ ಸುತ್ತೋಲೆ ಇದ್ದರೆ ಕಾಂಗ್ರೆಸ್ ತೋರಿಸಬೇಕು ಎಂದರು. 2016ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಸಿದ್ದ ರಾಮಯ್ಯ ಮಂಗಳೂರಿಗೆ ಭೇಟಿ ನೀಡಿದಾಗ ಸಿದ್ದ ರಾಮಯ್ಯ ಅವರು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡದೆ ತೆರಳಿದ್ದರು. ಲೇಡಿಹಿಲ್ ವೃತ್ತಕ್ಕೆ ಗುರುಗಳ ಹೆಸರನ್ನು ಇಡುವಂತೆ ಮನಪಾ ಸಭೆಯಲ್ಲಿ ನಿರ್ಣಯಿಸಿದಾಗ ಕಾಂಗ್ರೆಸ್‌ನ ನಾಯಕರು ಆಕ್ಷೇಪಿಸಿದ್ದರು. ಇದು ಗುರುಗಳಿಗೆ ಮಾಡಿದ ಅಗೌರವ ಅಲ್ಲವೇ ಎಂದು ಪ್ರಶ್ನಿಸಿದರು. ಜನಾರ್ದನ ಪೂಜಾರಿಯವರ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ ಅಲ್ಲಿ ಯಾವುದೇ ಪಕ್ಷಗಳ ಧ್ವಜ ಇರಬಾರದು. ಪೂಜಾರಿಯವರು 40 ವರ್ಷ ರಾಜಕೀಯದಲ್ಲಿದ್ದವರು. ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧಚಿತ್ರಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದು ಅವರಿಗೂ ಗೊತ್ತಿದೆ. ಈಗ ಯಾರೋ ಕುಮ್ಮಕ್ಕು ನೀಡಿ ಈ ಮೆರವಣಿಗೆಗೆ ಪ್ರೇರೇಪಿಸಿದ್ದಾರೆ. ಕಾಂಗ್ರೆಸ್‌ನ ಅಸ್ತಿತ್ವ ಮುಗಿಯುತ್ತ ಬಂದಿರುವ ಕಾರಣ ಈಗ ಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ರಾಧಾಕೃಷ್ಣ, ವಿಜಯ ಕುಮಾರ್, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು. 2023ರ ಪರೇಡ್‌ನಲ್ಲಿ ಗುರುಗಳ ಸ್ತಬ್ಧಚಿತ್ರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, 2023ರ ಹೊಸದಿಲ್ಲಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾಜ್ಯದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.