Advertisement
ದೂರುದಾರರಿಗೆ ಅಪರಿಚಿತರು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದರು. ಅದರಲ್ಲಿ ಹೆಚ್ಚಿನ ಲಾಭ ಬರುವ ಹೂಡಿಕೆಯ ಕುರಿತ ಮಾಹಿತಿ ಇತ್ತು. ಅನಂತರ ದೂರುದಾರರ ಖಾತೆಗೆ ಲಿಂಕ್ ಬಂದಿದ್ದು ಅದರ ಮೂಲಕ ಅವರ ನೋಂದಣಿ ಮಾಡಿಸಿಕೊಳ್ಳಲಾಗಿತ್ತು. ಅನಂತರ ಆ ಗ್ರೂಪ್‌ನಲ್ಲಿ ಬಂದ ಸೂಚನೆಗಳನ್ನು ನಂಬಿ ಹಣ ಹೂಡಿಕೆ ಮಾಡಿದ್ದರು. ಅವರಿಗೆ ಕಳುಹಿಸಲಾಗಿದ್ದ ಆ್ಯಪ್‌ನಲ್ಲಿ ಅವರ ಹೂಡಿಕೆಯ ವ್ಯವಹಾರ, ಲಾಭಾಂಶದ ವಿವರಗಳು ಗೋಚರಿಸುತ್ತಿತ್ತು. ಇದರಿಂದಾಗಿ ವಿಶ್ವಾಸ ಮೂಡಿ ಮತ್ತಷ್ಟು ಹೂಡಿಕೆಗೆ ಆಸಕ್ತಿ ವಹಿಸಿದ್ದರು. ಅಲ್ಲದೆ ಗ್ರೂಪ್‌ನಲ್ಲಿ ಇನ್ನಷ್ಟು ಹೊಸ ಹೂಡಿಕೆಯ ಬಗ್ಗೆ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಹಾಗಾಗಿ ಅವರು ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಹೀಗೆ ತನ್ನ ಖಾತೆಯಿಂದ, ಮಗಳ ಖಾತೆಯಿಂದ ಮತ್ತು ಅಳಿಯನ ಖಾತೆಯಿಂದ ಒಟ್ಟು 21 ಲ.ರೂ.ಗಳಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದರು.
Advertisement
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
08:38 PM Nov 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.