Advertisement
ಮಣ್ಣು ಕುಸಿತವಾಗಿ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲಿ ಕೇಳಿಬಂದ ಮಾತಿದು. ಸತತ 7 ಗಂಟೆಗಳ ಕಾರ್ಯಾಚರಣೆ ಬಳಿಕ ಚಂದನ್ ಕುಮಾರ್ ಅವರ ಶವವನ್ನು ಹೊರ ತೆಗೆದಾಗ ಸುತ್ತಲಿದ್ದ ಸಹ ಕಾರ್ಮಿಕರು, ಚಂದನ್ ಅವರ ಸ್ನೇಹಿತರ ದುಃಖದ ಕಟ್ಟೆ ಒಡೆಯಿತು. ಬಿಕ್ಕಿ ಬಿಕ್ಕಿ ಅಳತೊಡಗಿದರು.
Related Articles
Advertisement
ಅದೃಷ್ಟ ಕೈ ಬಿಡಲಿಲ್ಲಸ್ಥಳೀಯ ಕಾರ್ಮಿಕರು ಹೇಳುವಂತೆ, ರಾಜ್ ಕುಮಾರ್ ಕೆಲಸಕ್ಕೆ ಹೊಸಬ. ತಮ್ಮ ಊರು ಬಿಹಾರದಲ್ಲಿ ಕೂಲಿ ಕಾರ್ಮಿಕನಾಗಿದ್ದ ರಾಜ್ ಕುಮಾರ್ ಮೂರು ತಿಂಗಳ ಹಿಂದಷ್ಟೇ ಇಲ್ಲಿನ ಗುಂಪಿನೊಂದಿಗೆ ಕೆಲಸಕ್ಕೆ ಸೇರಿದ್ದನಂತೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. “ರಾಜ್‌ಕುಮಾರ್ ಮೂರು ತಿಂಗಳ ಹಿಂದಷ್ಟೇ ನಮ್ಮ ಜತೆ ಬಂದಿದ್ದ. ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಾನಸಿಕವಾಗಿ ಅಸ್ವಸ್ಥರಾಗಿರುವ ತಂದೆ ಹಾಗೂ ತಾಯಿಯನ್ನು ನೋಡಿಕೊಳುವ ಹೊಣೆ ಅವನದಾಗಿತ್ತು. ಕೆಲವೇ ದಿನಗಳಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸದ್ಯ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಅದೇ ಅದೃಷ್ಟ’ ಎನ್ನುತ್ತಾರೆ ಅವರು. ರಾಜ್ ಕುಮಾರ್ ಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಅಗತ್ಯವಿದೆ ಎನ್ನಲಾಗಿದೆ. “ಮೂರು ತಿಂಗಳ ವಿಶ್ರಾಂತಿ ತೀರಾ ಅವಶ್ಯ. ಆ ಬಳಿಕ ನೋಡಬೇಕು’ ಎನ್ನುತ್ತಾರೆ ರಾಜ್ ಕುಮಾರ್ ಸಂಬಂಧಿ ಭುಲನ್ ಸಿಂಗ್. ಮಳೆಗಾಲದ ಕಾಮಗಾರಿ ಇರಲಿ ಎಚ್ಚರ
ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಮಳೆಗಾಲ ದಲ್ಲಿಯೂ ಕಟ್ಟಡ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮಣ್ಣು ಕುಸಿತದಂತಹ ಘಟನೆ ನಡೆಯು ತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪವಿದೆ. ಹೆಚ್ಚು ಮಳೆ ಬರುವ ದಿನಗಳಲ್ಲಿ ಇಂತಹ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬಾರದು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಭೂಕುಸಿತವಾಗಿ ಕಾರ್ಮಿಕರ ಸಾವು: ಹಿಂದಿನ ಪ್ರಕರಣಗಳು
-2007ರ ಡಿಸೆಂಬರ್ 17ರಂದು ಕಾವೂರಿನ ಬಳಿ ಆವರಣ ಗೋಡೆ ಕೆಲಸಕ್ಕೆಂದು ಅಗೆಯುವಾಗ ಭೂಕುಸಿತವಾಗಿ ಕೊಪ್ಪಳ ಜಿಲ್ಲೆಯ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು.
-2015ರ ಜುಲೆ„ 14ರಂದು ಸಂಜೆ ಫರಂಗಿಪೇಟೆ ಗ್ರಾ.ಪಂ. ಕಚೇರಿ ಬಳಿ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಯವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ಬರೆ ಕುಸಿದು ಮೂವರು ಸಾವನ್ನಪ್ಪಿದ್ದರು.
-2019ರ ಡಿ.7ರಂದು ಒಡಿಯೂರು ಬಳಿ ಗುಡ್ಡ ಅಗೆಯುತ್ತಿದ್ದಾಗ ಅದರ ಒಂದು ಭಾಗ ಕುಸಿದು ಬಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದರು.
-2012ರಲ್ಲಿ ಮಂಗಳೂರಿನ ದೇರೆಬೈಲ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ತಡೆಗೋಡೆ ಕೆಲಸದಲ್ಲಿ ತೊಡಗಿದ್ದವರ ಮೇಲೆ ಬೃಹತ್ ಬರೆ ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಆರು ಮಂದಿಯನ್ನು ರಕ್ಷಿಸಲಾಯಿತು.
-2020ರ ಫೆ.28ರಂದು ಬಂಟ್ಸ್‌ಹಾಸ್ಟೆಲ್ ಸಮೀಪದ ಕರಂಗಲ್ಪಾಡಿ ಜಂಕ್ಷನ್ ಬಳಿ ಮಧ್ಯಾಹ್ನ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ ತಡೆಗೋಡೆ ಸಮೇತ ಭೂಕುಸಿತ ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ
ಮಳೆಗಾಲ ಮುಗಿಯುವವರೆಗೆ ಕಟ್ಟಡದ ಕಾಮಗಾರಿ ನಡೆಸಬಾರದು. ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿ ಗಳನ್ನು ಅಗತ್ಯ ಮುನ್ನೆ ಚ್ಚರಿಕೆ ಕ್ರಮದೊಂದಿಗೆ ಕಾಮಗಾರಿ ನಿಲ್ಲಿಸಬೇಕು. ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣ ಕಾಯ್ದೆಯಡಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಎಚ್ಚರಿಕೆ ನೀಡಿದ್ದಾರೆ.