Advertisement

Mangaluru: ಮಮ್ತಾಜ್ ಅಲಿ ಪ್ರಕರಣ: ಮಹಿಳೆ ಸಹಿತ ಆರು ಮಂದಿ ವಿರುದ್ದ ಎಫ್ಐಆರ್

11:02 AM Oct 07, 2024 | Team Udayavani |

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್‌ ಬಾವಾ ಅವರ ಸಹೋದರ, ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್‌ಮನ್ ಮಮ್ತಾಜ್ ಅಲಿ (Mamtaz Ali) ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಹಿತ ಆರು ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ.

Advertisement

ಮಹಿಳೆ ಜತೆ ಅಲಿಯವರಿಗೆ ಅಕ್ರಮ ಸಂಬಂಧವಿತ್ತೆಂದು ಅಪಪ್ರಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ಆರು ಜನರ ವಿರುದ್ದ ದೂರು ದಾಖಲು ಮಾಡಲಾಗಿದೆ.

ರೆಹಮತ್ ಎಂಬ ಮಹಿಳೆ ಮತ್ತು ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಹೆಬ್, ಸೀರಜ್ ಆರೋಪಿಗಳು.

ಮಮ್ತಾಜ್‌ ಅಲಿ ಅವರಿಗೆ ಅಕ್ರಮ ಸಂಬಂಧ ಇತ್ತು ಎಂದು ಅಪಪ್ರಚಾರ ಮಾಡಿ ಈ ಆರೋಪಿಗಳು ಈಗಾಗಲೇ 50 ಲಕ್ಷ ರೂ ಪಡೆದುಕೊಂಡಿದ್ದರು. ಅಲ್ಲದೆ ಇದೀಗ ಮತ್ತೆ 50 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

Advertisement

ಆರೋಪಿಗಳು ಅಪಪ್ರಚಾರ, ಬ್ಲ್ಯಾಕ್ ಮೇಲ್ ಮೂಲಕ ಮಮ್ತಾಜ್ ಅಲಿಯವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರೆಂದು ಅಲಿ ಸಹೋದರನ ದೂರಿನನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ.

ಅಲಿ ನಾಪತ್ತೆ

ಮಮ್ತಾಜ್‌ ಅವರು ರವಿವಾರ ಮುಂಜಾನೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರು ಕೂಳೂರು ಸೇತುವೆಯ ಬಳಿ ಅಪಘಾತಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಬೈಲ್‌, ಕಾರಿನ ಕೀ ಅಲ್ಲಿಯೇ ಇದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಮಮ್ತಾಜ್‌ ಅಲಿ ಮೃತದೇಹ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next