ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಮತ್ತು ಎಂಎಲ್ ಸಿ ಬಿ.ಎಂ ಫಾರೂಖ್ ಸಹೋದರ ಮುಮ್ತಾಜ್ ಅಲಿ ಅವರು ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಂಗಳೂರಿನ ಕೂಳೂರು ಸೇತುವೆ ಬಳಿ ಅಲಿ ಅವರ ಕಾರು ಅಪಘಾಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಮ್ತಾಜ್ ಅಲಿ ಅವರ ಮನೆಯವರು ಕಾವೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.
ಮಂಗಳೂರು ಲೈನ್ ಆಂಡ್ ಮರೈನ್ ಇಂಡಸ್ಟ್ರೀಸ್ ಸಂಸ್ಥೆಯನ್ನು ನಡೆಸುತ್ತಿದ್ದ ಮುಮ್ತಾಜ್ ಅಲಿ ಅವರು ರವಿವಾರ (ಅ.06) ಮುಂಜಾನೆ 3.30ರ ಸುಮಾರಿಗೆ ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ನಲ್ಲಿ ವಾಯ್ಸ್ ಮೆಸೇಜ್ ಹಾಕಿದ್ದರು. ಮುಂಜಾನೆ 4.40ಕ್ಕೆ ಮೆಸೇಜ್ ನೋಡಿದ ಮಗಳು ಮುಮ್ತಾಜ್ ಅಲಿ ಅವರನ್ನು ಹುಡುಕಿ ಹೊರಟಾಗ ಕೂಳೂರು ಸೇತುವೆ ಬಳಿ ಅಪಘಾತಗೊಂಡ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಆದರೆ ಕಾರಿನಲ್ಲಿ ಅಲಿ ಇರದ ಕಾರಣ ನಾಪತ್ತೆ ದೂರು ನೀಡಿದ್ದಾರೆ.
ಕೂಳೂರು ನದಿಯಲ್ಲಿ ಹುಡುಕು ಕಾರ್ಯಾಚರಣೆ ನಡೆಸಲಾಗುತ್ತಿದೆ.